ಗೋವಾದಲ್ಲಿ ನಡೆಯಲಿದೆ 2027 ರ ಐಪಿಎಲ್ ಮಿನಿ ಹರಾಜು; ಅಧಿಕೃತ ಘೋಷಣೆ

Updated on: Sep 23, 2026 | 7:18 PM

2027ರ ಐಪಿಎಲ್ ಮಿನಿ ಹರಾಜು ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿದೆ. ಬಿಸಿಸಿಐ ಈ ನಿರ್ಧಾರದೊಂದಿಗೆ ಮೂರು ವರ್ಷಗಳ ನಂತರ ಹರಾಜನ್ನು ಭಾರತಕ್ಕೆ ಮರಳಿ ತಂದಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇದನ್ನು ಘೋಷಿಸಿದ್ದಾರೆ. ಇದರ ಜೊತೆಗೆ, ಧರ್ಮಶಾಲಾದಲ್ಲಿ ಮಳೆಯಿಂದಾಗಿ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ಮಹಿಳಾ ಟಿ20 ಪಂದ್ಯಗಳನ್ನು ಮೊಹಾಲಿಗೆ ಸ್ಥಳಾಂತರಿಸಲಾಗಿದೆ.

1 / 5
2027 ರ ಐಪಿಎಲ್​ಗೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ. ಅದರ ಭಾಗವಾಗಿ ಮಿನಿ ಹರಾಜಿನ ಬಗ್ಗೆ ಬಿಸಿಸಿಐ ಮಾಹಿತಿಯನ್ನು ಹಂಚಿಕೊಂಡಿದ್ದು, ಡಿಸೆಂಬರ್‌ ತಿಂಗಳಲ್ಲಿ 2027 ರ ಐಪಿಎಲ್ ಮಿನಿ ಹರಾಜು ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಈ ಮಿನಿ ಹರಾಜಿನ್ನು ಗೋವಾದಲ್ಲಿ ನಡೆಸುವುದಾಗಿಯೂ ಬಿಸಿಸಿಐ ಮಾಹಿತಿ ನೀಡಿದೆ(PC-PTI).

2027 ರ ಐಪಿಎಲ್​ಗೆ ಈಗಿನಿಂದಲೇ ಸಿದ್ಧತೆ ಆರಂಭವಾಗಿದೆ. ಅದರ ಭಾಗವಾಗಿ ಮಿನಿ ಹರಾಜಿನ ಬಗ್ಗೆ ಬಿಸಿಸಿಐ ಮಾಹಿತಿಯನ್ನು ಹಂಚಿಕೊಂಡಿದ್ದು, ಡಿಸೆಂಬರ್‌ ತಿಂಗಳಲ್ಲಿ 2027 ರ ಐಪಿಎಲ್ ಮಿನಿ ಹರಾಜು ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಈ ಮಿನಿ ಹರಾಜಿನ್ನು ಗೋವಾದಲ್ಲಿ ನಡೆಸುವುದಾಗಿಯೂ ಬಿಸಿಸಿಐ ಮಾಹಿತಿ ನೀಡಿದೆ(PC-PTI).

2 / 5

ಈ ವರ್ಷದ ಐಪಿಎಲ್ ಮಿನಿ ಹರಾಜು ಡಿಸೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಘೋಷಿಸಿದ್ದಾರೆ ಕಳೆದ ಮೂರು ವರ್ಷಗಳಿಂದ, ಹರಾಜು ಭಾರತದ ಹೊರಗೆ ನಡೆಯುತ್ತಿತ್ತು, ಆದರೆ ಈ ಬಾರಿ ಬಿಸಿಸಿಐ ಭಾರತದಲ್ಲಿ ಹರಾಜನ್ನು ನಡೆಸಲು ನಿರ್ಧರಿಸಿದೆ(PC-PTI).

3 / 5

ಕಳೆದ ಮೂರು ಐಪಿಎಲ್ ಹರಾಜುಗಳನ್ನು ಸೌದಿ ಅರೇಬಿಯಾ, ದುಬೈ ಮತ್ತು ಅಬುಧಾಬಿಯಲ್ಲಿ ನಡೆಸಲಾಗಿತ್ತು, ಆದರೆ ಈ ಬಾರಿ ಗೋವಾ ಡಿಸೆಂಬರ್‌ನಲ್ಲಿ ಹರಾಜನ್ನು ಆಯೋಜಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ. ಸೌದಿ ಅರೇಬಿಯಾ, ದುಬೈ ಮತ್ತು ಅಬುಧಾಬಿಯಲ್ಲಿ ಕಳೆದ ಮೂರು ಹರಾಜುಗಳನ್ನು ನಡೆಸಿದ ನಂತರ, ನಾವು ಈಗ ಡಿಸೆಂಬರ್‌ನಲ್ಲಿ ಗೋವಾದಲ್ಲಿ ಐಪಿಎಲ್ ಹರಾಜನ್ನು ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ(PC-PTI).

4 / 5

ಐಪಿಎಲ್ ಹರಾಜಿನ ಹೊರತಾಗಿ, ಭಾರತ ಎ ಮಹಿಳಾ ಮತ್ತು ಆಸ್ಟ್ರೇಲಿಯಾ ಎ ಮಹಿಳಾ ತಂಡಗಳ ನಡುವೆ ನಡೆಯಲಿರುವ ಪಂದ್ಯಗಳ ಬಗ್ಗೆಯೂ ಸೈಕಿಯಾ ಮಾಹಿತಿ ನೀಡಿದ್ದಾರೆ. ಧರ್ಮಶಾಲಾದಲ್ಲಿ ಕೆಟ್ಟ ಹವಾಮಾನ ಮತ್ತು ನಿರಂತರ ಮಳೆಯಿಂದಾಗಿ, ಮುಂಬರುವ ಟಿ20 ಪಂದ್ಯಗಳನ್ನು ಮೊಹಾಲಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು(PC-PTI).

5 / 5

ಧರ್ಮಶಾಲಾದಲ್ಲಿ ಪ್ರಸ್ತುತ ಹವಾಮಾನ ಪರಿಸ್ಥಿತಿಗಳು ಕ್ರಿಕೆಟ್‌ಗೆ ಹೆಚ್ಚು ಅನುಕೂಲಕರವಾಗಿಲ್ಲದ ಕಾರಣ ಮುಂಬರುವ ಟಿ20 ಪಂದ್ಯಗಳನ್ನು ಧರ್ಮಶಾಲಾದ ಮೊಹಾಲಿಗೆ ಸ್ಥಳಾಂತರಿಸಿದ್ದೇವೆ ಎಂದು ಸೈಕಿಯಾ ಹೇಳಿದರು. ಅಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ, ಹವಾಮಾನದಿಂದಾಗಿ ಕ್ರಿಕೆಟ್ ಚಟುವಟಿಕೆಗಳಲ್ಲಿ ಯಾವುದೇ ಅಡಚಣೆಯಾಗದಂತೆ ನಾವು ಪಂದ್ಯಗಳನ್ನು ಮೊಹಾಲಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ(PC-PTI).

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us