IPL 2026: ಐಪಿಎಲ್‌ನಲ್ಲಿ 11ನೇ ಬಾರಿಗೆ ಈ ಸಾಧನೆ ಮಾಡಲು ವಿರಾಟ್ ಕೊಹ್ಲಿ ರೆಡಿ

Updated on: Apr 27, 2026 | 4:44 PM

Virat Kohli IPL Record: ಐಪಿಎಲ್ 2026 ರಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 72 ರನ್ ಗಳಿಸಿದರೆ, ಅವರು 11ನೇ ಬಾರಿಗೆ 400ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರರಾಗಲಿದ್ದಾರೆ. ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಆರ್​​ಸಿಬಿಗೆ ಕೊಹ್ಲಿಯ ಉತ್ತಮ ಪ್ರದರ್ಶನ ಅನಿವಾರ್ಯ. ಆರೆಂಜ್ ಕ್ಯಾಪ್ ರೇಸ್‌ನಲ್ಲೂ ಅವರು ಮುಂಚೂಣಿಯಲ್ಲಿದ್ದಾರೆ.

1 / 5
ಐಪಿಎಲ್ 2026 ರ 39ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಆರ್​​ಸಿಬಿಯ ಜೀವಾಳ ವಿರಾಟ್ ಕೊಹ್ಲಿ ಅವರ ಮೇಲಿರಲಿದೆ. ಏಕೆಂದರೆ ಫಿಲ್ ಸಾಲ್ಟ್ ಈ ಪಂದ್ಯಕ್ಕೆ ಲಭ್ಯರಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತವಾಗಿ ಬ್ಯಾಟಿಂಗ್‌ ಮಾಡಬೇಕಿದೆ.

ಐಪಿಎಲ್ 2026 ರ 39ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಆರ್​​ಸಿಬಿಯ ಜೀವಾಳ ವಿರಾಟ್ ಕೊಹ್ಲಿ ಅವರ ಮೇಲಿರಲಿದೆ. ಏಕೆಂದರೆ ಫಿಲ್ ಸಾಲ್ಟ್ ಈ ಪಂದ್ಯಕ್ಕೆ ಲಭ್ಯರಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತವಾಗಿ ಬ್ಯಾಟಿಂಗ್‌ ಮಾಡಬೇಕಿದೆ.

2 / 5

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡಿ ದೊಡ್ಡ ಮೊತ್ತ ಕಲೆಹಾಕಿದ್ದಾರೆ. ಅವರ ಹೆಸರಿನಲ್ಲಿ ಮತ್ತೊಂದು ದಾಖಲೆ ದಾಖಲಾಗಲಿದೆ. ವಾಸ್ತವವಾಗಿ ವಿರಾಟ್ ಐಪಿಎಲ್ ಇತಿಹಾಸದಲ್ಲಿ 10 ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದೀಗ 11ನೇ ಬಾರಿಗೆ ಈ ಸಾಧನೆ ಮಾಡುವ ಸನಿಹದಲ್ಲಿ ಕೊಹ್ಲಿ ಇದ್ದಾರೆ.

3 / 5

ವಾಸ್ತವವಾಗಿ ಐಪಿಎಲ್‌ನ ಬರೋಬ್ಬರಿ 10 ಸೀಸನ್‌ನಲ್ಲಿ ವಿರಾಟ್ ಕೊಹ್ಲಿ 400 ಕ್ಕೂ ಅಧಿಕ ರನ್​ಗಳನ್ನು ಕಲೆಹಾಕಿದ ದಾಖಲೆ ಮಾಡಿದ್ದಾರೆ. ಈ ಮೂಲಕ 10 ಆವೃತ್ತಿಗಳಲ್ಲಿ 400 ಕ್ಕೂ ಹೆಚ್ಚು ರನ್‌ಗಳನ್ನು ಕಲೆಹಾಕಿದ ಏಕೈಕ ಬ್ಯಾಟ್ಸ್‌ಮನ್ ಎಂಬ ದಾಖಲೆಯೂ ಕೊಹ್ಲಿ ಪಾಲಾಗಿದೆ. ಇದೀಗ 19ನೇ ಆವೃತ್ತಿಯಲ್ಲಿಯೂ ವಿರಾಟ್ ಕೊಹ್ಲಿ 400 ರನ್​ಗಳ ಗಡಿ ದಾಟುವುದು ಖಚಿತವಾಗಿದೆ.

4 / 5

ಐಪಿಎಲ್ 2026 ರಲ್ಲಿ ವಿರಾಟ್ ಕೊಹ್ಲಿ 400 ರನ್‌ಗಳನ್ನು ದಾಟಲು 72 ರನ್‌ಗಳ ದೂರದಲ್ಲಿದ್ದಾರೆ. ಇದೀಗ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 72 ರನ್​ಗಳ ಇನ್ನಿಂಗ್ಸ್ ಆಡಿದರೆ, 11 ಆವೃತ್ತಿಗಳಲ್ಲಿ 400 ಕ್ಕೂ ಅಧಿಕ ರನ್ ಕಲೆಹಾಕಿದ ಬ್ಯಾಟ್ಸ್‌ಮನ್ ಆಗಲಿದ್ದಾರೆ.

5 / 5

ಇನ್ನು ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ, ಶಿಖರ್ ಧವನ್, ಸುರೇಶ್ ರೈನಾ ಮತ್ತು ಡೇವಿಡ್ ವಾರ್ನರ್ ತಲಾ ಒಂಬತ್ತು ಆವೃತ್ತಿಗಳಲ್ಲಿ 400 ರನ್‌ಗಳ ಗಡಿ ದಾಟಿದ್ದಾರೆ. ಈ ಮೈಲಿಗಲ್ಲಿನ ಜೊತೆಗೆ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್‌ ರೇಸ್‌ನಲ್ಲಿಯೂ ಇದ್ದಾರೆ.

Loading...
Unable to load recommendations.
Follow Us