- Kannada News Photo gallery Daali Dhananjay Invites Allu Arjun Rashmika Mandanna To his wedding Cinema News in Kannada
ಡಾಲಿ ಮದುವೆಗೆ ಬರ್ತಾರೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ? ತಲುಪಿತು ಆಮಂತ್ರಣ
ಇನ್ನು ಕೆಲವೇ ದಿನಗಳಲ್ಲಿ ಡಾಲಿ ಧನಂಜಯ್ ಹಾಗೂ ಧನ್ಯತಾ ಅವರ ವಿವಾಹ ನೆರವೇರಲಿದೆ. ಈ ವಿವಾಹಕ್ಕೆ ಎಲ್ಲರಿಗೂ ಆಮಂತ್ರಣ ತಲುಪಿದೆ. ಈಗ ‘ಪುಷ್ಪ 2’ ತಂಡಕ್ಕೂ ಅಲ್ಲು ಅರ್ಜುನ್ ವಿವಾಹ ಆಮಂತ್ರಣ ನೀಡಿದ್ದಾರೆ. ಈ ಮೂಲಕ ಇವರೆಲ್ಲರೂ ವಿವಾಹಕ್ಕೆ ಬರುತ್ತಾರಾ ಎನ್ನುವ ಕುತೂಹಲ ಮೂಡಿದೆ.
Updated on: Feb 08, 2025 | 10:06 AM

‘ಪುಷ್ಪ 2’ ಚಿತ್ರದ ಮುಖ್ಯ ಪಿಲ್ಲರ್ ಪುಷ್ಪರಾಜ್. ಈ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಈಗ ಅಲ್ಲು ಅರ್ಜುನ್ಗೆ ಡಾಲಿ ಧನಂಜಯ ಅವರು ವಿವಾಹ ಆಮಂತ್ರಣ ನೀಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರಿಗೂ ಡಾಲಿ ಧನಂಜಯ್ ಆಮಂತ್ರಣ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಿಂದ ರಶ್ಮಿಕಾ ದೂರವೇ ಇದ್ದರು. ಈಗ ಸ್ಯಾಂಡಲ್ವುಡ್ ವಿವಾಹಕ್ಕೆ ಅವರು ಆಗಮಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

‘ಪುಷ್ಪ 2’ ಚಿತ್ರದ ನಿರ್ದೇಶಕ ಸುಕುಮಾರ್ ಅವರಿಗೂ ವಿವಾಹ ಆಮಂತ್ರಣ ತಲುಪಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. ‘ಪುಷ್ಪ 3’ ಚಿತ್ರವನ್ನು ಅವರು ಮಾಡುವುದಾಗಿ ಸೂಚನೆ ಕೊಟ್ಟಿದ್ದಾರೆ.

‘ಮೈತ್ರಿ ಮೂವೀ ಮೇಕರ್ಸ್’ ‘ಪುಷ್ಪ 2’ ಚಿತ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದೆ. ಇದರ ನಿರ್ಮಾತೃರಿಗೂ ಇನ್ವಿಟೇಷನ್ ಹೋಗಿದೆ. ಸ್ವತಃ ಧನಂಜಯ್ ಅವರೇ ಕಚೇರಿಗೆ ತೆರಳಿ ಮಾಹಿತಿ ನೀಡಿದ್ದಾರೆ.

ಡಾಲಿ ಧನಂಜಯ್ ಅವರು ವಿವಾಹ ಆಗ್ತಿರೋದು ಧನ್ಯತಾ ಅವರನ್ನು. ಅವರು ವೃತ್ತಿಯಲ್ಲಿ ವೈದ್ಯೆ. ಫೆಬ್ರವರಿ 16ರಂದು ಧನಂಜಯ್ ಅವರು ಮೈಸೂರಿನಲ್ಲಿ ವಿವಾಹ ಆಗುತ್ತಿದ್ದಾರೆ.




