AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rest of India squad: ಶೇಷ ಭಾರತ ತಂಡ ಪ್ರಕಟ: ಕನ್ನಡಿಗನಿಗೆ ನಾಯಕತ್ವ

Rest of India squad: ಈ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ ಶೇಷ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.

TV9 Web
| Edited By: |

Updated on: Feb 26, 2023 | 7:29 PM

Share
Irani Cup 2023: ಇರಾನಿ ಕಪ್ 2023ರ ಪಂದ್ಯಕ್ಕೆ ಶೇಷ ಭಾರತ ತಂಡವನ್ನು (Rest of India Squad) ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಮುನ್ನಡೆಸುತ್ತಿರುವುದು ವಿಶೇಷ. ಇನ್ನು ಈ ತಂಡದಲ್ಲಿ ತಂಡದಲ್ಲಿ ಯುವ ಬ್ಯಾಟ್ಸ್​ಮನ್ ಯಶ್​ ಧುಲ್, ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಸ್ಟಾರ್ ಆಟಗಾರರು ಸ್ಥಾನ ಸಹ ಪಡೆದಿದ್ದಾರೆ.

1 / 7
ಇನ್ನು ಈ ತಂಡದಲ್ಲಿ ಯುವ ಬ್ಯಾಟರ್​ ಸರ್ಫರಾಝ್ ಖಾನ್ ಆಯ್ಕೆಯಾಗಿಲ್ಲ. ಡಿವೈ ಪಾಟೀಲ್ ಕಪ್​ ಟೂರ್ನಿಯಲ್ಲಿ ಸರ್ಫರಾಝ್ ಅವರ ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ತಿಳಿಸಲಾಗಿದೆ.

2 / 7
ಇರಾನಿ ಕಪ್​ನಲ್ಲಿ ಶೇಷ ಭಾರತ ತಂಡವು ರಣಜಿ ಟ್ರೋಫಿ ಚಾಂಪಿಯನ್ ತಂಡದ ವಿರುದ್ಧ ಸೆಣಸಲಿದೆ. ಅದರಂತೆ 2022 ರ ರಣಜಿ ಟೂರ್ನಿ ಚಾಂಪಿಯನ್​ ಮಧ್ಯಪ್ರದೇಶ್ ಹಾಗೂ ಶೇಷ ಭಾರತ ತಂಡ ಮಾರ್ಚ್ 1 ರಿಂದ ಗ್ವಾಲಿಯರ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ.

3 / 7
ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಇರಾನಿ ಕಪ್ ಅನ್ನು ಆಯೋಜಿಸಿರಲಿಲ್ಲ. ಹೀಗಾಗಿ 2022ರ ರಣಜಿ ಚಾಂಪಿಯನ್ಸ್ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವಿನ ಪಂದ್ಯವನ್ನು ಈಗ ಆಯೋಜಿಸಲಾಗುತ್ತಿದೆ.

4 / 7
ಈ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ ಶೇಷ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.

5 / 7
ಶೇಷ ಭಾರತ ತಂಡ : ಮಯಾಂಕ್ ಅಗರ್ವಾಲ್ (ನಾಯಕ), ಸುದೀಪ್ ಕುಮಾರ್ ಘರಾಮಿ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಹಾರ್ವಿಕ್ ದೇಸಾಯಿ, ಮುಖೇಶ್ ಕುಮಾರ್, ಅತಿತ್ ಶೇತ್, ಚೇತನ್ ಸಕರಿಯಾ, ನವದೀಪ್ ಸೈನಿ, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಮಯಾಂಕ್ ಮಾರ್ಕಾಂಡೆ, ಸೌರಭ್ ಕುಮಾರ್, ಆಕಾಶ್ ದೀಪ್ ಕುಮಾರ್ , ಬಿ ಇಂದ್ರಜಿತ್, ಪುಲ್ಕಿತ್ ನಾರಂಗ್, ಯಶ್ ಧುಲ್.

6 / 7
ಮಧ್ಯಪ್ರದೇಶ ತಂಡ : ಹಿಮಾಂಶು ಮಂತ್ರಿ (ನಾಯಕ ಮತ್ತು ವಿಕೆಟ್ ಕೀಪರ್), ರಜತ್ ಪಾಟಿದಾರ್, ಯಶ್ ದುಬೆ, ಹರ್ಷ್ ಗಾವ್ಲಿ, ಶುಭಂ ಶರ್ಮಾ, ವೆಂಕಟೇಶ್ ಅಯ್ಯರ್, ಅಕ್ಷತ್ ರಘುವಂಶಿ, ಅಮನ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸರನ್ಶ್ ಜೈನ್, ಅವೇಶ್ ಖಾನ್, ಅಂಕಿತ್ ಕುಶ್ವಾಹ್, ಗೌರವ್ ಅದ್ಗಾರ್, ಗೌರವ್ ಯಾದಗರ್ , ಮಿಹಿರ್ ಹಿರ್ವಾನಿ.

7 / 7
Follow Us