WPL 2026: RCB ನಾಲ್ವರನ್ನು ಮಾತ್ರ ಉಳಿಸಿಕೊಳ್ಳಲು ಇದುವೇ ಅಸಲಿ ಕಾರಣ..!
WPL 2026 Retention List: ವುಮೆನ್ಸ್ ಪ್ರೀಮಿಯರ್ ಲೀಗ್ನ 4ನೇ ಸೀಸನ್ಗಾಗಿ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಗರಿಷ್ಠ ಐವರನ್ನು ಉಳಿಸಿ, ಉಳಿದ ಆಟಗಾರ್ತಿಯರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಅದರಂತೆ ಆರ್ಸಿಬಿ ತಂಡವು ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿಯೊಂದು ಹೊರಬಿದ್ದಿದೆ.
Updated on: Nov 06, 2025 | 8:24 AM

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಒಟ್ಟು ನಾಲ್ವರು ಆಟಗಾರ್ತಿಯರನ್ನು ರಿಟೈನ್ ಮಾಡಿಕೊಂಡಿದೆ. ಗರಿಷ್ಠ ಐವರನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ ಆರ್ಸಿಬಿ ನಾಲ್ವರನ್ನು ಮಾತ್ರ ಏಕೆ ರಿಟೈನ್ ಮಾಡಿದೆ ಎಂಬ ಪ್ರಶ್ನೆ ಮೂಡುವುದು ಸಹಜ.

ವುಮೆನ್ಸ್ ಪ್ರೀಮಿಯರ್ ಲೀಗ್ ರಿಟೆನ್ಷನ್ ನಿಯಮದ ಪ್ರಕಾರ, ಒಂದು ಫ್ರಾಂಚೈಸಿ ಗರಿಷ್ಠ ಐವರನ್ನು ಉಳಿಸಿಕೊಳ್ಳಲು ಬಯಸಿದರೆ ಅದರಲ್ಲಿ ಒಬ್ಬರು ಅನ್ಕ್ಯಾಪ್ಡ್ ಆಟಗಾರ್ತಿ ಇರಬೇಕು. ಅಂದರೆ ರಾಷ್ಟ್ರೀಯ ತಂಡದ ಪರ ಆಡಿರದ ಆಟಗಾರ್ತಿಯನ್ನು ಒಳಗೊಂಡಂತೆ ಐವರನ್ನು ಉಳಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಇತ್ತ ಆರ್ಸಿಬಿ ತಂಡದಲ್ಲಿರುವವರು ಬಹುತೇಕರು ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರ್ತಿಯರು. ಇನ್ನು ಅನ್ಕ್ಯಾಪ್ಡ್ ಆಗಿರುವ ಪ್ಲೇಯರ್ಸ್ ಕಳೆದ ಸೀಸನ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಲ್ವರು ಸ್ಟಾರ್ ಆಟಗಾರ್ತಿಯರನ್ನು ಮಾತ್ರ ಉಳಿಸಿಕೊಂಡಿದೆ. ಇದಾಗ್ಯೂ ಆರ್ಸಿಬಿ ಫ್ರಾಂಚೈಸಿಗೆ ಓರ್ವ ಆಟಗಾರ್ತಿ ಮೇಲೆ ಆರ್ಟಿಎಂ ಕಾರ್ಡ್ ಬಳಸಲು ಕೂಡ ಅವಕಾಶವಿದೆ. ಇನ್ನು ಆರ್ಸಿಬಿ ತಂಡದಲ್ಲಿ ರಿಟೈನ್ ಆಗಿರುವ ನೋಡುವುದಾದರೆ...

ಸ್ಮೃತಿ ಮಂಧಾನ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಅವರನ್ನು ಆರ್ಸಿಬಿ ಫ್ರಾಂಚೈಸಿ ಮೊದಲ ಆಯ್ಕೆಯಾಗಿ ರಿಟೈನ್ ಮಾಡಿಕೊಂಡಿದೆ. ಅದರಂತೆ ಸ್ಮೃತಿ ಮಂಧಾನ ಅವರಿಗೆ ಆರ್ಸಿಬಿ 3.50 ಕೋಟಿ ರೂ. ಪಾವತಿಸಲಿದೆ.

ಎಲ್ಲಿಸ್ ಪೆರ್ರಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ದ್ವಿತೀಯ ರಿಟೆನ್ಷನ್ ಆಗಿ ಆಸ್ಟ್ರೇಲಿಯನ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಅವರನ್ನು ಆಯ್ಕೆ ಮಾಡಿದೆ. ಅದರಂತೆ ಎಲ್ಲಿಸ್ ಪೆರ್ರಿಗೆ ಆರ್ಸಿಬಿ ಫ್ರಾಂಚೈಸಿ 2.5 ಕೋಟಿ ರೂ. ಸಂಭಾವನೆ ನೀಡಲಿದೆ.

ರಿಚಾ ಘೋಷ್: ಆರ್ಸಿಬಿ ತಂಡವು ಮೂರನೇ ರಿಟೈನ್ ಆಗಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಆಯ್ಕೆಯಾಗಿದ್ದಾರೆ. ಕಳೆದ ಮೂರು ಸೀಸನ್ಗಳಿಂದ ಆರ್ಸಿಬಿ ಪರ ಕಣಕ್ಕಿಳಿಯುತ್ತಿರುವ ರಿಚಾ ಘೋಷ್ಗೆ ಆರ್ಸಿಬಿ 1.75 ಕೋಟಿ ರೂ. ಪಾವತಿಸಲಿದೆ.

ಶ್ರೇಯಾಂಕಾ ಪಾಟೀಲ್: ಕರುನಾಡ ಕುವರಿ ಶ್ರೇಯಾಂಕಾ ಪಾಟೀಲ್ ಅವರನ್ನು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಲ್ಕನೇ ಆಟಗಾರ್ತಿಯಾಗಿ ಆಯ್ಕೆ ಮಾಡಿಕೊಂಡಿದೆ. ಅದರಂತೆ ಶ್ರೇಯಾಂಕಾ ಆರ್ಸಿಬಿ ಪಾವತಿಸಲಿರುವ ಮೊತ್ತ 1 ಕೋಟಿ ರೂ.
