- Kannada News Photo gallery Cricket photos T20 World Cup 2024: South Africa Most matches won in a T20 WC edition
South Africa: ಟಿ20 ವಿಶ್ವಕಪ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸೌತ್ ಆಫ್ರಿಕಾ
T20 World Cup 2024: ಟಿ20 ವಿಶ್ವಕಪ್ನ 50ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಮಡ 135 ರನ್ ಕಲೆಹಾಕಿದರೆ, ಮಳೆಯ ಕಾರಣ ಡರ್ಕ್ವರ್ತ್ ಲೂಯಿಸ್ ನಿಯಮದಂತೆ ಸೌತ್ ಆಪ್ರಿಕಾ ತಂಡಕ್ಕೆ 17 ಓವರ್ಗಳಲ್ಲಿ 123 ರನ್ಗಳ ಗುರಿ ಪಡೆಯಿತು. ಈ ಗುರಿಯನ್ನು 16.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಸೌತ್ ಆಫ್ರಿಕಾ 3 ವಿಕೆಟ್ಗಳ ಜಯ ಸಾಧಿಸಿದೆ.
Updated on: Jun 24, 2024 | 1:25 PM

T20 World Cup 2024: ಟಿ20 ವಿಶ್ವಕಪ್ 2024ರಲ್ಲಿ ಸೌತ್ ಆಫ್ರಿಕಾ (South Africa) ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿದೆ. ಮೊದಲ ಸುತ್ತಿನಲ್ಲಿ 4 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದ ಆಫ್ರಿಕನ್ನರು, ಇದೀಗ ದ್ವಿತೀಯ ಸುತ್ತಿನಲ್ಲೂ 3 ಗೆಲುವು ದಾಖಲಿಸಿದೆ. ಈ ಗೆಲುವುಗಳ ಮೂಲಕ ಸೌತ್ ಆಫ್ರಿಕಾ ತಂಡ ಸೆಮಿಫೈನಲ್ಗೆ ಪ್ರವೇಶಿಸಿದೆ.

ವಿಶೇಷ ಎಂದರೆ ಈ 7 ಗೆಲುವುಗಳೊಂದಿಗೆ ಸೌತ್ ಆಫ್ರಿಕಾ ಟಿ20 ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಸಹ ಸತತ ಗೆಲುವುಗಳ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ ಇತಿಹಾಸದ ಆವೃತ್ತಿಯೊಂದರಲ್ಲಿ ಯಾವುದೇ ತಂಡ ಸತತ ಏಳು ಗೆಲುವು ಕಂಡಿಲ್ಲ.

2009 ರ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡ ಸತತ 6 ಗೆಲುವು ದಾಖಲಿಸಿ ದಾಖಲೆ ಬರೆದಿತ್ತು. ಇದಾದ ಬಳಿಕ 2010 ರಲ್ಲಿ ಆಸ್ಟ್ರೇಲಿಯಾ ತಂಡ ಸತತ 6 ಜಯ ಸಾಧಿಸಿ ಈ ದಾಖಲೆಯನ್ನು ಸರಿಗಟ್ಟಿತ್ತು. ಇನ್ನು 2021 ರಲ್ಲೂ ಆಸ್ಟ್ರೇಲಿಯಾ 6 ಗೆಲುವುಗಳೊಂದಿಗೆ ಈ ದಾಖಲೆಯನ್ನು ಪುನರಾವರ್ತಿಸಿತ್ತು.

ಇದೀಗ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ತಂಡವೊಂದು ಸತತ 7 ಗೆಲುವು ದಾಖಲಿಸಿದೆ. ಈ ಮೂಲಕ ಕಳೆದ 8 ವಿಶ್ವಕಪ್ ಆವೃತ್ತಿಗಳಲ್ಲಿ ಯಾವುದೇ ತಂಡಕ್ಕೆ ಸಾಧ್ಯವಾಗದ ವಿಶೇಷ ದಾಖಲೆಯೊಂದನ್ನು ಸೌತ್ ಆಫ್ರಿಕಾ ನಿರ್ಮಿಸಿದೆ.

ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತವಾಗಿ ಅತೀ ಹೆಚ್ಚು ಗೆಲುವು ದಾಖಲಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. 2022-2024 ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಸತತ 8 ಗೆಲುವು ದಾಖಲಿಸಿ ಈ ದಾಖಲೆ ನಿರ್ಮಿಸಿದೆ. ಇದೀಗ ಸತತ 7 ಜಯ ಸಾಧಿಸಿರುವ ಸೌತ್ ಆಫ್ರಿಕಾ ತಂಡ ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಜಯಭೇರಿ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




