AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ತಂಡದ ಗೆಲುವಿನ ಬೆನ್ನಲ್ಲೇ ಐಪಿಎಲ್​​ನಿಂದ 2 ತಂಡಗಳು ಔಟ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2026) ಪ್ಲೇಆಫ್ ರೇಸ್ ರಂಗೇರುತ್ತಿದೆ. ಹತ್ತು ತಂಡಗಳಲ್ಲಿ ಈಗಾಗಲೇ 2 ತಂಡಗಳು ಪ್ಲೇಆಫ್ ರೇಸ್​​ನಿಂದ ಹೊರಬಿದ್ದಿವೆ. ಇನ್ನುಳಿದ 8 ತಂಡಗಳ ನಡುವೆ ಪ್ಲೇಆಫ್ ಸ್ಥಾನ ಪೈಪೋಟಿ ಮುಂದುವರೆದಿದ್ದು, ಅಂತಿಮವಾಗಿ ದ್ವಿತೀಯ ಸುತ್ತಿಗೆ ಪ್ರವೇಶಿಸುವ 4 ತಂಡಗಳಾವುವು ಎಂಬ ಕುತೂಹಲ ಎಲ್ಲರಲ್ಲಿದೆ.

ಝಾಹಿರ್ ಯೂಸುಫ್
|

Updated on: May 11, 2026 | 7:25 AM

Share
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರೋಚಕ ಜಯ ಸಾಧಿಸಿದೆ. ರಾಯ್​ಪುರ್​ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. (PC: IPL)

1 / 6
ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20ನೇ ಓವರ್​ನ ಕೊನೆಯ ಎಸೆತದಲ್ಲಿ ಬೆನ್ನತ್ತಿ 2 ವಿಕೆಟ್​​ಗಳ ರೋಚಕ ಜಯ ಸಾಧಿಸಿದೆ. (PC: IPL)

2 / 6
ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾಯಿಂಟ್ಸಸ್​ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರುತ್ತಿದ್ದಂತೆ ಐಪಿಎಲ್ ಪ್ಲೇಆಫ್​ ರೇಸ್​​ನಿಂದ ಎರಡು ತಂಡಗಳು ಹೊರಬಿದ್ದಿವೆ. ಆ ತಂಡಗಳೆಂದರೆ... (PC: IPL)

3 / 6
ಲಕ್ನೋ ಸೂಪರ್ ಜೈಂಟ್ಸ್​: ಈ ಬಾರಿ ಐಪಿಎಲ್​ನಲ್ಲಿ ಈವರೆಗೆ 11 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್​ ತಂಡವು ಕೇವಲ 3 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಎಲ್​ಎಸ್​​ಜಿ ಗೆದ್ದರೂ 12 ಅಂಕಗಳನ್ನು ಮಾತ್ರ ಪಡೆಯಲಿದೆ. ಇತ್ತ ಟಾಪ್-4 ನಲ್ಲಿರುವ ತಂಡಗಳು 13 ಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿದ್ದು, ಹೀಗಾಗಿ ಎಲ್​ಎಸ್​ಜಿಗೆ ಪ್ಲೇಆಫ್​ಗೇರಲು ಅವಕಾಶ ಇರುವುದಿಲ್ಲ. (PC: IPL)

4 / 6
ಮುಂಬೈ ಇಂಡಿಯನ್ಸ್​: ಮುಂಬೈ ಪಡೆಯು ಈವರೆಗೆ 11 ಪಂದ್ಯಗಳನ್ನಾಡಿದ್ದು, ಈ ವೇಳೆ ಕೇವಲ 3 ಮ್ಯಾಚ್​ಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೂ 12 ಅಂಕಗಳನ್ನು ಮಾತ್ರ ಪಡೆಯಬಹುದು. ಇತ್ತ ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿರುವ ತಂಡಗಳು 13 ಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿರುವ ಕಾರಣ ಮುಂಬೈ ಇಂಡಿಯನ್ಸ್​​ಗೆ ಪ್ಲೇಆಫ್​ಗೇರಲು ಸಾಧ್ಯವಾಗುವುದಿಲ್ಲ. (PC: IPL)

5 / 6
ಅದರಂತೆ 12 ಅಂಕಗಳನ್ನು ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲುವುದರೊಂದಿಗೆ ಒಟ್ಟು 14 ಅಂಕಗಳನ್ನು ಪಡೆದುಕೊಂಡಿದೆ. ಇತ್ತ ಆರ್​ಸಿಬಿ 14 ಅಂಕಗಳನ್ನು ಪಡೆಯುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಅಧಿಕೃತವಾಗಿ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ. (PC: IPL)

6 / 6
Follow Us