AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill: 10ನೇ ಶತಕದೊಂದಿಗೆ ವಿಶೇಷ ದಾಖಲೆ ಬರೆದ ಶುಭ್​ಮನ್ ಗಿಲ್

Shubman Gill: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ ಶುಭ್​ಮನ್ ಗಿಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಟೆಸ್ಟ್​ ಕ್ರಿಕೆಟ್​ನಲ್ಲಿ ಶುಭ್​ಮನ್ ಬ್ಯಾಟ್​ನಿಂದ ಮೂಡಿಬಂದಿರುವ ಮೂರನೇ ಶತಕ. ಇದಕ್ಕೂ ಮುನ್ನ ಗಿಲ್​ ಬಾಂಗ್ಲಾದೇಶ್ ವಿರುದ್ಧ 110 ರನ್ಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧ 128 ರನ್ಸ್ ಬಾರಿಸಿದ್ದರು.

TV9 Web
| Edited By: |

Updated on: Feb 04, 2024 | 2:59 PM

Share
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಶುಭ್​ಮನ್ ಗಿಲ್ (Shubman Gill) ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ್ದರು. ಪರಿಣಾಮ ಅವರ ಬ್ಯಾಟ್​ನಿಂದ ಕೇವಲ 59 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.

1 / 7
ಅರ್ಧಶತಕದ ಬಳಿಕ ತುಸು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ರನ್ ಪೇರಿಸುತ್ತಾ ಸಾಗಿದರು. ಅದರಲ್ಲೂ ಹೆಚ್ಚಿನ ರನ್​ಗಳನ್ನು ಸಿಕ್ಸ್​-ಫೋರ್​ಗಳೊಂದಿಗೆ ಕಲೆಹಾಕಿದ್ದು ವಿಶೇಷ. ಈ ಮೂಲಕ ಕೇವಲ 132 ಎಸೆತಗಳಲ್ಲಿ ಶುಭ್​ಮನ್ ಗಿಲ್ ಮೂರನೇ ಟೆಸ್ಟ್ ಶತಕ ಪೂರೈಸಿದರು.

2 / 7
ಈ ಶತಕದೊಂದಿಗೆ 24ನೇ ವಯಸ್ಸಿನೊಳಗೆ ಟೀಮ್ ಇಂಡಿಯಾ ಪರ ಅತ್ಯಧಿಕ ಸೆಂಚುರಿಗಳನ್ನು ಸಿಡಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿರುವುದು ಶತಕಗಳ ಸರದಾರರು ಎಂಬುದು ವಿಶೇಷ.

3 / 7
ಹೌದು, ಭಾರತದ ಪರ 24 ವಯಸ್ಸಿನೊಳಗೆ ಅತ್ಯಧಿಕ ಶತಕ ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 24 ವಯಸ್ಸು ದಾಟುವ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 30 ಶತಕಗಳನ್ನು ಬಾರಿಸಿದ್ದರು.

4 / 7
ಇನ್ನು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ 24 ವರ್ಷದೊಳಗೆ ಇಂಟರ್​ನ್ಯಾಷನಲ್ ಕ್ರಿಕೆಟ್​ನಲ್ಲಿ 21 ಬಾರಿ ಮೂರಂಕಿ ಮೊತ್ತ ಕಲೆಹಾಕಿದ್ದರು. ಅಂದರೆ ಕಿರಿ ವಯಸ್ಸಿನಲ್ಲೇ ಕೊಹ್ಲಿ 21 ಶತಕಗಳನ್ನು ಸಿಡಿಸಿದ್ದರು.

5 / 7
ಇದೀಗ ಇಂಗ್ಲೆಂಡ್​ ವಿರುದ್ಧ ಶತಕ ಸಿಡಿಸುವುದರೊಂದಿಗೆ ಶುಭ್​ಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಸೆಂಚುರಿಗಳನ್ನು ಪೂರೈಸಿದ್ದಾರೆ. ಇದಕ್ಕೂ ಮುನ್ನ ಟಿ20 ಕ್ರಿಕೆಟ್​ನಲ್ಲಿ 1 ಶತಕ ಸಿಡಿಸಿದ್ದ ಗಿಲ್, ಏಕದಿನ ಕ್ರಿಕೆಟ್​ನಲ್ಲಿ 6 ಸೆಂಚುರಿ ಬಾರಿಸಿದ್ದರು. ಇದೀಗ ಟೆಸ್ಟ್​ನಲ್ಲಿ ಮೂರನೇ ಶತಕ ಪೂರೈಸುವುದರೊಂದಿಗೆ 24 ವರ್ಷದೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ 3ನೇ ಭಾರತೀಯ ಎನಿಸಿಕೊಂಡಿದ್ದಾರೆ.

6 / 7
ಇನ್ನು ಈ ಪಂದ್ಯದಲ್ಲಿ 147 ಎಸೆತಗಳನ್ನು ಎದುರಿಸಿದ ಶುಭ್​ಮನ್ ಗಿಲ್ 2 ಭರ್ಜರಿ ಸಿಕ್ಸರ್ ಹಾಗೂ 11 ಫೋರ್​ಗಳೊಂದಿಗೆ 104 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಗಿಲ್ ಅವರ ಈ ಆಕರ್ಷಕ ಶತಕದ ನೆರವಿನಿಂದ 64 ಓವರ್​ಗಳ ಮುಕ್ತಾಯದ ವೇಳೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ 6 ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿದೆ. ಈ ಮೂಲಕ 370 ರನ್​ಗಳ ಮುನ್ನಡೆ ಸಾಧಿಸಿದೆ.

7 / 7
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ

ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?

ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ

ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ

ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!

ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್