AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಬಾಲ್ಯದ ಗೆಳೆಯ ನೀಡಿದ ಬ್ಯಾಟ್​ನಿಂದ ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ರೋಹಿತ್

Rohit Sharma century: ರೋಹಿತ್ ಶರ್ಮಾ ಲಾರ್ಡ್ಸ್‌ನಲ್ಲಿ ಸಿಡಿಸಿದ 138 ರನ್‌ಗಳ ಭರ್ಜರಿ ಶತಕ ನಿವೃತ್ತಿ ವದಂತಿಗಳಿಗೆ ಉತ್ತರ ನೀಡಿತು. ಈ ಸ್ಮರಣೀಯ ಇನ್ನಿಂಗ್ಸ್‌ಗೆ ರೋಹಿತ್ ಬಳಸಿದ್ದು ಶಾರ್ದೂಲ್ ಠಾಕೂರ್ ಅವರ ಬ್ಯಾಟ್ ಎಂಬ ಅಚ್ಚರಿಯ ಸಂಗತಿ ಈಗ ಬಹಿರಂಗವಾಗಿದೆ. ಶಾರ್ದೂಲ್ ನೀಡಿದ ಬ್ಯಾಟ್‌ನಿಂದಲೇ ರೋಹಿತ್ ವಿಶ್ವ ಕ್ರಿಕೆಟ್ ಜಗತ್ತನ್ನು ಮಂತ್ರಮುಗ್ಧಗೊಳಿಸಿದರು. ಅವರ ಬಾಲ್ಯದ ಗೆಳೆತನದ ಕಥೆಯೂ ಇಲ್ಲಿದೆ.

ಪೃಥ್ವಿಶಂಕರ
|

Updated on: Jul 20, 2026 | 4:19 PM

Share
 ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದ ಟೀಂ ಇಂಡಿಯಾಕ್ಕೆ ಏಕದಿನ ಸರಣಿಯೂ ಧಕ್ಕಲಿಲ್ಲ. ಆದರೆ ಈ ಮೈದಾನದಲ್ಲಿ ರೋಹಿತ್ ಶರ್ಮಾ ಸಿಡಿಸಿದ ಭರ್ಜರಿ ಶತಕ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ನಿವೃತ್ತಿಯ ವದಂತಿಗಳಿಗೆ ಈ ಶತಕದ ಮೂಲಕ ಉತ್ತರ ನೀಡಿದ ರೋಹಿತ್ ಹಲವು ದಾಖಲೆಗಳನ್ನು ನಿರ್ಮಿಸಿದರು(PC-PTI).

1 / 6
ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾಗೆ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಈ ಸರಣಿಯಲ್ಲಿ ಮಾತ್ರವಲ್ಲ ಈ ಇಡೀ ವರ್ಷ ರೋಹಿತ್ ಬ್ಯಾಟ್​​ನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿ ರೋಹಿತ್ ನಿವೃತ್ತಿ ನೀಡಲಿ ಎಂಬುದು ಹಲವರ ಅಭಿಪ್ರಾಯವಾಗಿತ್ತು. ಆದರೆ ರೋಹಿತ್ ಲಾರ್ಡ್ಸ್‌ನಲ್ಲಿ 138 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಕ್ರಿಕೆಟ್ ಜಗತ್ತನ್ನು ಮಂತ್ರಮುಗ್ಧಗೊಳಿಸಿತು(PC-PTI).

2 / 6
ಆದಾಗ್ಯೂ ರೋಹಿತ್ ಶತಕದ ಹಿಂದೆ ಇಲ್ಲೊಂದು ಕುತೂಹಲಕಾರಿ ಸಂಗತಿಯಿದೆ. ಲಾರ್ಡ್ಸ್‌ನಲ್ಲಿ ರೋಹಿತ್ ಶರ್ಮಾ ಇಂಗ್ಲಿಷ್ ಬೌಲರ್‌ಗಳನ್ನು ಬೆಂಡೆತ್ತಲು ಬಳಸಿದ ಬ್ಯಾಟ್ ಅವರದ್ದಾಗಿರಲಿಲ್ಲ. ಬದಲಿಗೆ ಟೀಂ ಇಂಡಿಯಾ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರದ್ದಾಗಿತ್ತು. ಸ್ವತಃ ಈ ವಿಚಾರವನ್ನು ಶಾರ್ದೂಲ್ ಠಾಕೂರ್ ಬಹಿರಂಗಪಡಿಸಿದ್ದಾರೆ(PC-PTI).

3 / 6
ರೋಹಿತ್ ಭಾಯ್​ಗೆ ನಾನು ಬಳಸುವ ಬ್ಯಾಟ್​ಗಳೆಂದರೆ ತುಂಬಾ ಇಷ್ಟ. ಹೀಗಾಗಿ ಒಮ್ಮೆ ಅವರು ನನ್ನಲ್ಲಿದ್ದ ಒಂದೆರಡು ಬ್ಯಾಟ್​ಗಳನ್ನು ಕೇಳಿದ್ದರು. ನಾವೆಲ್ಲರೂ ಅವರನ್ನು ತುಂಬಾ ಪ್ರೀತಿಸುತ್ತೇವೆ ಮತ್ತು ಅವರು ಕ್ರಿಕೆಟ್ ಮೈದಾನದಲ್ಲಿ ನಮಗೆ ಲೆಕ್ಕವಿಲ್ಲದಷ್ಟು ಸಂತೋಷದ ಕ್ಷಣಗಳನ್ನು ನೀಡಿದ್ದಾರೆ. ಆದ್ದರಿಂದ, ಅವರಿಗೆ ಬ್ಯಾಟ್ ನಿರಾಕರಿಸುವ ಪ್ರಶ್ನೆಯೇ ಇರಲಿಲ್ಲ(PC-PTI).

4 / 6
ಹಾಗಾಗಿ ನಾನು ಅವರಿಗೆ ನನ್ನ ಒಂದೆರಡು ಬ್ಯಾಟ್​ಗಳನ್ನು ನೀಡಿದ್ದೆ. ಇಂದು, ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ಅವರ ಸ್ಮರಣೀಯ ಶತಕವು ನಾನು ನೀಡಿದ ಬ್ಯಾಟ್‌ನಿಂದ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ(PC-PTI).

5 / 6
ರೋಹಿತ್ ಮತ್ತು ಶಾರ್ದೂಲ್ ಬಾಲ್ಯದಿಂದಲೂ ಒಬ್ಬರಿಗೊಬ್ಬರು ಪರಿಚಿತರು ಮತ್ತು ಒಂದೇ ಶಾಲೆಯಲ್ಲಿ ಓದಿದ್ದಾರೆ. ಇಬ್ಬರೂ ಮುಂಬೈ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ ಮತ್ತು ಶಾರ್ದೂಲ್, ರೋಹಿತ್ ನಾಯಕತ್ವದಲ್ಲಿ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್ ರೂಮ್ ಅನ್ನು ಸಹ ಅವರು ಹಂಚಿಕೊಂಡಿದ್ದಾರೆ(PC-PTI).

6 / 6
Follow Us