AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: KKR ತಂಡಕ್ಕೆ ಕನ್ನಡಿಗ ಕ್ಯಾಪ್ಟನ್?

IPL 2026 KL Rahul: ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕಳೆದ ಸೀಸನ್​ನಲ್ಲಿ 14 ಕೋಟಿ ರೂ.ಗೆ ಖರೀದಿಸಿದ್ದರು. ಅಲ್ಲದೆ ಡೆಲ್ಲಿ ಪರ 13 ಇನಿಂಗ್ಸ್ ಆಡಿದ್ದ ರಾಹುಲ್ ಬರೋಬ್ಬರಿ 539 ರನ್ ಕಲೆಹಾಕಿ ಮಿಂಚಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರನನ್ನೇ ಟ್ರೇಡ್ ಮಾಡಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಮುಂದಾಗಿದೆ.

ಝಾಹಿರ್ ಯೂಸುಫ್
|

Updated on: Nov 02, 2025 | 8:54 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನ ದೊಡ್ಡ ಡೀಲ್ ಕುದುರಿಕೊಳ್ಳುವ ಸಾಧ್ಯತೆಯಿದೆ. ಈ ಡೀಲ್ ಕನ್ನಡಿಗ ಕೆಎಲ್ ರಾಹುಲ್​ಗಾಗಿ ಎಂಬುದು ವಿಶೇಷ. ಅಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಕೆಎಲ್​ ರಾಹುಲ್ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮಾತುಕತೆ ನಡೆಸಿದೆ.

1 / 5
ಈ ಮಾತುಕತೆ ಬೆನ್ನಲ್ಲೇ ಕೆಕೆಆರ್ ತಂಡವು ಕೆಎಲ್ ರಾಹುಲ್ ಅವರನ್ನು ನಾಯಕನ್ನಾಗಿ ಮಾಡಲಿದೆ ಎಂಬ ವಿಚಾರ ಕೂಡ ಹೊರಬಿದ್ದಿದೆ. ಅಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಕನ್ನಡಿಗನನ್ನು ಖರೀದಿಸುತ್ತಿರುವುದೇ ಮೂರು ಆಯ್ಕೆಗಳಿಗಾಗಿ..!

2 / 5
ಕೆಎಲ್ ರಾಹುಲ್ ಅವರನ್ನು ಖರೀದಿಸಿದರೆ, ಕೆಕೆಆರ್ ತಂಡದ ಆರಂಭಿಕನ ಸಮಸ್ಯೆ, ವಿಕೆಟ್ ಕೀಪರ್ ಸಮಸ್ಯೆ ಹಾಗೂ ನಾಯಕನ ಸಮಸ್ಯೆ ದೂರವಾಗಲಿದೆ. ಹೀಗಾಗಿಯೇ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಡೀಲ್ ಕುದುರಿಸಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ತೆರೆಮರೆಯಲ್ಲಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.

3 / 5
ಆದರೆ ಇಲ್ಲಿ ಕೆಕೆಆರ್ ಫ್ರಾಂಚೈಸಿಗೆ ಸಮಸ್ಯೆಯಾಗಿರುವುದು ಸ್ವಾಪ್ ಡೀಲ್. ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಆಟಗಾರನ ಬದಲಿಗೆ ಆಟಗಾರನನ್ನು ನೀಡಲು ಆಸಕ್ತಿ ತೋರಿದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ತನ್ನ ಸ್ಟಾರ್ ಆಟಗಾರರನ್ನು ಬಿಟ್ಟು ಕೊಡಲು ಸಿದ್ಧರಿಲ್ಲ.

4 / 5
ಇದಾಗ್ಯೂ ಕ್ಯಾಶ್ ಡೀಲ್​ಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರೊಂದಿಗೆ ಮಾತುಕತೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಕೆಕೆಆರ್ ತಂಡದ ಪಾಲಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

5 / 5