AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಳಿ ನದಿಯ ಒಡಲಿಗೆ ಕನ್ನ: ಕಾರವಾರದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ; ಗೋವಾಕ್ಕೂ ಸಾಗಾಟ!

ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ದಂಧೆಕೋರರ ಪಾಲಿಗೆ ಚಿನ್ನದ ಗಣಿಯಾಗಿದೆ. ಏಕೆಂದರೆ ದಂಧೆಕೋರರು ನದಿಯ ಒಡಲು ಬಗೆಯುವ ಮೂಲಕ ಅಕ್ರಮ ಮರಳುಗಾರಿಕೆ ನಡೆಸಿದ್ದಾರೆ. ಹಗಲು-ರಾತ್ರಿ ನಡೆಯುತ್ತಿದ್ದ ಮರಳು ಲೂಟಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಲಾಗಿದೆ. ದಂಧೆಕೋರರ ಅಟ್ಟಹಾಸಕ್ಕೆ ಬ್ರೇಕ್ ಹಾಕುವಂತೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.

ಕಾಳಿ ನದಿಯ ಒಡಲಿಗೆ ಕನ್ನ: ಕಾರವಾರದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ; ಗೋವಾಕ್ಕೂ ಸಾಗಾಟ!
ಅಕ್ರಮ ಮರಳುಗಾರಿಕೆImage Credit source: tv9 kannada
ಅಶೋಕ್​ ಪೂಜಾರಿ
| Edited By: |

Updated on:Sep 27, 2026 | 5:54 PM

Share

ಕಾರವಾರ, ಸೆಪ್ಟೆಂಬರ್​​ 27: ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ಕಾಳಿ ನದಿಯ ಒಡಲಿಗೆ ಅಕ್ರಮ ದಂಧೆಕೋರರು ಕನ್ನ ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಮರಳುಗಾರಿಕೆಗೆ ಯಾವುದೇ ಅಧಿಕೃತ ಅನುಮತಿ ಇಲ್ಲದಿದ್ದರೂ, ಕಾನೂನನ್ನು ಗಾಳಿಗೆ ತೂರಿ ಹಗಲು-ರಾತ್ರಿ ಎನ್ನದೆ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ನಡೆಯುತ್ತಿರುವ ಈ ಮಹಾಲೂಟಿಯ ದೃಶ್ಯಗಳು ಟಿವಿ9 ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಧಿಕಾರಿಗಳ ಕಣ್ಣೆದುರೇ ನೆರೆಯ ಗೋವಾ ರಾಜ್ಯಕ್ಕೂ ಇಲ್ಲಿನ ಮರಳು ರಾಜಾರೋಷವಾಗಿ ಸಾಗಾಟವಾಗುತ್ತಿದೆ. ಈ ಬಗ್ಗೆ ಧ್ವನಿ ಎತ್ತಿದ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಲಾಗಿದೆ.

ದಂಧೆಕೋರರ ಪಾಲಿಗೆ ಚಿನ್ನದ ಗಣಿಯಾದ ಕಾಳಿ ನದಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮ ಪ್ರಕೃತಿ ಸೌಂದರ್ಯದ ನಾಡು. ಇಲ್ಲಿ ಹರಿಯುವ ಕಾಳಿ ನದಿಯ ಒಡಲು ಈಗ ದಂಧೆಕೋರರ ಪಾಲಿಗೆ ಚಿನ್ನದ ಗಣಿಯಾಗಿದೆ. ಕಿನ್ನರ ಗ್ರಾಮದಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸ್ಥಳೀಯವಾಗಿ ದೊಡ್ಡ ಬೋಟ್‌ಗಳ ಮೂಲಕ ನಡು ನದಿಗೆ ತೆರಳುವ ದಂಧೆಕೋರರು, ನಿರಂತರವಾಗಿ ಮರಳು ಸಂಗ್ರಹಿಸುತ್ತಿದ್ದಾರೆ.

ಹೊರರಾಜ್ಯದ ಕಾರ್ಮಿಕರಿಂದ ಹಗಲು-ರಾತ್ರಿ ಲೂಟಿ

ಶಾಕಿಂಗ್​ ವಿಚಾರ ಏನಂದರೆ ಈ ಅಕ್ರಮ ದಂಧೆಗಾಗಿ ಉತ್ತರ ಭಾರತದ ಬಿಹಾರ ಮೂಲದ ಕಾರ್ಮಿಕರನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ನದಿ ತೀರದಲ್ಲೇ ಅವರಿಗೆ ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿದ್ದು, ನಿರಂತರವಾಗಿ ಮರಳು ಲೂಟಿ ಮಾಡಿ, ದಂಡೆಯ ಮೇಲೆ ಬೆಟ್ಟದಂತೆ ರಾಶಿ ಹಾಕಲಾಗುತ್ತಿದೆ. ಹಗಲಿನಲ್ಲಿ ನದಿಯಿಂದ ಮರಳು ಎತ್ತುವ ದಂಧೆಕೋರರು, ರಾತ್ರಿಯಾಗುತ್ತಿದ್ದಂತೆ ಟಿಪ್ಪರ್ ಹಾಗೂ ಲಾರಿಗಳ ಮೂಲಕ ಬೇರೆಡೆಗೆ ಸಾಗಿಸುತ್ತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಗೋವಾ ರಾಜ್ಯಕ್ಕೂ ಇಲ್ಲಿಂದ ಟಿಪ್ಪರ್‌ಗಳು ಮರಳು ಹೊತ್ತು ಸಾಗುತ್ತಿವೆ.

LIVE TV

ಈ ಅಕ್ರಮ ಮರಳುಗಾರಿಕೆ ವಿರುದ್ಧ ಕಿನ್ನರ ಗ್ರಾಮಸ್ಥರು ಈಗ ಕೆರಳಿ ಕೆಂಡವಾಗಿದ್ದಾರೆ. ಪ್ರಜಾ ಸೇವಾ ಅಭಿಯಾನದ ಮೂಲಕ ಗ್ರಾಮದ ನಿವಾಸಿ ವಿಜಯ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿಂದೆ ಅಕ್ರಮವನ್ನು ಪ್ರಶ್ನಿಸಿದಾಗ ತಮ್ಮ ಮೇಲೆ ದಂಧೆಕೋರರು ಹಲ್ಲೆ ನಡೆಸಿರುವುದಾಗಿ ಕೂಡ ತಿಳಿಸಿದ್ದಾರೆ. ಕಿಂಚಿತ್ತೂ ಹೆದರದೆ ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಇದನ್ನು ತಡೆಯುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾಗೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ಹೇಳಿದ್ದಿಷ್ಟು 

ಅಕ್ರಮ ಮರಳು ತುಂಬಿದ ಭಾರಿ ವಾಹನಗಳ ಓಡಾಟದಿಂದಾಗಿ ಹಳ್ಳಿಯ ರಸ್ತೆಗಳು ಹಾಳಾಗಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು ‘ಗಣಿ ಮತ್ತು ಪೊಲೀಸ್ ಇಲಾಖೆಯ ಪ್ರತ್ಯೇಕ ತಂಡವನ್ನು‌ ನಿಯೋಜಿಸಿ, ಚೆಕ್ ಪೋಸ್ಟ್ ತೆರೆದು ಅಕ್ರಮಕ್ಕೆ ಬ್ರೇಕ್ ಹಾಕುವುದಾಗಿ’ ತಿಳಿಸಿದ್ದಾರೆ.

ಇದನ್ನೂ ಓದಿ: ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ

ಜಿಲ್ಲಾಧಿಕಾರಿಗಳು ಈಗ ಮತ್ತೊಮ್ಮೆ ಗಣಿ ಮತ್ತು ಪೊಲೀಸ್ ಇಲಾಖೆ ಮೂಲಕ ಜಂಟಿ ಹದ್ದಿನ ಕಣ್ಣು ಇಡಲು ಮುಂದಾಗಿದ್ದಾರೆ. ಆದರೆ ಪ್ರತಿ ಬಾರಿ ದೂರು ಬಂದಾಗ ಮಾತ್ರ ಒಂದಷ್ಟು ವಾರ ಸುಮ್ಮನಾಗುವ ದಂಧೆಕೋರರು, ಅಧಿಕಾರಿಗಳು ನಿಗಾ ಸಡಿಲಿಸುತ್ತಿದ್ದಂತೆ ಮತ್ತೆ ಆಕ್ಟೀವ್ ಆಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅಧಿಕಾರಿಗಳು ಶಾಶ್ವತವಾಗಿ ಈ ಮರಳು ದಂಧೆಗೆ ಬ್ರೇಕ್ ಹಾಕ್ತಾರಾ, ಕಿನ್ನರ ಗ್ರಾಮಸ್ಥರಿಗೆ ದಂಧೆಕೋರರಿಂದ ಮುಕ್ತಿ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:58 pm, Sun, 27 September 26

Follow Us
ಅಶೋಕ್​ ಪೂಜಾರಿ
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಏತ ನೀರಾವರಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಸಾವಿರಾರು ಮರಗಳಿಗೆ ಅಪಾಯ
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ