AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಬಲಿಷ್ಠ ಪಂಜಾಬ್ ತಂಡಕ್ಕೆ ಮತ್ತೊಬ್ಬ ಸ್ಟಾರ್ ಆಟಗಾರನ ಆಗಮನ

Punjab Kings IPL 2026: ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಅಫ್ಘಾನ್ ಆಲ್‌ರೌಂಡರ್ ಅಜ್ಮತುಲ್ಲಾ ಒಮರ್‌ಜೈ ಮತ್ತೆ ಸೇರಿದ್ದಾರೆ. ತಾಯಿಯ ನಿಧನದಿಂದ ತಂಡದಿಂದ ದೂರ ಉಳಿದಿದ್ದ ಅವರು, ಮೇ 7ರಂದು ಮರುಸೇರ್ಪಡೆಗೊಳ್ಳಲಿದ್ದಾರೆ. ಪಂಜಾಬ್ ಪ್ರಸ್ತುತ ಅಗ್ರಸ್ಥಾನದಲ್ಲಿದ್ದು, ಒಮರ್‌ಜೈ ತಂಡಕ್ಕೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ.

ಪೃಥ್ವಿಶಂಕರ
|

Updated on: May 02, 2026 | 7:58 PM

Share
ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಪ್ಲೇ ಆಫ್​ನತ್ತ ಮುನ್ನುಗ್ಗುತ್ತಿರುವ ಪಂಜಾಬ್ ಕಿಂಗ್ಸ್ ತಂಡ ಸಾಕಷ್ಟು ಬಲಿಷ್ಠವಾಗಿ ಕಾಣುತ್ತಿದೆ. ತಂಡದ ಎಲ್ಲಾ ವಿಭಾಗವೂ ಅಮೋಘ ಪ್ರದರ್ಶನ ನೀಡುತ್ತಿದೆ. ಇದರ ಫಲವಾಗಿಯೇ ಪಂಜಾಬ್ ತಂಡ ಈ ಅವೃತ್ತಿಯಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನು ಸೋತಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

1 / 5
ಈ ಬಾರಿ ಟ್ರೋಫಿ ಗೆಲ್ಲುವ ಪ್ರಮುಖ ತಂಡಗಳ ಪೈಕಿ ಪಂಜಾಬ್ ಕೂಡ ಒಂದಾಗಿದ್ದು, ಇದೀಗ ಈ ತಂಡಕ್ಕೆ ಮತ್ತೊಬ್ಬ ಆಟಗಾರನ ಆಗಮನವಾಗಿದೆ. ಅಫ್ಘಾನಿಸ್ತಾನದ ಆಲ್‌ರೌಂಡರ್ ಅಜ್ಮತುಲ್ಲಾ ಒಮರ್‌ಜೈ ಇದೀಗ ತಂಡವನ್ನು ಕೂಡಿಕೊಂಡಿದ್ದಾರೆ. ವಾಸ್ತವವಾಗಿ ಒಮರ್‌ಜೈ ಅವರ ತಾಯಿ ಇತ್ತೀಚೆಗೆ ನಿಧನರಾದರು. ಹೀಗಾಗಿ ಅವರು ತಂಡವನ್ನು ತೊರೆದು ಅಫ್ಘಾನಿಸ್ತಾನಕ್ಕೆ ಮರಳಿದ್ದರು.

2 / 5
ಇದೀಗ ತಾಯಿಯ ವಿಧಿವಿಧಾನಗಳನ್ನು ಮುಗಿಸಿರುವ ಅಜ್ಮತುಲ್ಲಾ ಒಮರ್ಜೈ ಇಷ್ಟರಲ್ಲೇ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಜ್ಮತುಲ್ಲಾ ಒಮರ್ಜೈ ಮೇ 7 ರಂದು ತಂಡವನ್ನು ಮತ್ತೆ ಸೇರಲಿದ್ದಾರೆ. ಇದು ಪಂಜಾಬ್ ಕಿಂಗ್ಸ್ ತಂಡಕ್ಕೂ ಒಳ್ಳೆಯ ಸುದ್ದಿಯಾಗಿದೆ.

3 / 5
ಅಜ್ಮತುಲ್ಲಾ ಒಮರ್‌ಜೈ ಐಪಿಎಲ್‌ನಲ್ಲಿ ತಮ್ಮ ಉಪಯುಕ್ತ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ, ಅವರು ಈ ಆವೃತ್ತಿಯಲ್ಲಿ ಇನ್ನೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ವರದಿ ಪ್ರಕಾರ, ಮುಂದಿನ ವಾರ ತಂಡವನ್ನು ಕೂಡಿಕೊಳ್ಳಲಿರುವ ಒಮರ್ಜೈಗೆ ಸಧ್ಯಕ್ಕೆ ತಂಡದ ಪ್ಲೇಯಿಂಗ್​ 11ನಲ್ಲಿ ಆಡುವ ಅವಕಾಶ ಸಿಗುವುದು ಅನುಮಾನವಾಗಿದೆ.

4 / 5
ಏಕೆಂದರೆ ಪ್ರಸ್ತುತ ಪ್ಲೇಯಿಂಗ್ 11ನಲ್ಲಿ ಇರುವ ಆಟಗಾರರೆಲ್ಲ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಒಮರ್ಜೈ ತಮ್ಮ ಸರದಿಗಾಗಿ ಕಾಯಬೇಕಿದೆ. ಪಂಜಾಬ್ ಕಿಂಗ್ಸ್ ಅಜ್ಮತುಲ್ಲಾ ಒಮರ್‌ಜೈ ಅವರನ್ನು 2.4 ಕೋಟಿಗೆ ಉಳಿಸಿಕೊಂಡಿದೆ. ಐಪಿಎಲ್‌ನಲ್ಲಿ ಇದುವರೆಗೆ 16 ಪಂದ್ಯಗಳನ್ನು ಆಡಿರುವ ಅವರು 99 ರನ್ ಮತ್ತು 12 ವಿಕೆಟ್‌ಗಳನ್ನು ಪಡೆದಿದ್ದಾರೆ.

5 / 5
Follow Us
ಮತಗಳಿರುವ ಬಾಕ್ಸ್​ ಸೀಲ್ ಓಪನ್ ಆರೋಪಕ್ಕೆ ಸ್ಪಷ್ಟನೆ ನೀಡಿದ ರಾಜೇಗೌಡ

ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆಲುವು: ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು

ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ

ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಮೋದಿಗೆ ಪತ್ರ

ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು
ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು
ರಣಬಿಸಿಲಿಗೆ ಪ್ರಾಣಿ, ಪಕ್ಷಿ, ಮನುಷ್ಯರ ನರಳಾಟ; ರಾಯಚೂರಿನಲ್ಲಿ ಇಬ್ಬರ ಸಾವು

‘ಸಾರಾ ಗೋವಿಂದ್ ನನಗೆ ಧಮ್ಕಿ ಹಾಕೋ ರೀತಿ ಮಾತಾಡಿದ್ರು’; ಚೇತನ್

ಗೃಹಿಣಿ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ ಆರೋಪ

ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ 'ಬಿಳಿ ಜಿಂಕೆ'!

ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ