AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2027: ಬಿಗ್ ಟ್ರೇಡ್… ಇಬ್ಬರು ಆಟಗಾರರ ತಂಡಗಳು ಅದಲು-ಬದಲು

Rishabh Pant: ರಿಷಭ್ ಪಂತ್ ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಪರವಾಗಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಐಪಿಎಲ್ 2025 ರಲ್ಲಿ ಎಲ್​ಎಸ್​ಜಿ ತಂಡದ ನಾಯಕನಾಗಿ ಕಣಕ್ಕಿಳಿದ ಪಂತ್ 14 ಪಂದ್ಯಗಳಲ್ಲಿ 312 ರನ್​ ಮಾತ್ರ ಕಲೆಹಾಕಿದ್ದರು. ಇನ್ನು ಐಪಿಎಲ್ 2026 ರಲ್ಲಿ ಪಂತ್ ಕಲೆಹಾಕಿದ್ದು 269 ರನ್​ಗಳು ಮಾತ್ರ. ಹೀಗಾಗಿಯೇ ಇದೀಗ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ಟ್ರೇಡ್ ಆಯ್ಕೆ ಮೂಲಕ ಮಾರಾಟ ಮಾಡಿದೆ.

ಝಾಹಿರ್ ಯೂಸುಫ್
|

Updated on: Jun 24, 2026 | 9:55 AM

Share
IPL 2027: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-20ರ ಹರಾಜಿಗೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಣ ಬಿಗ್ ಟ್ರೇಡ್ ಡೀಲ್ ಕುದುರಿದೆ. ಈ ಡೀಲ್​ ಮೂಲಕ ಎಲ್​ಎಸ್​ಎಜಿ ಫ್ರಾಂಚೈಸಿ ರಿಷಭ್ ಪಂತ್ (Rishabh Pant) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ಗೆ ನೀಡಿದ್ದಾರೆ. ಹಾಗೆಯೇ ಕುಲ್ದೀಪ್ ಯಾದವ್ (Kuldeep Yadav) ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. (PC: IPL)

1 / 5
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ರಿಷಭ್ ಪಂತ್ ಅವರನ್ನು  27 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಕಳೆದ ಎರಡು ಸೀಸನ್​ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿದ್ದ ಪಂತ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರನ್ನು ಟ್ರೇಡ್ ಮಾಡಿಕೊಳ್ಳಲು ಎಲ್​ಎಸ್​ಜಿ ಬಯಸಿತ್ತು. (PC: IPL)

2 / 5
ಇದೀಗ ಸ್ವಾಪ್ ಟ್ರೇಡ್ ಆಯ್ಕೆಯ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ಖರೀದಿಸಿದೆ. ಅದರಂತೆ ಐಪಿಎಲ್ 2027 ರಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಆದರೆ ಅದು 15 ಕೋಟಿ ರೂ.ಗೆ ಎಂಬುದು ವಿಶೇಷ. ಅಂದರೆ ಐಪಿಎಲ್ 2026 ರಲ್ಲಿ 27 ಕೋಟಿ ರೂ.ಗೆ ಲಕ್ನೋ ಪರ ಆಡಿದ್ದ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿರುವುದು ಕೇವಲ 15 ಕೋಟಿ ರೂ.ಗೆ ಎಂಬುದು ವಿಶೇಷ. (PC: Crictracker)

3 / 5
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗೆ 13.50 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ಆಟಗಾರರನ್ನು ಅದಲು-ಬದಲು ಮಾಡಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸ್ವಾಪ್ ಡೀಲ್ ಕುದುರಿಸಿಕೊಂಡಿದೆ. (PC: Crictracker)

4 / 5
ಇನ್ನು ಈ ಟ್ರೇಡ್ ಪ್ರಕ್ರಿಯೆನ್ನು ವಿಶ್ಲೇಷಿಸುವುದಾದರೆ, ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ನಡುವೆ ಒಬ್ಬ ವಿಶ್ವದರ್ಜೆಯ ಸ್ಪಿನ್ನರ್ ಸಿಕ್ಕಂತಾಗಿದೆ. ಹಾಗೆಯೇ ಹರಾಜಿಗೆ ದೊಡ್ಡ ಮೊತ್ತದ ಪರ್ಸ್ ಬ್ಯಾಲೆನ್ಸ್ ಲಭ್ಯವಾಗಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಹಳೆಯ ಸ್ಟಾರ್ ಮತ್ತು ನಾಯಕನನ್ನು ಮರಳಿ ಪಡೆದುಕೊಂಡಿದ್ದು, ಫ್ರಾಂಚೈಸಿಯ ಬಲವನ್ನು ಹೆಚ್ಚಿಸಿಕೊಂಡಿದೆ ಎನ್ನಬಹುದು. (PC: IPL)

5 / 5
Follow Us