IPL 2026: 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ ಭಾರತದ ಇಬ್ಬರು ಆಟಗಾರರು
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಬರೋಬ್ಬರಿ 1355 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಿದ್ದು, ಇದಾದ ಬಳಿಕ ಫೈನಲ್ ಪಟ್ಟಿ ರಿಲೀಸ್ ಆಗಲಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಟಗಾರರು ಮಾತ್ರ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Updated on: Dec 02, 2025 | 9:31 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜಿನ ಸಿದ್ಧತೆಗಳು ಶುರುವಾಗಿದೆ. ಡಿಸೆಂಬರ್ 16 ರಂದು ನಡೆಯಲಿರುವ ಮಿನಿ ಆಕ್ಷನ್ಗಾಗಿ ಬರೋಬ್ಬರಿ 1355 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 45 ಆಟಗಾರರು 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ.

ಗರಿಷ್ಠ ಮೂಲ ಬೆಲೆ ಘೋಷಿಸಿರುವ 45 ಆಟಗಾರರಲ್ಲಿ ಕೇವಲ ಇಬ್ಬರು ಭಾರತೀಯರು ಮಾತ್ರ ಕಾಣಿಸಿಕೊಂಡಿದ್ದಾರೆ. ಅಂದರೆ 43 ವಿದೇಶಿ ಆಟಗಾರರು ಹಾಗೂ ಇಬ್ಬರು ಭಾರತೀಯರು ಮಾತ್ರ ತಮ್ಮ ಆರಂಭಿಕ ಹರಾಜು ಮೊತ್ತ 2 ಕೋಟಿ ರೂ. ಎಂದು ಘೋಷಿಸಿದ್ದಾರೆ. ಹೀಗೆ 2 ಕೋಟಿ ರೂ. ಬೇಸ್ ಪ್ರೈಸ್ ಘೋಷಿಸಿರುವ ಟೀಮ್ ಇಂಡಿಯಾ ಆಟಗಾರರು ಯಾರೆಂದರೆ...

ವೆಂಕಟೇಶ್ ಅಯ್ಯರ್: ಐಪಿಎಲ್ 2025 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ವೆಂಕಟೇಶ್ ಅಯ್ಯರ್ ಅವರನ್ನು ಬರೋಬ್ಬರಿ 23.5 ಕೋಟಿ ರೂ.ಗೆ ಖರೀದಿಸಿತ್ತು. ಇದಾಗ್ಯೂ ಅಯ್ಯರ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿ ಈ ಬಾರಿ ಅವರನ್ನು ರಿಲೀಸ್ ಮಾಡಲಾಗಿದೆ. ಇದೀಗ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ವೆಂಕಟೇಶ್ ಅಯ್ಯರ್ ಮಿನಿ ಹರಾಜಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ರವಿ ಬಿಷ್ಣೋಯ್: ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ಐಪಿಎಲ್ ಹರಾಜಿಗಾಗಿ ಗರಿಷ್ಠ ಮೂಲ ಬೆಲೆ ಘೋಷಿಸಿದ್ದಾರೆ. ಕಳೆದ ಸೀಸನ್ನಲ್ಲಿ ಎಲ್ಎಸ್ಜಿ ಪರ 11 ಕೋಟಿ ರೂ.ಗೆ ಆಡಿದ್ದ ಬಿಷ್ಣೋಯ್ ಈ ಬಾರಿ 2 ಕೋಟಿ ರೂ. ಬೇಸ್ ಪ್ರೈಸ್ನೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆದರೆ 2 ಕೋಟಿ ರೂ. ಮೂಲ ಬೆಲೆ ಘೋಷಿಸಿರುವ 45 ಆಟಗಾರರ ಹೆಸರುಗಳು ಡಿಸೆಂಬರ್ 16 ರಂದು ನಡೆಯಲಿರುವ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಏಕೆಂದರೆ 1355 ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಿದ್ದು, ಇದಾದ ಬಳಿಕ ಅಂತಿಮ ಹರಾಜು ಪಟ್ಟಿ ಸಿದ್ಧವಾಗಲಿದೆ. ಅದರಂತೆ ಕೋಟಿ ಬೆಲೆಯ ಎಷ್ಟು ಆಟಗಾರರು ಫೈನಲ್ ಲಿಸ್ಟ್ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.




