- Kannada News Photo gallery Darling Krishna celebrates his birthday with wife Milana Nagaraj in Maldives
Darling Krishna Birthday: ಬರ್ತ್ಡೇ ಪ್ರಯುಕ್ತ ಮಾಲ್ಡೀವ್ಸ್ಗೆ ತೆರಳಿದ ಡಾರ್ಲಿಂಗ್ ಕೃಷ್ಣ-ಮಿಲನಾ; ಇಲ್ಲಿವೆ ಕ್ಯೂಟ್ ಜೋಡಿಯ ಫೋಟೋ
Darling Krishna Milana Nagaraj Photos: ಬರ್ತ್ಡೇ ಆಚರಿಸಲು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಮಾಲ್ಡೀವ್ಸ್ಗೆ ಹೋಗಿದ್ದಾರೆ. ಸುಂದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
Updated on:Jun 12, 2022 | 2:34 PM

Darling Krishna celebrates his birthday with wife Milana Nagaraj in Maldives

Darling Krishna celebrates his birthday with wife Milana Nagaraj in Maldives

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರು 2021ರ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರು ಸ್ಯಾಂಡಲ್ವುಡ್ನಲ್ಲಿ ಯಶಸ್ವಿ ಜೋಡಿ ಎನಿಸಿಕೊಂಡಿದ್ದಾರೆ.

‘ಲವ್ ಮಾಕ್ಟೇಲ್’ ಸಿನಿಮಾ ಮೂಲಕ ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಬಳಿಕ ‘ಲವ್ ಮಾಕ್ಟೇಲ್ 2’ ಸಿನಿಮಾ ಮಾಡಿ ಇವರಿಬ್ಬರು ಯಶಸ್ಸು ಕಂಡರು. ಸದ್ಯ ಬಹುಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಡಾರ್ಲಿಂಗ್ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಕೃಷ್ಣ ನಟನೆಯ ‘ದಿಲ್ ಪಸಂದ್’ ಚಿತ್ರದಿಂದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಆಗಿದೆ. ನಿರ್ದೇಶಕ ಶಶಾಂಕ್ ಜೊತೆ ಕೃಷ್ಣ ಅವರ ಹೊಸ ಚಿತ್ರ ಘೋಷಣೆ ಆಗಿದೆ.
Published On - 2:30 pm, Sun, 12 June 22




