- Kannada News Photo gallery Cricket photos KL Rahul praises Suryakumar yadav's Batting in Tulu language Kannada News zp
ಭಾರೀ ಎಡ್ಡೆ ಗೊಬ್ಬಿಯ…ಸೂರ್ಯನ ಸೆಂಚುರಿಗೆ ತುಳುವಿನಲ್ಲೇ ಕೆಎಲ್ ರಾಹುಲ್ ಬಹುಪರಾಕ್
Suryakumar yadav - KL Rahul: 45 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ವೇಗದ ಶತಕದ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು.
Updated on: Jan 08, 2023 | 6:31 PM

ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಶನಿವಾರ ಸಿಕ್ಸ್ಗಳ ಸುರಿಮಳೆಯಾಗಿತ್ತು. ಹೀಗೆ ಸಿಕ್ಸ್-ಫೋರ್ಗಳ ಮೂಲಕ ಅಬ್ಬರಿಸಿದ್ದು ಮತ್ಯಾರೂ ಅಲ್ಲ, ಕ್ರಿಕೆಟ್ ಅಂಗಳದ ಹೊಸ 360 ಡಿಗ್ರಿ ಸೂರ್ಯಕುಮಾರ್ ಯಾದವ್. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸೂರ್ಯ ಅಕ್ಷರಶಃ ಅಬ್ಬರಿಸಿ ಶ್ರೀಲಂಕಾ ಬೌಲರ್ಗಳ ಬೆಂಡೆತ್ತಿದ್ದರು.

ಪರಿಣಾಮ ಕೇವಲ 45 ಎಸೆತಗಳಲ್ಲಿ ಸ್ಪೋಟಕ ಶತಕ ಮೂಡಿಬಂತು. ಈ ಸೆಂಚುರಿ ಬಳಿಕ ಕೂಡ ಆರ್ಭಟ ಮುಂದುವರೆಸಿದ ಸೂರ್ಯಕುಮಾರ್ ಯಾದವ್ ಅಂತಿಮವಾಗಿ 51 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಜೇಯ 112 ರನ್ ಚಚ್ಚಿದರು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ವೇಗದ ಟಿ20 ಶತಕ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡರು. ಅದು ಕೂಡ ಕೆಎಲ್ ರಾಹುಲ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ 46 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದೀಗ 45 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ವೇಗದ ಶತಕದ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಸೂರ್ಯನ ಈ ಸಿಡಿಲಬ್ಬರನ್ನು ಕೆಎಲ್ ರಾಹುಲ್ ಕೂಡ ಹೊಗಳಿರುವುದು ವಿಶೇಷ. ಅದು ಕೂಡ ಸ್ಥಳೀಯ ಭಾಷೆ ತುಳುವಿನಲ್ಲೇ ಶ್ಲಾಘಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಅತ್ತ ಸೂರ್ಯಕುಮಾರ್ ಯಾದವ್ ಶತಕ ಸಿಡಿಸುತ್ತಿದ್ದಂತೆ ಇತ್ತ ಇನ್ಸ್ಟಾಗ್ರಾಮ್ನಲ್ಲಿ ಕೆಎಲ್ ರಾಹುಲ್ ಈ ಇನಿಂಗ್ಸ್ನ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಫೋಟೋಗೆ ತುಳುವಿನಲ್ಲಿ 'ಭಾರೀ ಎಡ್ಡೆ ಗೊಬ್ಬಿಯ' (ತುಂಬಾ ಚೆನ್ನಾಗಿ ಆಡಿದ್ದೀಯಾ) ಎಂದು ಬರೆದುಕೊಂಡಿದ್ದಾರೆ. ಇದೀಗ ಕಣ್ಣನೂರು ಲೋಕೇಶ್ ರಾಹುಲ್ ಅವರ ಇನ್ಸ್ಟಾ ಪೋಸ್ಟ್ ಭಾರೀ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಸೂರ್ಯಕುಮಾರ್ ಅವರ ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಶ್ರೀಲಂಕಾ ತಂಡವು 137 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 91 ರನ್ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದುಕೊಂಡಿತು.
