AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: SRH ತಂಡದಿಂದ ಹೆನ್ರಿಕ್ ಕ್ಲಾಸೆನ್ ರಿಲೀಸ್… ಏನಿದು ಲೆಕ್ಕಾಚಾರ?

IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಡಿಸೆಂಬರ್ ಮೂರನೇ ವಾರದಲ್ಲಿ ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಹಾಗೂ ರಿಲೀಸ್ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಇದೀಗ ಸನ್​​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ರಿಲೀಸ್ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ಈ ಪಟ್ಟಿಯಲ್ಲಿ ಹೆನ್ರಿಕ್ ಕ್ಲಾಸೆನ್ ಅವರನ್ನು ಸಹ ಸೇರ್ಪಡೆಗೊಳಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ.

ಝಾಹಿರ್ ಯೂಸುಫ್
|

Updated on: Nov 05, 2025 | 7:54 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಸನ್​​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರನ್ನು ರಿಲೀಸ್ ಮಾಡಲಿದೆಯಾ? ಈ ಪ್ರಶ್ನೆಗೆ ಸದ್ಯ ಕೇಳಿ ಬರುತ್ತಿರುವ ಉತ್ತರ ಹೌದು. ಆದರೆ ಈ ರಿಲೀಸ್ ಹಿಂದೆ ಎಸ್​ಆರ್​​ಹೆಚ್​ ಮತ್ತೊಂದು ಲೆಕ್ಕಾಚಾರವನ್ನು ಸಹ ಇಟ್ಟುಕೊಂಡಿದೆ.

1 / 6
ಸನ್​​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಹೆನ್ರಿಕ್ ಕ್ಲಾಸೆನ್ ಅವರಿಗೆ ನೀಡುತ್ತಿರುವ ಸಂಭಾವನೆ ಬರೋಬ್ಬರಿ 23 ಕೋಟಿ ರೂ. ಮುಂದಿನ ಹರಾಜಿಗೂ ಮುನ್ನ ಅವರನ್ನು ರಿಲೀಸ್ ಮಾಡಿದರೆ ಎಸ್​​​ಆರ್​​ಹೆಚ್ ತಂಡದ ಪರ್ಸ್​ ಮೊತ್ತಕ್ಕೆ 23 ಕೋಟಿ ರೂ. ಸೇರ್ಪಡೆಯಾಗಲಿದೆ.

2 / 6
ಹೆನ್ರಿಕ್ ಕ್ಲಾಸೆನ್ ಜೊತೆ 10 ಕೋಟಿ ರೂ. ಬೆಲೆಯ ಮೊಹಮ್ಮದ್ ಶಮಿ ಸೇರಿದಂತೆ ಇನ್ನೊಂದಷ್ಟು ಆಟಗಾರರನ್ನು ರಿಲೀಸ್ ಮಾಡಿದರೂ ಸನ್​​​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 40 ಕೋಟಿಗಿಂತಲೂ ಅಧಿಕ ಹರಾಜು ಮೊತ್ತ ಹೊಂದಬಹುದು. ಇದರಿಂದ ಮಿನಿ ಹರಾಜಿನಲ್ಲಿ ಸ್ಟಾರ್ ಪ್ಲೇಯರ್ಸ್​​ಗಾಗಿ ಭರ್ಜರಿ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ.

3 / 6
ಈ ಪೈಪೋಟಿ ನಡುವೆ ಹೆನ್ರಿಕ್ ಕ್ಲಾಸೆನ್ ಅವರನ್ನು ಸನ್​​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯೇ ಮತ್ತೆ ಖರೀದಿಸಲು ಸಹ ಪ್ಲ್ಯಾನ್ ರೂಪಿಸಿದೆ. ಅಂದರೆ 23 ಕೋಟಿ ರೂ. ಹೊಂದಿರುವ ಕ್ಲಾಸೆನ್ ಅವರನ್ನು ಬಿಡುಗಡೆ ಮಾಡಿದರೂ, ಮಿನಿ ಹರಾಜಿನಲ್ಲಿ ಅವರನ್ನು ಖರೀದಿಸಲು ಬೃಹತ್ ಮೊತ್ತ ಪಾವತಿಸಲು ಇತರೆ ಫ್ರಾಂಚೈಸಿಗಳು ಹಿಂದೇಟು ಹಾಕಬಹುದು.

4 / 6
ಇತ್ತ ಸನ್​​ರೈಸರ್ಸ್ ಹೈದರಾಬಾದ್ ಬಳಿ ದೊಡ್ಡ ಮೊತ್ತದ ಪರ್ಸ್​ ಇರುವುದರಿಂದ ಅವರನ್ನು 15 ಅಥವಾ 20 ಕೋಟಿ ರೂ. ಒಳಗೆ ಮತ್ತೆ ಖರೀದಿಸಬಹುದು. ಅಲ್ಲದೆ ಇನ್ನುಳಿದ ಮೊತ್ತದಲ್ಲಿ ಇತರೆ ಸ್ಟಾರ್ ಆಟಗಾರರನ್ನು ಖರೀದಿಸಲು ಸನ್​​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಹೆನ್ರಿಕ್ ಕ್ಲಾಸೆನ್ ಅವರ ಹೆಸರು ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

5 / 6
ಅಂದರೆ ಹೆನ್ರಿಕ್ ಕ್ಲಾಸೆನ್ ಅವರನ್ನು ಬಿಡುಗಡೆ ಮಾಡಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯೇ ಕಡಿಮೆ ಮೊತ್ತಕ್ಕೆ ಖರೀದಿಸಲು ಯೋಜನೆ ರೂಪಿಸಿಕೊಂಡಿದೆ. ಈ ಮೂಲಕ ಪರ್ಸ್ ಮೊತ್ತ ಹೆಚ್ಚಿಸಿ ಪ್ರಮುಖ ಆಟಗಾರರಿಗೆ ಬಿಡ್ ಮಾಡಲು ಎಸ್​ಆರ್​ಹೆಚ್ ಫ್ರಾಂಚೈಸಿ ಯೋಜನೆ ರೂಪಿಸಿಕೊಂಡಿದೆ. ಅದರಂತೆ ಸದ್ಯ ಕ್ಲಾಸೆನ್ ಅವರನ್ನು ಬಿಡುಗಡೆ ಮಾಡಲು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಿರ್ಧರಿಸಿದೆ. ಒಂದು ವೇಳೆ ಇತರೆ ಫ್ರಾಂಚೈಸಿಗಳು ಬೃಹತ್ ಮೊತ್ತದ ಪರ್ಸ್ ಹೊಂದಿರುವುದು ಖಚಿತವಾದರೆ ಎಸ್​ಆರ್​ಹೆಚ್ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

6 / 6
ಅವಮಾನಿಸಿದ ಕೋಚ್ ಮುಂದೆ ಅಬ್ಬರಿಸಿದ ಹರ್ಲೀನ್ ಡಿಯೋಲ್

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ

ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು

ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ

ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ

ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ

ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್

ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ

ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ