Prithvi Shaw-Nidhi Tapadia: ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿ ಆ ಬಳಿಕ ನಂದಲ್ಲ ಎಂದ ಪೃಥ್ವಿ ಶಾ
Prithvi Shaw - Nidhi Tapadia: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ಪೃಥ್ವಿ ಶಾಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಕ್ಕಿರಲಿಲ್ಲ.
Updated on:Feb 14, 2023 | 6:35 PM

ವಾಲೆಂಟೈನ್ಸ್ ದಿನದಂದು ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಮ್ಮ ಗರ್ಲ್ಫ್ರೆಂಡ್ ತಪಾಡಿಯಾ ಜೊತೆಗಿನ ಈ ರೋಮ್ಯಾಂಟಿಕ್ ಚಿತ್ರವನ್ನು ಪ್ರೇಮಿಗಳ ದಿನದಂದು ಪೃಥ್ವಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದರು.

ಪ್ರಿಯತಮೆಗೆ ಮುತ್ತಿಕ್ಕಲು ಮುಂದಾಗುತ್ತಿರುವ ಈ ಫೋಟೋಗೆ ಹ್ಯಾಪಿ ವಾಲೆಂಟೈನ್ಸ್ ಡೇ ಮೈ ವೈಫಿ ಎಂದು ಕ್ಯಾಪ್ಷನ್ ನೀಡಿದ್ದರು. ಈ ಚಿತ್ರವು ವೈರಲ್ ಆಗುತ್ತಿದ್ದಂತೆ ಪೃಥ್ವಿ ಶಾ ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗೆಳೆತಿ ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿತು.

ಇದೀಗ ಈ ಫೋಟೋ ಕುರಿತಾಗಿ ಸ್ಪಷ್ಟನೆ ನೀಡಿರುವ ಪೃಥ್ವಿ ಶಾ, ಯಾರೋ ನನ್ನ ಫೋಟೋಗಳನ್ನು ಎಡಿಟ್ ಮಾಡಿದ್ದಾರೆ. ಅಲ್ಲದೆ ನನ್ನ ಇನ್ಸ್ಟಾ ಪುಟದಲ್ಲಿ ಹಾಕಲಾಗಿದೆ ಎಂದು ತೋರಿಸಿದ್ದಾರೆ. ಅದು ನಂದಲ್ಲ, ಈ ರೀತಿಯ ಎಲ್ಲಾ ಟ್ಯಾಗ್ಗಳನ್ನು ಮತ್ತು ಸಂದೇಶಗಳನ್ನು ನಿರ್ಲಕ್ಷಿಸಿ ಎಂದು ಪೃಥ್ವಿ ಶಾ ಬರೆದುಕೊಂಡಿದ್ದಾರೆ.

ಇದಾಗ್ಯೂ ವೈರಲ್ ಪ್ರಿಯರು ಮಾತ್ರ ಪೃಥ್ವಿ ಶಾ ಅವರ ಮಾತುಗಳನ್ನು ನಂಬಲು ಸುತಾರಂ ತಯಾರಿಲ್ಲ. ಬದಲಾಗಿ ನಿಧಿ ತಪಾಡಿಯಾ ಡಿಲೀಟ್ ಮಾಡುವಂತೆ ಹೇಳಿದ್ರಾ? ಮನೆಯಲ್ಲಿ ಬೈದ್ರಾ?...ಗರ್ಲ್ ಫ್ರೆಂಡ್ ಕೈಕೊಟ್ಲಾ...ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ.

ಮಾಡೆಲ್ ಕಮ್ ನಟಿಯಾಗಿರುವ ನಿಧಿ ತಪಾಡಿಯಾ ಜೊತೆ ಪೃಥ್ವಿ ಶಾ ಹಲವು ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ವರ್ಷಾರಂಭದಲ್ಲಿ ಈ ಜೋಡಿಯು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ವಾಲೆಂಟೈನ್ಸ್ ದಿನದಂದೇ ನಟಿಯ ಜೊತೆಗಿನ ಪೃಥ್ವಿ ಶಾ ಅವರ ರೋಮ್ಯಾಂಟಿಕ್ ಫೋಟೋ ವೈರಲ್ ಆಗಿದೆ.

ಮಾಡೆಲ್ ಕಮ್ ನಟಿಯಾಗಿರುವ ನಿಧಿ ತಪಾಡಿಯಾ ಜೊತೆ ಪೃಥ್ವಿ ಶಾ ಹಲವು ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ವರ್ಷಾರಂಭದಲ್ಲಿ ಈ ಜೋಡಿಯು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ವಾಲೆಂಟೈನ್ಸ್ ದಿನದಂದೇ ನಟಿಯ ಜೊತೆಗಿನ ಪೃಥ್ವಿ ಶಾ ಅವರ ರೋಮ್ಯಾಂಟಿಕ್ ಫೋಟೋ ವೈರಲ್ ಆಗಿದೆ.
Published On - 6:35 pm, Tue, 14 February 23
