- Kannada News Photo gallery Cricket photos IPL 2026 player retention is set to take place on November 15
IPL 2026: ಐಪಿಎಲ್ ರಿಟೆನ್ಷನ್ಗೆ ಡೇಟ್ ಫಿಕ್ಸ್
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಡಿಸೆಂಬರ್ ಮೂರನೇ ವಾರದಲ್ಲಿ ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಹಾಗೂ ರಿಲೀಸ್ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಈ ಪಟ್ಟಿ ಸಲ್ಲಿಸಲು ಇದೀಗ ದಿನಾಂಕ ನಿಗದಿ ಮಾಡಲಾಗಿದೆ.
Updated on: Nov 09, 2025 | 7:16 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಸಿದ್ಧತೆಗಳು ಶುರುವಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಆಟಗಾರರ ರಿಟೆನ್ಷನ್ಗೆ ಡೇಟ್ ಫಿಕ್ಸ್ ಮಾಡಲಾಗಿದೆ. ಅಂದರೆ ಈ ಬಾರಿ ನಡೆಯಲಿರುವ ಈ ಮಿನಿ ಹರಾಜಿಗೂ ಮುನ್ನ 10 ಫ್ರಾಂಚೈಸಿಗಳಿಗೆ ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಹೀಗೆ ರಿಟೈನ್ ಮಾಡಿಕೊಳ್ಳಲು ಈ ಬಾರಿ ಯಾವುದೇ ನಿಬಂಧನೆಗಳು ಇರುವುದಿಲ್ಲ.

ಅಂದರೆ ಕಳೆದ ಬಾರಿ ನಡೆದ ಮೆಗಾ ಹರಾಜಿಗೂ ಮುನ್ನ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿತ್ತು. ಈ ಆರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಕೆಲ ಷರತ್ತುಗಳನ್ನು ಕೂಡ ಮುಂದಿಡಲಾಗಿತ್ತು. ಆದರೆ ಈ ಬಾರಿ ಮಿನಿ ಹರಾಜು ನಡೆಯುತ್ತಿರುವುದರಿಂದ ರಿಟೈನ್ಗೆ ಯಾವುದೇ ಷರತ್ತುಗಳು ಇರುವುದಿಲ್ಲ.

ಬದಲಾಗಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಂಡದಲ್ಲೇ ಉಳಿಸಿ, ಉಳಿದ ಆಟಗಾರರನ್ನು ಬಿಡುಗಡೆ ಮಾಡಬಹುದು. ಹೀಗೆ ರಿಟೈನ್ ಹಾಗೂ ರಿಲೀಸ್ ಪಟ್ಟಿ ಸಲ್ಲಿಸಲು ನವೆಂಬರ್ 15 ರವರೆಗೆ ಗಡುವು ನೀಡಲಾಗಿದೆ. ಅದರಂತೆ ನವೆಂಬರ್ 15 ರಂದು ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿದ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಸಲ್ಲಿಸಲಿದ್ದಾರೆ.

ಇದಾದ ಬಳಿಕ ಎಷ್ಟು ಸ್ಲಾಟ್ಗಳಿಗೆ ಹರಾಜು ನಡೆಸಬೇಕಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಅಂದರೆ ಐಪಿಎಲ್ ನಿಯಮದ ಪ್ರಕಾರ ಪ್ರತಿ ಫ್ರಾಂಚೈಸಿಗಳು ಒಟ್ಟು 25 ಆಟಗಾರರನ್ನು ಹೊಂದಬಹುದು. ಮಿನಿ ಹರಾಜಿಗೂ ಮುನ್ನ ಬಹುತೇಕ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳುವುದರಿಂದ ಕಡಿಮೆ ಸ್ಲಾಟ್ಗಳಿಗೆ ಹರಾಜು ನಡೆಯಲಿದೆ.

ಉದಾಹರಣೆಗೆ, 10 ಫ್ರಾಂಚೈಸಿಗಳು ಒಟ್ಟು 200 ಆಟಗಾರರನ್ನು ರಿಟೈನ್ ಮಾಡಿಕೊಂಡರೆ, ಉಳಿದ 50 ಸ್ಥಾನಗಳಿಗೆ ಮಾತ್ರ ಹರಾಜು ನಡೆಯಲಿದೆ. ಅಂದರೆ ಮಿನಿ ಹರಾಜಿನಲ್ಲಿ ಐವತ್ತು ಆಟಗಾರರಿಗೆ ಮಾತ್ರ ಅವಕಾಶ ಸಿಗಬಹುದು. ಹೀಗಾಗಿಯೇ ಈ ಬಾರಿಯ ಹರಾಜು ಪ್ರಕ್ರಿಯೆಯನ್ನು ಒಂದೇ ದಿನದಲ್ಲೇ ಮುಗಿಸುವ ಸಾಧ್ಯತೆಯಿದೆ.




