AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರು ಅರ್ಧಶತಕ ಬಾರಿಸಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ವಿಲ್ ಜಾಕ್ಸ್​​ಗೆ..!

England vs Nepal: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​​ನ 5ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ನೇಪಾಳ ತಂಡವು 20 ಓವರ್​​ಗಳಲ್ಲಿ 180 ರನ್​​ಗಳಿಸಿ 4 ರನ್​​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ.

ಝಾಹಿರ್ ಯೂಸುಫ್
|

Updated on: Feb 09, 2026 | 8:56 AM

Share
ಟಿ20 ವಿಶ್ವಕಪ್​​ನ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಇಂಗ್ಲೆಂಡ್ ತಂಡ ರೋಚಕ ಜಯ ಸಾಧಿಸಿದೆ. ಅದು ಸಹ ಕೇವಲ 4 ರನ್​​​​ಗಳ ಅಂತರದಿಂದಓ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ 35 ಎಸೆತಗಳಲ್ಲಿ 55 ರನ್ ಬಾರಿಸಿದ್ದರು.

1 / 5
ಇದಾದ ಬಳಿಕ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಹ್ಯಾರಿ ಬ್ರೂಕ್ 32 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​​​ಗಳೊಂದಿಗೆ 53 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ ವಿಲ್ ಜಾಕ್ಸ್​ 18 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 1 ಫೋರ್​​ನೊಂದಿಗೆ ಅಜೇಯ 39 ರನ್​ ಚಚ್ಚಿದರು. ಈ ಮೂಲಕ 20 ಓವರ್​​ಗಳಲ್ಲಿ ಇಂಗ್ಲೆಂಡ್ 184 ರನ್ ಕಲೆಹಾಕಿತು.

2 / 5
ಈ ಗುರಿಯನ್ನು ಬೆನ್ನತ್ತಿದ ನೇಪಾಳ ತಂಡವು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಮೂಲಕ 19 ಓವರ್​​​ಗಳಲ್ಲಿ 175 ರನ್ ಕಲೆಹಾಕಿದ್ದರು. ಅದರಂತೆ ಅಂತಿಮ ಓವರ್​​ನಲ್ಲಿ 10 ರನ್​​ಗಳ ಅವಶ್ಯಕತೆಯಿತ್ತು. ಈ ವೇಳೆ ಕರಾರುವಾಕ್ ದಾಳಿ ಸಂಘಟಿಸಿದ ಸ್ಯಾಮ್ ಕರನ್ ಕೇವಲ 5 ರನ್ ಮಾತ್ರ ನೀಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ 4 ರನ್​​ಗಳ ರೋಚಕ ಜಯ ತಂದು ಕೊಟ್ಟರು.

3 / 5
ಈ ಪಂದ್ಯದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ವಿಲ್ ಜಾಕ್ಸ್​​ಗೆ ಎಂಬುದು ವಿಶೇಷ. ಅಂದರೆ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ ಹಾಗೂ ಹ್ಯಾರಿ ಬ್ರೂಕ್ ಸ್ಫೋಟಕ ಅರ್ಧಶತಕ ಬಾರಿಸಿದ್ದರೂ ಜಾಕ್ಸ್ ಅವರನ್ನು ಪ್ಲೇಯರ್ ಆಫ್ ದಿ ಮ್ಯಾಚ್​ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

4 / 5
ಇದಕ್ಕೆ ಮುಖ್ಯ ಕಾರಣ ವಿಲ್ ಜಾಕ್ಸ್ ಅವರ ಸ್ಟ್ರೈಕ್ ರೇಟ್. ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ್ದ ಜಾಕ್ಸ್ 216.67 ಸ್ಟ್ರೈಕ್ ರೇಟ್​​ನಲ್ಲಿ ಅಜೇಯ 39 ರನ್ ಚಚ್ಚಿದ್ದರು. ಅಷ್ಟೇ ಅಲ್ಲದೆ 2 ಓವರ್​​​ಗಳಲ್ಲಿ 17 ರನ್ ನೀಡಿ 1 ವಿಕೆಟ್​ ಅನ್ನು ಸಹ ಕಬಳಿಸಿದ್ದರು. ಅಂದರೆ ಇಲ್ಲಿ ಸ್ಟ್ರೈಕ್ ರೇಟ್ ಹಾಗೂ ವಿಕೆಟ್​ ಅನ್ನು ಪರಿಗಣನೆ ತೆಗೆದುಕೊಳ್ಳುವ ಮೂಲಕ 39 ರನ್​ ಗಳಿಸಿದ ವಿಲ್ ಜಾಕ್ಸ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ.

5 / 5
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ?

ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು

ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ

ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು

ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ

ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ

ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?

ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ

1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ

ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ