ODI World Cup 2023: ಏಕದಿನ ವಿಶ್ವಕಪ್ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!
ODI World Cup 2023: ಅರ್ಹತಾ ಸುತ್ತಿನಿಂದ ಆಯ್ಕೆಯಾದ ಟೀಮ್ ಇಂಡಿಯಾದ ಎದುರಾಳಿಗಳಾರು ಎಂಬುದು ಕೂಡ ನಿರ್ಧಾರವಾಗಿವೆ. ಅದರಂತೆ ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.
Updated on: Jul 06, 2023 | 10:57 PM

ODI World Cup 2023: ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವ 10 ತಂಡಗಳು ಫೈನಲ್ ಆಗಿವೆ. ಇದರಲ್ಲಿ 8 ತಂಡಗಳು ನೇರವಾಗಿ ಅರ್ಹತೆ ಪಡೆದಿದ್ದರೆ, ಇದೀಗ ಅರ್ಹತಾ ಸುತ್ತಿನ ಮೂಲಕ 2 ತಂಡಗಳು ವಿಶ್ವಕಪ್ಗೆ ಎಂಟ್ರಿ ಕೊಟ್ಟಿದೆ.

ಇದರೊಂದಿಗೆ ಅರ್ಹತಾ ಸುತ್ತಿನಿಂದ ಆಯ್ಕೆಯಾದ ಟೀಮ್ ಇಂಡಿಯಾದ ಎದುರಾಳಿಗಳಾರು ಎಂಬುದು ಕೂಡ ನಿರ್ಧಾರವಾಗಿವೆ. ಅದರಂತೆ ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

1- ಅಕ್ಟೋಬರ್ 8: ಭಾರತ vs ಆಸ್ಟ್ರೇಲಿಯಾ (ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ)

2- ಅಕ್ಟೋಬರ್ 11: ಭಾರತ vs ಅಫ್ಘಾನಿಸ್ತಾನ್ (ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ)

3- ಅಕ್ಟೋಬರ್ 15: ಭಾರತ vs ಪಾಕಿಸ್ತಾನ (ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್)

4- ಅಕ್ಟೋಬರ್ 19: ಭಾರತ vs ಬಾಂಗ್ಲಾದೇಶ್ (ಎಂಸಿಎ ಸ್ಟೇಡಿಯಂ, ಪುಣೆ)

5- ಅಕ್ಟೋಬರ್ 22: ಭಾರತ vs ನ್ಯೂಝಿಲ್ಯಾಂಡ್ (ಹೆಚ್ಪಿಸಿಎ ಸ್ಟೇಡಿಯಂ, ಧರ್ಮಶಾಲಾ)

6- ಅಕ್ಟೋಬರ್ 29: ಭಾರತ vs ಇಂಗ್ಲೆಂಡ್ (ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ)

7- ನವೆಂಬರ್ 2: ಭಾರತ vs ಶ್ರೀಲಂಕಾ (ವಾಂಖೆಡೆ ಸ್ಟೇಡಿಯಂ, ಮುಂಬೈ)

8- ನವೆಂಬರ್ 5: ಭಾರತ vs ಸೌತ್ ಆಫ್ರಿಕಾ (ಈಡನ್ ಗಾರ್ಡನ್ಸ್, ಕೋಲ್ಕತ್ತಾ)

9- ನವೆಂಬರ್ 11: ಭಾರತ vs ನೆದರ್ಲ್ಯಾಂಡ್ಸ್ (ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಭಾರತದಲ್ಲಿ ನಡೆಯಲಿರುವ ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ನವೆಂಬರ್ 15 ಹಾಗೂ 16 ರಂದು ಸೆಮಿಫೈನಲ್ಸ್ ಪಂದ್ಯಗಳು ನಡೆದರೆ, ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19 ರಂದು ಫೈನಲ್ ಪಂದ್ಯ ಜರುಗಲಿದೆ.

TV9 Kannada
Read More




