AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

FIFA World Cup 2026: ಹೂಸ್ಟನ್‌ನಲ್ಲಿ ನಡೆದ ಫಿಫಾ ವಿಶ್ವಕಪ್​ನ 45ನೇ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮುಂದಾಳತ್ವದ ಪೋರ್ಚುಗಲ್ ತಂಡ ಭರ್ಜರಿ ಜಯ ಸಾಧಿಸಿದೆ. ಉಜ್ಬೇಕಿಸ್ತಾನ್ ವಿರುದ್ಧದ ಈ ಪಂದ್ಯದಲ್ಲಿ ಪೋರ್ಚುಗಲ್ ಪಡೆ 5 ಗೋಲುಗಳಿಸುವ ಮೂಲಕ ಏಕಪಕ್ಷೀಯ ಪಂದ್ಯವನ್ನು ಗೆದ್ದುಕೊಂಡಿದ್ದಾರೆ. 

ಝಾಹಿರ್ ಯೂಸುಫ್
|

Updated on:Jun 24, 2026 | 8:02 AM

Share
ಫುಟ್‌ಬಾಲ್ ಸಾಮ್ರಾಜ್ಯದ ಅಧಿಪತಿ, ದಾಖಲೆಗಳ ಸರದಾರ, ಮೈದಾನದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಜಗದೇಕ ವೀರ ಜಗದೇಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಮತ್ತೆ ತಲೆ ಎತ್ತಿ ನಿಂತಿದ್ದಾರೆ. ಆದರೆ ಈ ಬಾರಿ ನಿಂತಿರುವುದು ವಿಶ್ವಕಪ್​ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ಅಪರೂಪದ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಎಂಬುದು ವಿಶೇಷ. (PC: AFP)

1 / 6
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ಗೋಲು ಗಳಿಸದೇ ಟೀಕಾಗಾರರ ಬಾಯಿಗೆ ಆಹಾರವಾಗಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಇದೀಗ ಒಂದೇ ಮ್ಯಾಚ್​ನಲ್ಲಿ ಎರಡು ಗೋಲು ಬಾರಿಸಿ ಮಿಂಚಿದ್ದಾರೆ. ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆದ ಉಜ್ಬೇಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ಟಿಯಾನೊ ಅದ್ಭುತ ಪ್ರದರ್ಶನದೊಂದಿಗೆ 6ನೇ ನಿಮಿಷದಲ್ಲೇ ಮೊದಲು ಗೋಲು ಬಾರಿಸಿದ್ದರು. (PC: gettyimages)

2 / 6
ಇದಾದ ಬಳಿಕ 39ನೇ ನಿಮಿಷದಲ್ಲಿ ಬ್ರೂನೋ ಫೆರ್ನಾಂಡಿಸ್ ನೀಡಿದ ನಿಖರವಾದ ಪಾಸ್ ಅನ್ನು ಬಳಸಿಕೊಂಡ ಕ್ರಿಸ್ಟಿಯಾನೊ ರೊನಾಲ್ಡೊ ಅದ್ಭುತ ಸ್ಲೈಡ್ ಶಾಟ್​ನೊಂದಿಗೆ ತಮ್ಮ ಎರಡನೇ ಗೋಲು ಗಳಿಸಿದರು. ಈ ಎರಡು ಗೋಲುಗಳೊಂದಿಗೆ ಕ್ರಿಸ್ಟಿಯಾನೊ (10 ಗೋಲು) ಪೋರ್ಚುಗಲ್​ ಪರ ವಿಶ್ವಕಪ್​ನಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. (PC: gettyimages)

3 / 6
ಅಷ್ಟೇ ಅಲ್ಲದೆ ವಿಶ್ವಕಪ್ ಇತಿಹಾಸದಲ್ಲೇ ಸತತ 6 ಆವೃತ್ತಿಗಳಲ್ಲಿ ಗೋಲು ಬಾರಿಸಿದ ವಿಶ್ವದ ಏಕೈಕ ಕಾಲ್ಚೆಂಡು ಚತುರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಂದರೆ ರೊನಾಲ್ಡೊ ಅವರನ್ನು ಹೊರತುಪಡಿಸಿ ವಿಶ್ವದ ಯಾವುದೇ ಆಟಗಾರ ಸತತ 6 ವಿಶ್ವಕಪ್​ನಲ್ಲಿ ಗೋಲು ಬಾರಿಸಿಲ್ಲ. (PC: gettyimages)

4 / 6
ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಈವರೆಗೆ 6 ಫಿಫಾ ವಿಶ್ವಕಪ್ ಆಡಿದ್ದರೂ, ಅವರು 2010ರ ವಿಶ್ವಕಪ್‌ನಲ್ಲಿ ಯಾವುದೇ ಗೋಲು ದಾಖಲಿಸಿರಲಿಲ್ಲ. ಇದೀಗ ಮೆಸ್ಸಿಗೆ ಸಾಧ್ಯವಾಗದ ಅಪರೂಪದ ವಿಶ್ವ ದಾಖಲೆಯನ್ನು ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮದಾಗಿಸಿಕೊಂಡಿದ್ದಾರೆ. (PC: gettyimages)

5 / 6
ಕ್ರಿಸ್ಟಿಯಾನೋ ರೊನಾಲ್ಡೊ 2006 (ಜರ್ಮನಿ), 2010 (ಸೌತ್ ಆಫ್ರಿಕಾ), 2014 (ಬ್ರೆಝಿಲ್), 2018 (ರಷ್ಯಾ), 2022 (ಖತರ್)  ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ್ದರು. ಇದೀಗ ಯುಎಸ್​ಎ-ಮೆಕ್ಸಿಕೋ-ಕೆನಡಾ ಜಂಟಿಯಾಗಿ ಆಯೋಜಿಸುತ್ತಿರುವ ವಿಶ್ವಕಪ್​ನಲ್ಲೂ ಗೋಲು ದಾಖಲಿಸಿ ಸತತ 6 ಫಿಫಾ ವಿಶ್ವಕಪ್​ನಲ್ಲಿ ಗೋಲು ಬಾರಿಸಿದ ವಿಶ್ವದ ಏಕೈಕ ಆಟಗಾರ ಎಂಬ ಸಾರ್ವಕಾಲಿಕ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: gettyimages)

6 / 6

Published On - 8:00 am, Wed, 24 June 26

Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ

'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?

ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!

ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ

‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ

ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!

ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ

ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ

ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?