AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿತ್ಯ ಭವಿಷ್ಯ: ಇಂದು ಈ ರಾಶಿಯವರಿಂದ ವಿವಾಹದ ವಸ್ತುಸ್ಥಿತಿಯ ಅರಿವು, ಅತಿಯಾದ ದುಃಖ

Horoscope Today 21 July: ಜುಲೈ 21ರ ಇಂದಿನ ನಿತ್ಯ ಭವಿಷ್ಯವು ಪ್ರತಿಯೊಂದು ರಾಶಿಯವರಿಗೂ ಪ್ರೀತಿ, ಆರೋಗ್ಯ, ಆರ್ಥಿಕ ಸ್ಥಿತಿ ಮತ್ತು ಕುಟುಂಬ ಜೀವನದ ಬಗ್ಗೆ ಮಹತ್ವದ ಸೂಚನೆಗಳನ್ನು ನೀಡುತ್ತದೆ. ಕೆಲವರಿಗೆ ವಿವಾಹದ ಕುರಿತು ಅರಿವು ಮೂಡಿದರೆ, ಮತ್ತೆ ಕೆಲವರಿಗೆ ಆರ್ಥಿಕ ತೊಂದರೆ, ಆರೋಗ್ಯ ಸಮಸ್ಯೆಗಳು ಕಾಡಬಹುದು. ಹೊಸ ಅವಕಾಶಗಳು, ಅನಾರೋಗ್ಯದಿಂದ ಮುಕ್ತಿ, ಮತ್ತು ಬಂಧುಗಳ ಆಗಮನದಂತಹ ಶುಭ ಸಮಾಚಾರಗಳೂ ಇರಲಿವೆ. ಸಮಯ ಪಾಲನೆ, ಉತ್ತಮ ಅಭ್ಯಾಸಗಳ ಅಳವಡಿಕೆ ಹಾಗೂ ಅನಿರೀಕ್ಷಿತ ಒತ್ತಡಗಳ ನಿರ್ವಹಣೆ ಕುರಿತು ಎಚ್ಚರಿಕೆ ವಹಿಸಿ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರಿಂದ ವಿವಾಹದ ವಸ್ತುಸ್ಥಿತಿಯ ಅರಿವು, ಅತಿಯಾದ ದುಃಖ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jul 21, 2026 | 4:00 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಶುಕ್ಲ ಪಕ್ಷದ ಸಪ್ತಮೀ ತಿಥಿಯ ಮಂಗಳವಾರದಂದು ಕೇಳಿಕೊಂಡಿದ್ದು ಸಿಹದು, ಮುಖ್ಯವಾದುದರ ನಷ್ಟ, ಸಮಯ ಪಾಲನೆ ಅಸ್ತವ್ಯಸ್ತ, ಒಳ್ಳೆಯ ಅಭ್ಯಾಸಗಳ ಆರಂಭ, ಆಹಾರದಿಂದ ತೊಂದರೆ, ಅನಿರೀಕ್ಷಿತ ಒತ್ತಡ, ವೈವಾಹಿಕ ಜೀವನದ ಚಿಂತೆ ಇವೆಲ್ಲ ಇಂದಿನ ಭವಿಷ್ಯ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಪುನರ್ವಸು, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಸಪ್ತಮೀ ನಿತ್ಯನಕ್ಷತ್ರ : ಚಿತ್ರಾ, ಯೋಗ : ಶುಭ, ಕರಣ : ಗರಜ, ಸೂರ್ಯೋದಯ – 06 – 03 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:37 – 17:13, ಯಮಗಂಡ ಕಾಲ 09:15 – 10:50 ಗುಳಿಕ ಕಾಲ 12:26 – 14:02 ​

ಮೇಷ ರಾಶಿ :

ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದಿರುವ ಸಾಧ್ಯತೆ ಇದೆ.‌ ವಾಹನ ಖರೀಗೆ ಉತ್ಸಾಹ ಹೆಚ್ಚಿರುವುದು. ದೀರ್ಘ ಸಮಯದಿಂದ ಅನಾರೋಗ್ಯವು ಕಾಡುತ್ತಿದ್ದರೆ, ಇಂದು ಮುಕ್ತಿಪಡೆಯಬಹುದಾಗಿದೆ. ಮನೆಯ ಉತ್ಸವದಲ್ಲಿ ಪಾಲ್ಗೊಳ್ಳಲಾಗದು. ನಿಮಗೆ ಎದುರಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಿರಿ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ.

ವೃಷಭ ರಾಶಿ :

ನೂತನ ಗೃಹದ ಹುಡುಕಾಟ ಮಾಡಲಿದ್ದೀರಿ. ನಿಮ್ಮ ಸೌದರ್ಯದ ಬಗ್ಗೆ ನಿಮಗೆ ಹಮ್ಮು ಇರಬಹುದು. ಸಾಲ ಕೊಟ್ಟವರ ಕಾಟದಿಂದ ಹತಾಶರಾಗುವಿರಿ. ಹಳೆಯ ಪರಿಚಿತರ ಭೇಟಿಯಾಗಲಿದೆ. ಇದು ಆತ್ಮೀಯವಾಗುವ ಸಾಧ್ಯತೆ ಇದೆ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಬಂದೀತು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ಇಂದು ನಿಮ್ಮ ಸ್ನೇಹಿತರು ಮನೆಗೆ ಬರಬಹುದು.

ಮಿಥುನ ರಾಶಿ :

ನಿಮ್ಮನ್ನು ತಾತ್ಸಾರ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುವ ಸಾಧ್ಯತೆ ಇದೆ. ಮನಸ್ಸಿನ ನಿಗ್ರಹವನ್ನು ಮಾಡಲು ನೀವು ಬಹಳ ಪ್ರಯತ್ನಿಸುವಿರಿ. ಸಾಲಬಾಧೆಯ ಚಿಂತೆ ಕಾಡಲಿದೆ. ಪ್ರವಾಸದಲ್ಲಿ ಭೀತಿಯಾಗಲಿದೆ. ಅಸಮತೋಲನ ಆಹಾರದಿಂದ ನಿಮಗೆ ಕಷ್ಟವಾದೀತು. ನಿಮ್ಮ ಮಾತುಗಳು ಸರಿಯಾಗಿ ಸಂವಹವಾಗದೇ ಇದ್ದೀತು. ಮನೆಯವರ ಜೊತೆ ಪ್ರಯಾಣವನ್ನು ಮಾಡುವಿರಿ. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು.

ಕರ್ಕಾಟಕ ರಾಶಿ :

ಮಾಡಲು ಕೆಲಸಗಳಿದ್ದರೂ ಮಾಡದೇ ಸಮಯವನ್ನು ಹಾಳುಮಾಡುವಿರಿ. ದೂರದ ಊರಿಗೆ ಪ್ರಯಾಣವು ಅನಿರೀಕ್ಷಿತ ವಾಗಲಿದೆ. ಕೆಲಸದಿಂದ ನಿಮಗೆ ಅತಿಯಾದ ಮಾನಸಿಕ ಹಾಗೂ ದೈಹಿಕ ಆಯಾಸವಾಗಬಹುದು.‌ ಸ್ವಲ್ಪ ವಿಶ್ರಾಂತಿ ಪಡೆಯುವುದು ಉತ್ತಮ. ಹಲವು ದಿನಗಳ ಅನಂತರ ಓದುವ ಅಭ್ಯಾಸ ಆರಂಭವಾಗುವುದು. ಉನ್ನತ ಹುದ್ದೆಗೆ ಏರುವ ಅವಕಾಶ ಬರಲಿದ್ದು ಅದರಲ್ಲಿ ನಿಮಗೆ ಆಸಕ್ತಿ ಕಡಿಮೆಯಾಗುವುದು.

ಸಿಂಹ ರಾಶಿ :

ಉಲ್ಲಾಸ ಮತ್ತು ಸಂತೋಷಗಳು ಎಂದಿಗಿಂತ ಇಂದು ಹೆಚ್ಚು ಇರಲಿದೆ. ಅಪರೂಪದ ಆಹಾರವನ್ನು ಅತಿಯಾಗಿ ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಶೋಧನೆಯನ್ನು ಮಾಡುತ್ತಿದ್ದರೆ ನಿಮಗೆ ಹೆಚ್ಚಿನ ಬೆಂಬಲ, ಪ್ರೋತ್ಸಾಹಗಳು ಸಿಗಬಹುದು. ಸೊಂಟ ಭಾಗದಲ್ಲಿ ನೋವುಗಳು ಕಾಣಿಕೊಂಡೀತು. ನಿಮ್ಮ ವಿವೇಕವನ್ನು ಬಳಸಿ. ದೂರದ ಬಂಧುಗಳ ಆಗಮನವು ಆಗಲಿದೆ. ದೌರ್ಬಲ್ಯವನ್ನು ಮೆಟ್ಟಿ ಸಾಧಿಸಬೇಕಾದುದು ಇದೆ.

ಕನ್ಯಾ ರಾಶಿ :

ಇತರರಿಗೆ ಹೆಚ್ಚು ಮಾತನಾಡಿ ಕಿರಿಕಿರಿ ಹುಟ್ಟಿಸಬೇಡಿ. ಸಹನೆಯನ್ನೇ ನಿಮ್ಮ ಆಯುಧವನ್ನಾಗಿ ಮಾಡಿಕೊಳ್ಳಿ. ಅವಿವಾಹಿತರಿಗೆ ಕೊರಗು ದೂರಾಗುವುದು. ದ್ವೇಷವನ್ನು ಇಟ್ಟುಕೊಂಡು ನಿಮ್ಮ ಮನಸ್ಸನ್ನು ಪ್ರಕ್ಷುಬ್ಧಗೊಳಿಸಿಕೊಳ್ಳುವುದು ಬೇಡ. ನಿಮ್ಮ ಅಸೂಯೆ ಕೆಟ್ಟ ಕೆಲಸವನ್ನು ಮಾಡಿಸುವುದು. ವೃತ್ತಿಯನ್ನು ಆನಂದಿಸಿ, ಖುಷಿಯಿಂದ ಕೆಲಸಮಾಡಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸಲು ಕಷ್ಟವಾದೀತು.

ತುಲಾ ರಾಶಿ :

ನಿಮಗೆ ಅಪಮಾನ ಮಾಡಲು ಪಿತೂರಿಗಳೂ ಆಗಬಹುದು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಡಿ. ನಿಮ್ಮ ಉತ್ತಮ‌ವಾದ ಹವ್ಯಾಸಕ್ಕೆ ಗೌರವ ಸಿಗಬಹುದು. ಅನವರತ ಕೆಲಸದಿಂದ ನಿಮಗೆ ಸ್ವಲ್ಪ ವಿಶ್ರಾಂತಿಯು ಇಂದು ಸಿಗಲಿದೆ. ಹೊಸ ಉದ್ಯೋಗದ ಸುದ್ದಿ ನಿಮಗೆ ನೆಮ್ಮದಿ ಕೊಡುವುದು. ನೂತನ ಗೃಹ ನಿರ್ಮಾಣದ ಬಗ್ಗೆ ಯೋಜನೆಯನ್ನು ಕುಟುಂಬದ ಜೊತೆ ಕುಳಿತು ರೂಪಿಸುವಿರಿ. ಯಾರನ್ನೋ ಹೆದರಿಸಿ ಕೆಲಸ ಮಾಡಿಸಿಕೊಳ್ಳುವ ವಿಚಾರಕ್ಕೆ ಹೋಗುವುದು ಬೇಡ.

ವೃಶ್ಚಿಕ ರಾಶಿ :

ಕೆಲಸ ಇಲ್ಲದೇ ಇದ್ದರೂ ಸುಮ್ಮನೇ ಕುಳಿತುಕೊಳ್ಳುವುದು ಬೇಡ. ಅಸಾಧ್ಯವನ್ನು ಸಾಧಿಸುವ ಛಲವನ್ನು ಬಿಟ್ಟು ಸರಿಯಾದುದರ ಕಡೆಗೆ ಹೋಗುವುದು ಒಳ್ಳೆಯದು. ಮಕ್ಕಳು ನಿಮ್ಮ ಜೊತೆ ಸುತ್ತಾಡಲು ಬರುವರು. ಹೂಡಿಕೆಯ ನೆಪದಲ್ಲಿ ಒಂದಿಷ್ಟು ನಷ್ಟವು ನಿಮಗೆ ಗೊತ್ತಾಗದಂತೆ ಖಾಲಿಯಾಗುವುದು. ಸಮಯ ಹಾಗೂ ಹಣ ಎರಡನ್ನೂ ಜೋಪಾನ‌ ಮಾಡಿಕೊಳ್ಳಿ. ನಿಮ್ಮ ಭೂಮಿಯು ನಿಮಗೆ ಸಿಗಲಿದೆ. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ.

ಧನು ರಾಶಿ :

ನಿಮಗೆ ಮನೆಯವರ ಸಹಕಾರದಿಂದ ಎಲ್ಲ ಕಾರ್ಯವನ್ನು ಮಾಡುವಿರಿ. ನಿದ್ರಾಹೀನತೆಯಿಂದ ಸ್ವಲ್ಪ ಆಲಸ್ಯವೂ ಇರಲಿದೆ. ಇಷ್ಟವಾದರ ಮಾತುಗಳು ನಿಮಗೆ ಬೇರೆ ರೀತಿಯಲ್ಲಿ ಅನ್ನಿಸಬಹುದು. ಮಕ್ಕಳ ವರ್ತನೆಯು ಊಹಿಸಲಾಗಸಷ್ಟು ಬದಲಾವಣೆಯಾಗಲಿದ್ದು, ಬೇಸರವಾಗಲಿದೆ. ಯಾರದೋ ಕಾರಣಕ್ಕೆ ನೀವು ಓಡಾಟ ಮಾಡಬೇಕಾಗುವುದು. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು.

ಮಕರ ರಾಶಿ :

ಇಂದು ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಸ್ನೇಹಿತರ ಜೊತೆ ದಿನವನ್ನು ಕಳೆಯಲು ಹೊರಗೆ ಸುತ್ತಾಡಲು ಹೋಗುವಿರಿ. ಅಪರಿಚಿತರು ನಿಮಗೆ ಸಹಾಯವನ್ನು ಮಾಡುವರು. ಪಾಲುದಾರಿಕೆಯಲ್ಲಿ ಬರುವ ಮನಸ್ತಾಪವನ್ನು ಮುಂದುವರಿಸದೇ ಅಲ್ಲಿಯೇ ಮೊಟಕುಗೊಳಿಸಿ. ಇಂದು ನಿಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಾರಿರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ.

ಇದನ್ನೂ ಓದಿ: ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ

ಕುಂಭ ರಾಶಿ :

ಇಂದು ಕೆಟ್ಟ ಕನಸುಗಳು ಬೀಳಬಹುದು. ಬೆಳಗ್ಗೆ ದೇವರಿಗೆ ದೀಪ ಬೆಳಗಿ. ಮೇಲಧಿಕಾರಿಗಳ ಮಾತು ನಿಮ್ಮ ಉತ್ಸಾಹವನ್ನು ತಗ್ಗಿಸೀತು. ಮಕ್ಕಳಿಗಾಗಿ ನೀವು ಸಂಪತ್ತನ್ನು ಕೂಡಿಡುವಿರಿ. ಇಬ್ಬರ ಮಧ್ಯದಲ್ಲಿ ನೀವು ಸಿಕ್ಕಿಬೀಳಬಹುದು. ದಾಂಪತ್ಯದಲ್ಲಿ ಒಡಕು ಬರುವ ಸಾಧ್ಯತೆ ಇದೆ. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ದಿನದ ಕೊನೆಗೆ ಯಾರಿಂದಲಾದರೂ ಶುಭ ವಾರ್ತೆ ಬರಲಿದೆ.

ಮೀನ ರಾಶಿ :

ಇಂದು ನಡೆಯುವ ನಕಾರಾತ್ಮಕ ವಾರ್ತೆಯನ್ನು ಲೆಕ್ಕಿಸದೇ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಮಾಡುವ ಕೆಲಸದಲ್ಲಿ ಉತ್ಸಾಹವು ಅಧಿಕವಾಗಿರಲಿದೆ. ಭೂಮಿಯ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ಇರುವ ಗೌರವವನ್ನು ಉಳಿಸಿಕೊಳ್ಳಿ. ಅಪೂರ್ಣವಾದ ವ್ಯವಹಾರಗಳನ್ನು ಶೀಘ್ರವಾಗಿ ಮುಗಿಸಿಕೊಳ್ಳುವಿರಿ. ನಿಮ್ಮ ಜೊತೆ ಬಂದವರು ನಿಮಗೆ ಶ್ರೇಯಸ್ಸನ್ನು ಹಾರೈಸುವರು. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು.

– ಲೋಹಿತ್ ಹೆಬ್ಬಾರ್-8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 am, Tue, 21 July 26

Follow Us
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು
ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ
ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ
ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ
ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ
ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ
ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ
ಚನ್ನಮ್ಮ ಪಾರ್ಥಿವ ಶರೀರ ಹೊತ್ತು ತರಲು ಹೂವಿನ ಪಲ್ಲಕಿ ಹೇಗಿದೆ ನೋಡಿ
ಚನ್ನಮ್ಮ ಪಾರ್ಥಿವ ಶರೀರ ಹೊತ್ತು ತರಲು ಹೂವಿನ ಪಲ್ಲಕಿ ಹೇಗಿದೆ ನೋಡಿ