- Kannada News Photo gallery Cricket photos Ishan Kishan IPL 3000 Runs: Breaks Records with Explosive 80 Run Knock
IPL 2026: ಹೀನಾಯ ಸೋಲಿನ ನಡುವೆಯೂ ದಾಖಲೆ ಬರೆದ ಇಶಾನ್ ಕಿಶನ್
Ishan Kishan IPL 3000 Runs: ಆರ್‌ಸಿಬಿ ವಿರುದ್ಧ 80 ರನ್ ಗಳಿಸಿ ಮಿಂಚಿದ ಇಶಾನ್ ಕಿಶನ್ ಐಪಿಎಲ್‌ನಲ್ಲಿ 3000 ರನ್ ಪೂರೈಸಿದ್ದಾರೆ. ಕೇವಲ 2180 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಕಿಶನ್, ಕೆಎಲ್ ರಾಹುಲ್‌ರನ್ನು ಹಿಂದಿಕ್ಕಿ ಆರನೇ ಭಾರತೀಯ ಹಾಗೂ ನಾಲ್ಕನೇ ವಿಕೆಟ್‌ಕೀಪರ್ ಎನಿಸಿದ್ದಾರೆ. ಅದ್ಭುತ ಫಾರ್ಮ್ ಮುಂದುವರಿಸಿದ ಕಿಶನ್, ತಮ್ಮ ಬ್ಯಾಟಿಂಗ್ ಮೂಲಕ ಐಪಿಎಲ್‌ನಲ್ಲಿ ಪ್ರಮುಖ ದಾಖಲೆ ಬರೆದಿದ್ದಾರೆ.
Updated on: Mar 29, 2026 | 4:55 PM

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಹೀನಾಯ ಸೋಲು ಕಂಡಿರಬಹುದು. ನಾಯಕನಾಗಿ ಇಶಾನ್ ಕಿಶನ್ಗೆ ಗೆಲುವಿನ ಆರಂಭವೂ ಸಿಗದಿರಬಹುದು. ಆದರೆ ಆಟಗಾರನಾಗಿ ಇಶಾನ್ ಕಿಶನ್ ತಮ್ಮ ಅದ್ಭುತ ಫಾರ್ಮ್ ಅನ್ನು ಐಪಿಎಲ್ನಲ್ಲೂ ಮುಂದುವರೆಸಿದ್ದಾರೆ.

ಈ ಹಿಂದೆ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಇದೀಗ ಆರಂಭವಾಗಿರುವ ಐಪಿಎಲ್ನಲ್ಲೂ ಮುಂದುವರೆಸಿದ್ದಾರೆ. ಆಡಿದ ಮೊದಲ ಪಂದ್ಯದಲ್ಲೇ ಒತ್ತಡದ ನಡುವೆಯೂ ತನ್ನ ನೈಜ ಆಟವನ್ನಾಡಿದ ಕಿಶನ್, ಕೇವಲ 38 ಎಸೆತಗಳಲ್ಲಿ 80 ರನ್ ಬಾರಿಸಿದರು. ಈ ಮೂಲಕ ಕಿಶನ್ ಅಪರೂಪದ ದಾಖಲೆಯನ್ನು ನಿರ್ಮಿಸಿದರು.

ಆರ್‌ಸಿಬಿ ವಿರುದ್ಧ 80 ರನ್ ಇನ್ನಿಂಗ್ಸ್ ಆಡಿದ ಇಶಾನ್ ಕಿಶನ್ ಈ ಮೂಲಕ ಐಪಿಎಲ್‌ನಲ್ಲಿ 3000 ರನ್ ಪೂರ್ಣಗೊಳಿಸಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 120 ಪಂದ್ಯಗಳ 113 ಇನ್ನಿಂಗ್ಸ್‌ಗಳನ್ನಾಡಿರುವ ಕಿಶನ್ 3078 ರನ್ ಗಳಿಸಿದ್ದಾರೆ. ಇದರೊಂದಿಗೆ ಐಪಿಎಲ್‌ನಲ್ಲಿ ಕಡಿಮೆ ಎಸೆತಗಳಲ್ಲಿ 3000 ರನ್ ಗಳಿಸಿದ ಆರನೇ ಭಾರತೀಯ ಮತ್ತು ನಾಲ್ಕನೇ ವಿಕೆಟ್‌ಕೀಪರ್ ಎನಿಸಿಕೊಂಡಿದ್ದಾರೆ.

ಅಂದರೆ ಇಶಾನ್ ಕಿಶನ್ ಐಪಿಎಲ್‌ನಲ್ಲಿ ಇದುವರೆಗೆ 2180 ಎಸೆತಗಳನ್ನು ಎದುರಿಸಿದ್ದು, 3000 ರನ್ಗಳ ಗಡಿ ದಾಟಿದ್ದಾರೆ. ಈ ಮೂಲಕ, 2203 ಎಸೆತಗಳಲ್ಲಿ 3000 ಐಪಿಎಲ್ ರನ್ ಗಳಿಸಿದ್ದ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಏಳನೇ ಸ್ಥಾನಕ್ಕೆ ತಳ್ಳಿದ್ದಾರೆ.

ಪ್ರಸ್ತುತ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಿಷಭ್ ಪಂತ್ 2028 ಎಸೆತಗಳಲ್ಲಿ 3000 ರನ್ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿರುವ ಯೂಸುಫ್ ಪಠಾಣ್ 2082 ಎಸೆತಗಳಲ್ಲಿ, ಸೂರ್ಯಕುಮಾರ್ ಯಾದವ್ 2130 ಎಸೆತಗಳಲ್ಲಿ, ಸುರೇಶ್ ರೈನಾ 2135 ಎಸೆತಗಳಲ್ಲಿ ಮತ್ತು ಧೋನಿ 2152 ಎಸೆತಗಳಲ್ಲಿ 3000 ರನ್ಗಳ ಗಡಿ ದಾಟಿದ್ದಾರೆ.

ಇದರೊಂದಿಗೆ ಕಡಿಮೆ ಎಸೆತಗಳಲ್ಲಿ 3000 ಐಪಿಎಲ್ ರನ್ ಗಳಿಸಿದ ಭಾರತದ ವಿಕೆಟ್ ಕೀಪರ್ಗಳ ಪಟ್ಟಿಯಲ್ಲೂ ಪಂತ್, ಧೋನಿ ಮತ್ತು ಕೆಎಲ್ ರಾಹುಲ್ ನಂತರ ಇಶಾನ್ ಕಿಶನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
