AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರೀ ಎಡ್ಡೆ ಗೊಬ್ಬಿಯ…ಸೂರ್ಯನ ಸೆಂಚುರಿಗೆ ತುಳುವಿನಲ್ಲೇ ಕೆಎಲ್ ರಾಹುಲ್ ಬಹುಪರಾಕ್

Suryakumar yadav - KL Rahul: 45 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ವೇಗದ ಶತಕದ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು.

TV9 Web
| Edited By: |

Updated on: Jan 08, 2023 | 6:31 PM

Share
ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಶನಿವಾರ ಸಿಕ್ಸ್​ಗಳ ಸುರಿಮಳೆಯಾಗಿತ್ತು. ಹೀಗೆ ಸಿಕ್ಸ್​-ಫೋರ್​ಗಳ ಮೂಲಕ ಅಬ್ಬರಿಸಿದ್ದು ಮತ್ಯಾರೂ ಅಲ್ಲ, ಕ್ರಿಕೆಟ್​ ಅಂಗಳದ ಹೊಸ 360 ಡಿಗ್ರಿ ಸೂರ್ಯಕುಮಾರ್ ಯಾದವ್. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸೂರ್ಯ ಅಕ್ಷರಶಃ ಅಬ್ಬರಿಸಿ ಶ್ರೀಲಂಕಾ ಬೌಲರ್​ಗಳ ಬೆಂಡೆತ್ತಿದ್ದರು.

1 / 5
ಪರಿಣಾಮ ಕೇವಲ 45 ಎಸೆತಗಳಲ್ಲಿ ಸ್ಪೋಟಕ ಶತಕ ಮೂಡಿಬಂತು. ಈ ಸೆಂಚುರಿ ಬಳಿಕ ಕೂಡ ಆರ್ಭಟ ಮುಂದುವರೆಸಿದ ಸೂರ್ಯಕುಮಾರ್ ಯಾದವ್ ಅಂತಿಮವಾಗಿ 51 ಎಸೆತಗಳಲ್ಲಿ 9 ಸಿಕ್ಸ್​ ಹಾಗೂ 7 ಫೋರ್​ನೊಂದಿಗೆ ಅಜೇಯ 112 ರನ್​ ಚಚ್ಚಿದರು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ವೇಗದ ಟಿ20 ಶತಕ ಬಾರಿಸಿದ 2ನೇ ಬ್ಯಾಟರ್​ ಎನಿಸಿಕೊಂಡರು. ಅದು ಕೂಡ ಕೆಎಲ್ ರಾಹುಲ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

2 / 5
ಕೆಎಲ್ ರಾಹುಲ್ ವೆಸ್ಟ್​ ಇಂಡೀಸ್ ವಿರುದ್ಧದ 46 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದೀಗ 45 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ಸೂರ್ಯಕುಮಾರ್ ಯಾದವ್ ವೇಗದ ಶತಕದ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಸೂರ್ಯನ ಈ ಸಿಡಿಲಬ್ಬರನ್ನು ಕೆಎಲ್ ರಾಹುಲ್ ಕೂಡ ಹೊಗಳಿರುವುದು ವಿಶೇಷ. ಅದು ಕೂಡ ಸ್ಥಳೀಯ ಭಾಷೆ ತುಳುವಿನಲ್ಲೇ ಶ್ಲಾಘಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

3 / 5
ಅತ್ತ ಸೂರ್ಯಕುಮಾರ್ ಯಾದವ್ ಶತಕ ಸಿಡಿಸುತ್ತಿದ್ದಂತೆ ಇತ್ತ ಇನ್​ಸ್ಟಾಗ್ರಾಮ್​ನಲ್ಲಿ ಕೆಎಲ್ ರಾಹುಲ್ ಈ ಇನಿಂಗ್ಸ್​ನ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಈ ಫೋಟೋಗೆ ತುಳುವಿನಲ್ಲಿ 'ಭಾರೀ ಎಡ್ಡೆ ಗೊಬ್ಬಿಯ' (ತುಂಬಾ ಚೆನ್ನಾಗಿ ಆಡಿದ್ದೀಯಾ) ಎಂದು ಬರೆದುಕೊಂಡಿದ್ದಾರೆ. ಇದೀಗ ಕಣ್ಣನೂರು ಲೋಕೇಶ್ ರಾಹುಲ್ ಅವರ ಇನ್​ಸ್ಟಾ ಪೋಸ್ಟ್ ಭಾರೀ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

4 / 5
ಇನ್ನು ಸೂರ್ಯಕುಮಾರ್ ಅವರ ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಶ್ರೀಲಂಕಾ ತಂಡವು 137 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ 91 ರನ್​ಗಳ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದುಕೊಂಡಿತು.

5 / 5
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು

ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ

300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು

ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ

ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ

ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ

ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?

ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ