- Kannada News Photo gallery Cricket photos Italy's Mosca brothers creates World Record in T20 Cricket
ಟಿ20 ಕ್ರಿಕೆಟ್‌ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ‘ಮೊಸ್ಕಾ’ ಬ್ರದರ್ಸ್
Nepal vs Italy: ಟಿ20 ವಿಶ್ವಕಪ್‌ನ 17ನೇ ಪಂದ್ಯದಲ್ಲಿ ಇಟಲಿ ತಂಡವು ಅಮೋಘ ಜಯ ಸಾಧಿಸಿದೆ. ಈ ಅಮೋಘ ಗೆಲುವಿನ ರೂವಾರಿಗಳು ಆಂಥೋನಿ ಮೊಸ್ಕಾ ಮತ್ತು ಜಸ್ಟಿನ್ ಮೊಸ್ಕಾ . ಈ ಗೆಲುವಿನೊಂದಿಗೆ ಮೊಸ್ಕಾ ಸಹೋದರರು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Updated on: Feb 14, 2026 | 7:33 AM

ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ಮೊಸ್ಕಾ ಬ್ರದರ್ಸ್. ಟಿ20 ವಿಶ್ವಕಪ್‌ನ 17ನೇ ಪಂದ್ಯದಲ್ಲಿ ಶತಕದ ಜೊತೆಯಾಟವಾಡುವ ಮೂಲಕ ಆಂಥೋನಿ ಮೊಸ್ಕಾ ಮತ್ತು ಜಸ್ಟಿನ್ ಮೊಸ್ಕಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಇಟಲಿ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 19.3 ಓವರ್‌ಗಳಲ್ಲಿ 123 ರನ್ ಗಳಿಸಿ ಆಲೌಟ್ ಆಯಿತು.

ಈ ಗುರಿ ಬೆನ್ನತ್ತಿದ ಇಟಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಆಂಥೋನಿ ಮೊಸ್ಕಾ ಮತ್ತು ಜಸ್ಟಿನ್ ಮೊಸ್ಕಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್‌ನಿಂದಲೇ ಬಿರುಸಿನ ಬ್ಯಾಟಿಂಗ್ ಒತ್ತು ನೀಡಿದ ಈ ಜೋಡಿಯು ಪವರ್ ಪ್ಲೇನಲ್ಲೇ 68 ರನ್ ಕಲೆಹಾಕಿದ್ದರು.

ಪವರ್ ಪ್ಲೇ ಬಳಿಕ ಪವರ್ಫುಲ್ ಬ್ಯಾಟಿಂಗ್ ಮುಂದುವರೆಸಿದ ಆಂಥೋನಿ ಮೊಸ್ಕಾ 32 ಎಸೆತಗಳಲ್ಲಿ 6 ಸಿಕ್ಸ್, 3 ಫೋರ್ ಗಳೊಂದಿಗೆ ಅಜೇಯ 62 ರನ್ ಬಾರಿಸಿದರು. ಮತ್ತೊಂದೆಡೆ ಜಸ್ಟಿನ್ ಮೊಸ್ಕಾ 44 ಎಸೆತಗಳಲ್ಲಿ 3 ಸಿಕ್ಸ್, 5 ಫೋರ್ ಗಳೊಂದಿಗೆ ಅಜೇಯ 60 ರನ್ ಗಳಿಸಿದರು. ಈ ಮೂಲಕ ಇಟಲಿ ತಂಡವು 12.4 ಓವರ್‌ಗಳಲ್ಲಿ 124 ರನ್ ಬಾರಿಸಿ 10 ವಿಕೆಟ್‌ಗಳ ಜಯ ಸಾಧಿಸಿತು.

ಈ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳ ಜೊತೆಯಾಟವಾಡಿದ ಸಹೋದರರು ಎಂಬ ವಿಶ್ವ ದಾಖಲೆಯೊಂದು ಆಂಥೋನಿ ಮೊಸ್ಕಾ ಮತ್ತು ಜಸ್ಟಿನ್ ಮೊಸ್ಕಾ ಬ್ರದರ್ಸ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಗಿಬ್ರಾಲ್ಟರ್ ತಂಡದ ಫಿಲಿಪ್ ರೈಕ್ಸ್ ಹಾಗೂ ಮೈಕೆಲ್ ರೈಕ್ಸ್ ಹೆಸರಿನಲ್ಲಿತ್ತು. ಈ ಸಹೋದರರು 101 ರನ್ ಗಳ ಜೊತೆಯಾಟವಾಡಿ ಈ ದಾಖಲೆ ನಿರ್ಮಿಸಿದ್ದರು.

ಇದೀಗ ಅಜೇಯ 124 ರನ್ ಪಾಲುದಾರಿಕೆಯೊಂದಿಗೆ ಆಂಥೋನಿ ಮೊಸ್ಕಾ ಮತ್ತು ಜಸ್ಟಿನ್ ಮೊಸ್ಕಾ ಹೊಸ ಇತಿಹಾಸ ಬರೆದಿದ್ದಾರೆ. ಅಷ್ಟೇ ಅಲ್ಲದೇ ಟಿ20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ರನ್ ಗಳ ಜೊತೆಯಾಟವಾಡಿದ ಬ್ರದರ್ಸ್ ಎಂಬ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಈ ವಿಶ್ವ ದಾಖಲೆ ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಹಾಗೂ ಉಮರ್ ಅಕ್ಮಲ್ ಸಹೋದರರ ಹೆಸರಿನಲ್ಲಿತ್ತು. 2014 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಕ್ಮಲ್ ಸಹೋದರರು 96 ರನ್ ಗಳ ಜೊತೆಯಾಟವಾಡಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

ಈ ವಿಶ್ವ ದಾಖಲೆ ಪಾಕಿಸ್ತಾನದ ಕಮ್ರಾನ್ ಅಕ್ಮಲ್ ಹಾಗೂ ಉಮರ್ ಅಕ್ಮಲ್ ಸಹೋದರರ ಹೆಸರಿನಲ್ಲಿತ್ತು. 2014 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಕ್ಮಲ್ ಸಹೋದರರು 96 ರನ್ ಗಳ ಜೊತೆಯಾಟವಾಡಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.
