AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೂ ಉಂಟೆ.. ವಿರಾಟ್ ಕೊಹ್ಲಿ ಔಟಾಗಿದಕ್ಕೆ ಫಿಲಿಪ್ಸ್ ಕಂಪೆನಿಗೆ ಬೈಗುಳ..!

IND vs NZ: ಚಾಂಪಿಯನ್ಸ್ ಟ್ರೋಫಿಯ 12ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 249 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 205 ರನ್​ಗಳಿಗೆ ಆಲೌಟ್ ಆಗಿದೆ. ಈ ಸೋಲಿನ ಹೊರತಾಗಿಯೂ ಈ ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ ಹಿಡಿದ ಕ್ಯಾಚ್ ಎಲ್ಲರನ್ನು ನಿಬ್ಬೆರಗಾಗಿಸಿತ್ತು.

ಝಾಹಿರ್ ಯೂಸುಫ್
|

Updated on:Mar 03, 2025 | 10:55 AM

Share
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 3ನೇ ಓವರ್​ನಲ್ಲೇ ಶುಭ್​​ಮನ್ ಗಿಲ್ (2) ವಿಕೆಟ್ ಕಳೆದುಕೊಂಡಿತು. ಆ ಬಳಿಕ ಬಂದ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರೂ, ಗ್ಲೆನ್ ಫಿಲಿಪ್ಸ್ ಹಿಡಿದ ಕ್ಯಾಚ್​ನಿಂದಾಗಿ ಹೊರನಡೆಯಬೇಕಾಯಿತು.

1 / 5
ಮ್ಯಾಟ್ ಹೆನ್ರಿ ಎಸೆದ 7ನೇ ಓವರ್​ನ 4ನೇ ಎಸೆತವನ್ನು ಕೊಹ್ಲಿ ಕಟ್ ಶಾಟ್ ಬಾರಿಸಿದ್ದರು. ಆದರೆ ಬ್ಯಾಕ್​ವರ್ಡ್ ಪಾಯಿಂಟ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಗ್ಲೆನ್ ಫಿಲಿಪ್ಸ್ ಅತ್ಯದ್ಭುತ ಡೈವಿಂಗ್​ನೊಂದಿಗೆ ಚೆಂಡನ್ನು ಹಿಡಿದರು. ಈ ಕ್ಯಾಚ್ ನೋಡಿ ಖುದ್ದು ವಿರಾಟ್ ಕೊಹ್ಲಿಯೇ ದಂಗಾಗಿ ನಿಂತಿದ್ದರು.

2 / 5
ಅತ್ತ ವಿರಾಟ್ ಕೊಹ್ಲಿ (11) ಔಟಾಗಿ ಪೆವಿಲಿಯನ್ ಸೇರುತ್ತಿದ್ದಂತೆ ಇತ್ತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಗದ್ದಲ ಎಬ್ಬಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಗ್ಲೆನ್ ಫಿಲಿಪ್ಸ್​ ಅವರನ್ನು ಅವಾಚ್ಯ ಪದಗಳೊಂದಿಗೆ ನಿಂದಿಸಲಾರಂಭಿಸಿದ್ದರು. ಆದರೆ ಹೀಗೆ ನಿಂದಿಸಿದ್ದು ಎಲೆಕ್ಟ್ರಾನಿಕ್ ಕಂಪನಿ ಫಿಲಿಪ್ಸ್ ಅನ್ನು ಎಂಬುದೇ ಇಲ್ಲಿ ಟ್ವಿಸ್ಟ್.

3 / 5
ಅಂದರೆ ಗ್ಲೆನ್ ಫಿಲಿಪ್ಸ್ ಅವರ ಇನ್​ಸ್ಟಾಗ್ರಾಮ್ ಖಾತೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಅನೇಕರು ಫಿಲಿಪ್ಸ್ ಕಂಪೆನಿಯ ಸೋಷಿಯಲ್ ಮೀಡಿಯಾ ಪೋಸ್ಟ್​ಗಳಿಗೆ ಅವಾಚ್ಯ ಶಬ್ದಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಕೊಹ್ಲಿಯ ಕ್ಯಾಚ್ ಹಿಡಿದಿದ್ದಕ್ಕೆ ಫಿಲಿಪ್ಸ್ ಅವರನ್ನು ಜರಿಯಲಾರಂಭಿಸಿದ್ದಾರೆ.

4 / 5
ಪರಿಣಾಮ ಎಲೆಕ್ಟ್ರಾನಿಕ್ ಕಂಪನಿ ಫಿಲಿಪ್ಸ್ ಖಾತೆಯಲ್ಲಿ ಇದೀಗ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ರಾಶಿ ರಾಶಿ ಕಾಮೆಂಟ್​ಗಳು ಬಂದು ಬಿದ್ದಿವೆ. ಆದರೆ ಕ್ರಿಕೆಟ್​ಗೂ ತನಗೂ ಯಾವುದೇ ಸಂಬಂಧವಿಲ್ಲದಿದ್ದರೂ, ವಿರಾಟ್ ಕೊಹ್ಲಿಯ ಕೆಲ ಅಭಿಮಾನಿಗಳ ಅತಿರೇಕದ ವರ್ತನೆಯಿಂದಾಗಿ ಫಿಲಿಪ್ಸ್ ಕಂಪೆನಿಗೆ ಶಾಕ್ ಆಗಿದ್ದಂತು ನಿಜ.

5 / 5

Published On - 9:04 am, Mon, 3 March 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ