AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೇ 3 ಎಸೆತಗಳಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಸೌತ್ ಆಫ್ರಿಕಾ

New Zealand vs South Africa: ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಭರ್ಜರಿ ಬ್ಯಾಟಿಂಗ್​​ನೊಂದಿಗೆ 17.1 ಓವರ್​​ಗಳಲ್ಲಿ ಚೇಸ್ ಮಾಡಿ  7 ವಿಕೆಟ್​​​ಗಳ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Feb 15, 2026 | 7:24 AM

Share
T20 World Cup 2026: ಟಿ20 ವಿಶ್ವಕಪ್​​ನ 25ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು.

1 / 7
ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಪರ ಎಡಗೈ ದಾಂಡಿಗ ಮಾರ್ಕ್​​ ಚಾಪ್ಮನ್ 26 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​​ಗಳೊಂದಿಗೆ 48 ರನ್ ಬಾರಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು.

2 / 7
176 ರನ್​​​ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ಐಡೆನ್ ಮಾರ್ಕ್ರಾಮ್ ಹಾಗೂ ಕ್ವಿಂಟನ್ ಡಿಕಾಕ್ ಸ್ಫೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್​​ನಿಂದಲೇ ಸಿಡಿಲಬ್ಬರದ ಶುರು ಮಾಡಿದ ಈ ಜೋಡಿಯು ಪ್ರಥಮ ವಿಕೆಟ್​​ಗೆ ಕೇವಲ 4.1 ಓವರ್​ಗಳಲ್ಲಿ 62 ರನ್ ಪೇರಿಸಿದ್ದರು. ಈ ಹಂತದಲ್ಲಿ ಡಿಕಾಕ್ (20) ಔಟಾದರು.

3 / 7
ಆದರೆ ಮತ್ತೊಂದೆಡೆ ರಯಾನ್ ರಿಕೆಲ್ಟನ್ ಜೊತೆಗೂಡಿ ಸಿಡಿಲಬ್ಬರ ಮುಂದುವರೆಸಿದ ಐಡೆನ್ ಮಾರ್ಕ್ರಾಮ್ ಪವರ್​ ಪ್ಲೇ ಮುಕ್ತಾಯದ ವೇಳೆಗೆ ತಂಡದ ಸ್ಕೋರ್​​ ಅನ್ನು 83 ಕ್ಕೆ ತಂದು ನಿಲ್ಲಿಸಿದರು. ಅಷ್ಟೇ ಅಲ್ಲದೆ 7.2 ಓವರ್​​​ಗಳಲ್ಲಿ 100 ರನ್​​ಗಳ ಗಡಿದಾಟಿದರು.

4 / 7
ಇತ್ತ 7.2 ಓವರ್​​ಗಳಲ್ಲಿ ಸೌತ್ ಆಫ್ರಿಕಾ ತಂಡವು ಮೂರಂಕಿ ಮೊತ್ತಗಳಿಸಿದರೂ ಕೇವಲ 3 ಎಸೆತಗಳಿಂದ ವಿಶ್ವ ದಾಖಲೆ ತಪ್ಪಿಸಿಕೊಂಡರು. ಅಂದರೆ ಟಿ20 ವಿಶ್ವಕಪ್​​ನಲ್ಲಿ ಅತೀ ಕಡಿಮೆ ಓವರ್​​ಗಳಲ್ಲಿ 100 ರನ್​ ಕಲೆಹಾಕಿದ ವಿಶ್ವ ದಾಖಲೆಯನ್ನು ಹೆಚ್ಚುವರಿ 3 ಎಸೆತಗಳನ್ನು ಆಡುವ ಮೂಲಕ ಸೌತ್ ಆಫ್ರಿಕಾ ತಂಡ ಕೈಚೆಲ್ಲಿಕೊಂಡರು.

5 / 7
ಈ ಭರ್ಜರಿ ದಾಖಲೆ ಟೀಮ್ ಇಂಡಿಯಾದ ಹೆಸರಿನಲ್ಲಿದೆ. ಭಾರತ ತಂಡವು ನಮೀಬಿಯ ವಿರುದ್ಧದ ಪಂದ್ಯದಲ್ಲಿ ಕೇವಲ 6.5 ಓವರ್​​ಗಳಲ್ಲಿ 100 ರನ್ ಕಲೆಹಾಕುವ ಮೂಲಕ ಈ ವಿಶ್ವ ದಾಖಲೆ ಬರೆದಿದೆ. ಈ ದಾಖಲೆಯನ್ನು ಮುರಿಯುವ ಅತ್ಯುತ್ತಮ ಅವಕಾಶ ಸೌತ್ ಆಫ್ರಿಕಾ ತಂಡದ ಮುಂದಿತ್ತು.

6 / 7
ಆದರೆ ಸೌತ್ ಆಫ್ರಿಕಾ ಬ್ಯಾಟರ್​​​ಗಳು ಹೆಚ್ಚುವರಿ 3 ಎಸೆತಗಳನ್ನು ಆಡುವ ಮೂಲಕ 7.2 ಓವರ್​​ಗಳಲ್ಲಿ 100 ರನ್​​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಹೆಸರಿನಲ್ಲಿದ್ದ ಭರ್ಜರಿ ವಿಶ್ವ ದಾಖಲೆಯನ್ನು ಸರಿಗಟ್ಟುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.

7 / 7
ಟಿವಿ9ನಿಂದ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಗಂಗಾ ನದಿಯ ಥೀಮ್​ನಲ್ಲಿ ಮಹಾಶಿವರಾತ್ರಿಗೆ ಸಜ್ಜಾಗಿದೆ ಇಶಾ ಫೌಂಡೇಷನ್

ಎತ್ತಿನ ಬಂಡಿಯಲ್ಲಿ ದುನಿಯಾ ವಿಜಯ್ ಪುತ್ರಿಯ ಮೆರವಣಿಗೆ: ವಿಡಿಯೋ

ಟಿವಿ9 ನವನಕ್ಷತ್ರ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ ಭಾವುಕ ಮಾತು

ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂಟೆರೋಗೆ ಟಿವಿ9 ನವ ನಕ್ಷತ್ರ ಪ್ರಶಸ್ತಿ

ಬೂಕರ್ ಪ್ರಶಸ್ತಿ ಲೇಖಕಿ ಬಾನು ಮುಷ್ತಾಕ್​ಗೆ ಟಿವಿ9 ನವ ನಕ್ಷತ್ರ ಅವಾರ್ಡ್​​

ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ; ಸ್ಫೋಟಕ ಮಾಹಿತಿ ನೀಡಿದ ಎಸ್​​ಪಿ

ಸರ್ಕಾರಿ ಮಕ್ಕಳಿಗೆ'ಸರ್ಪ್ರೈಸ್' ಕೊಟ್ಟ ಸಚಿವ ಜಮೀರ್

ಗುವಾಹಟಿಯಲ್ಲಿ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್
ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್