ಸಂಪೂರ್ಣ ಫಿಟ್ನೆಸ್ ಸಾಧಿಸಿರುವ ಮೊಹಮ್ಮದ್ ಶಮಿ ಬಂಗಾಳ ಪರ ವಿಜಯ್ ಹಝಾರೆ ಟ್ರೋಫಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಗುರುವಾರ ನಡೆಯಲಿರುವ ಹರ್ಯಾಣ ವಿರುದ್ಧದ ಪ್ರಿ ಕ್ವಾರ್ಟರ್ ಫೈನಲ್ ಶಮಿ ಬಂಗಾಳ ಪರ ಕಣಕ್ಕಿಳಿಯಲಿದ್ದು, ಇದೇ ವೇಳೆ NCAಯ ಫಿಸಿಯೋ ಅಥವಾ ತರಬೇತುದಾರ ಅವರ ಜೊತೆಯಿರಲಿದ್ದಾರೆ ಎಂದು ಕ್ರಿಕ್ಬಝ್ ವರದಿ ತಿಳಿಸಿದೆ. ಈ ಮೂಲಕ ಶಮಿ ಅವರ ಫಿಟ್ನೆಸ್ ಮೇಲೆ ನಿಗಾಯಿಡುವಂತೆ ಬಿಸಿಸಿಐ ಸೂಚಿಸಿದೆ.