Darshan-Yuva: ದರ್ಶನ್-ಯುವ ರಾಜ್ಕುಮಾರ್ ಆಲಿಂಗನ, ಇಲ್ಲಿವೆ ಚಿತ್ರಗಳು
Darshan-Yuva: ಹಳೆ ಕಹಿಯನ್ನು ಮರೆತು ಪರಸ್ಪರ ಸ್ನೇಹದ ಹಸ್ತವನ್ನು ದರ್ಶನ್ ಚಾಚಿದ್ದಾರೆ. 'ಕ್ರಾಂತಿ' ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಹೊಸಪೇಟೆ ಘಟನೆ ಬಳಿಕ ದರ್ಶನ್ ಹಾಗೂ ದೊಡ್ಮನೆ ನಡುವೆ ವೈಮನಸ್ಯ ಉಂಟಾಗಿತ್ತು, ಆದರೆ ಹಳೆಯದನ್ನು ಮರೆತು ದರ್ಶನ್ ಸ್ನೇಹದ ಹಸ್ತ ಚಾಚಿದ್ದಾರೆ. ಇಲ್ಲಿದೆ ಚಿತ್ರಗಳು.
Updated on: Sep 01, 2023 | 10:30 PM
Share

ನಟ ದರ್ಶನ್, ಯುವರಾಜ್ ಕುಮಾರ್ ಸಿನಿಮಾ ಸೆಟ್ಗೆ ಇಂದು (ಸೆಪ್ಟೆಂಬರ್ 1) ಭೇಟಿ ನೀಡಿದ್ದರು.

ಯುವರಾಜ್ ಕುಮಾರ್ ನಟನೆಯ 'ಯುವ' ಸಿನಿಮಾದ ಚಿತ್ರೀಕರಣ ಎಚ್ಎಂಟಿ ಫ್ಯಾಕ್ಟರಿಯಲ್ಲಿ ನಡೆಯುತ್ತಿದೆ.

ಹೊಸಕೋಟೆ ಘಟನೆ ಬಳಿಕ ದೊಡ್ಮನೆ ಹಾಗೂ ದರ್ಶನ್ ನಡುವೆ ಕಂದಕ ಏರ್ಪಟ್ಟಿತ್ತು, ಆ ಕಾರಣಕ್ಕೆ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ದರ್ಶನ್ ಹೊಸಪೇಟೆ ಪ್ರಕರಣದಲ್ಲಿ ಅಪ್ಪು ಅಭಿಮಾನಿಗಳ ವಿರುದ್ಧ ದೋಷಾರೋಪಣೆ ಕೇಳಿ ಬಂದಿದ್ದಾಗ ಯುವ ಅಭಿಮಾನಿಗಳ ಪರ ನಿಂತಿದ್ದರು.

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಆ ಸಂದರ್ಭದಲ್ಲಿ ನಟ ಯುವ ರಾಜ್ಕುಮಾರ್ ಟ್ವೀಟ್ ಮಾಡಿದ್ದರು.

ಆದರೆ ಈಗ ಹಳೆಯದ್ದನ್ನು ಮರೆತು ಇಬ್ಬರೂ ಒಂದಾಗಿದ್ದಾರೆ. ಇಬ್ಬರು ಪರಸ್ಪರ ಕಹಿ ಮರೆತು ಆಲಿಂಗಿಸಿಕೊಂಡಿದ್ದಾರೆ.

ಯುವ ರಾಜ್ಕುಮಾರ್ 'ಯುವ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ, ದರ್ಶನ್ 'ಕಾಟೇರ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
Related Photo Gallery
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ

ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ

ಎಸ್ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ

ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್

ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ

ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ

ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ

ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ್ಯಾಲಿ!

ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್

Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
