ಭಾರತ 72 ರನ್ ಆಗುವ ಹೊತ್ತಿಗೆ 4 ವಿಕಟ್ ಕಳೆದುಕೊಂಡಿತು. ಈ ಸಂದರ್ಭ ಇಂಗ್ಲೆಂಡ್ ಮೇಲುಗೈ ಸಾಧಿಸಿತು ಎಂದೇ ನಂಬಲಾಗಿತ್ತು. ಆದರೆ, ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ರಿಷಭ್ ಪಂತ್ ಹಾಗೂ ಇವರಿಗೆ ಸಾಥ್ ನೀಡಿದ್ದು ಹಾರ್ದಿಕ್ ಪಾಂಡ್ಯ. ಪಂತ್-ಹಾರ್ದಿಕ್ ಕಡೆಯಿಂದ ಮೂಡಿಬಂದಿದ್ದು ಬರೋಬ್ಬರಿ 133 ರನ್ ಗಳ ಜೊತೆಯಾಟ.