AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ 9 ವರ್ಷಗಳ ಹಳೆಯ ದಾಖಲೆ ಮುರಿದ ಧೋನಿ..!

MS Dhoni: ಐಪಿಎಲ್ 2022 ಪ್ರಾರಂಭವಾಗುವ ಮೊದಲು ಧೋನಿ ಸಿಎಸ್‌ಕೆ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆದರೆ 8 ಪಂದ್ಯಗಳ ನಂತರ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿಕೊಂಡರು.

ಪೃಥ್ವಿಶಂಕರ
|

Updated on:May 03, 2022 | 4:09 PM

Share
ಐಪಿಎಲ್‌ ಟೂರ್ನಿ 2008ರಿಂದ ಆರಂಭವಾಗಿದ್ದು, ಧೋನಿ ಆರಂಭವಾದಾಗಿನಿಂದ ತಂಡಗಳ ನಾಯಕರಾಗಿದ್ದಾರೆ. ಆದರೆ ಧೋನಿ 2017 ರ ಆವೃತ್ತಿಯಲ್ಲಿ ಮಾತ್ರ ಪುಣೆಯ ನಾಯಕತ್ವವನ್ನು ವಹಿಸಿಕೊಂಡಿರಲಿಲ್ಲ. ಅವರು ಇದುವರೆಗೆ 205 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಇದರಲ್ಲಿ 122 ಗೆಲುವುಗಳು ಸೇರಿವೆ.

1 / 4
ತಂಡ ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದಾಗ ತಂಡವು ಋತುವಿನ ಮಧ್ಯದಲ್ಲಿ ಮತ್ತೊಮ್ಮೆ ಅಚ್ಚರಿ ಮೂಡಿಸಿತು. ಜಡೇಜಾ ನಾಯಕತ್ವದಿಂದ ಕೆಳಗಿಳಿದ ಕಾರಣ, ಧೋನಿ ಮತ್ತೊಮ್ಮೆ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು. ಈ ಎರಡನೇ ನಿರ್ಧಾರ ಐಪಿಎಲ್‌ನಲ್ಲೂ ದಾಖಲೆ ನಿರ್ಮಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕತ್ವವನ್ನು ಎಂಎಸ್ ಧೋನಿ ವಹಿಸಿಕೊಂಡಿದ್ದರು.

2 / 4
ಈ ನಿಟ್ಟಿನಲ್ಲಿ ಮಾಜಿ ಅನುಭವಿ ಬ್ಯಾಟ್ಸ್​ಮನ್ ರಾಹುಲ್ ದ್ರಾವಿಡ್ ಅವರ 9 ವರ್ಷಗಳ ಹಳೆಯ ದಾಖಲೆಯನ್ನು ಧೋನಿ ಮುರಿದಿದ್ದಾರೆ. 2013ರಲ್ಲಿ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಆಡಿದ್ದ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದರು. ಕೊನೆಯ ಪಂದ್ಯದ ಸಮಯದಲ್ಲಿ ದ್ರಾವಿಡ್​ಗೆ 40 ವರ್ಷ 268 ದಿನ ವಯಸ್ಸಾಗಿತ್ತು. ಈಗ ಧೋನಿ ವಯಸ್ಸು 40 ವರ್ಷ 298 ದಿನಗಳು.ಈ ಮೂಲಕ ಧೋನಿ ದ್ರಾವಿಡ್​ ದಾಖಲೆಯನ್ನು ಮುರಿದಿದ್ದಾರೆ.

3 / 4
ಧೋನಿ ನಾಯಕತ್ವ ವಹಿಸಿಕೊಂಡ ನಂತರ ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಬಲಿಷ್ಠ ಹೈದರಾಬಾದ್ ತಂಡವನ್ನು ಸೋಲಿಸಿತ್ತು. ಈ ಪಂದ್ಯದಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಆರಂಭಿಕ ಆಟಗಾರ ರುತುರಾಜ್ ದಾಖಲೆಯ 99 ರನ್ ಸಿಡಿಸಿದ್ದರು.

4 / 4

Published On - 3:50 pm, Tue, 3 May 22

Follow Us
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
‘ಕೆಡಿ’ ಸಿನಿಮಾ ನೋಡಿ ದರ್ಶನ್ ನೆನಪು ಮಾಡಿಕೊಂಡ ರಕ್ಷಿತಾ ಪ್ರೇಮ್
‘ಕೆಡಿ’ ಸಿನಿಮಾ ನೋಡಿ ದರ್ಶನ್ ನೆನಪು ಮಾಡಿಕೊಂಡ ರಕ್ಷಿತಾ ಪ್ರೇಮ್
ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು
ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು
ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು
ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ
ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು