ಸದ್ದಿಲ್ಲದೆ ಗೋವಾದಲ್ಲಿ ವಿವಾಹವಾದ ನಟಿ ದೀಪಿಕಾ ದಾಸ್: ಇಲ್ಲಿವೆ ಚಿತ್ರಗಳು
Deepika Das marriage: ‘ನಾಗಿಣಿ’ ಖ್ಯಾತಿಯ ನಟಿ ದೀಪಿಕಾ ದಾಸ್, ಸದ್ದಿಲ್ಲದೆ ಗೋವಾದಲ್ಲಿ ವಿವಾಹವಾಗಿದ್ದಾರೆ. ವರ ಯಾರು? ಇಲ್ಲಿವೆ ಚಿತ್ರಗಳು.
Updated on: Mar 01, 2024 | 9:07 PM

‘ನಾಗಿಣಿ’ ಖ್ಯಾತಿಯ ನಟಿ ದೀಪಿಕಾ ದಾಸ್ ಸದ್ದಿಲ್ಲದೆ ಗೋವಾದಲ್ಲಿ ಮದುವೆಯಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ಜೊತೆ ದೀಪಿಕಾ ದಾಸ್ ಮದುವೆ ಆಗಿದ್ದಾರೆ. ಗೋವಾನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿದೆ.

ಗೋವಾದ ಕಡಲ ತಡಿಯಲ್ಲಿ ಖಾಸಗಿಯಾಗಿ ವಿವಾಹ ಕಾರ್ಯಕ್ರಮ ನಡೆದಿದ್ದು, ವಧು-ವರರ ಕುಟುಂಬ ಸದಸ್ಯರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.

ದೀಪಿಕಾ ದಾಸ್ ‘ನಾಗಿಣಿ’ ಧಾರಾವಾಹಿ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಬಿಗ್ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿಯೂ ಭಾಗಿಯಾಗಿದ್ದರು.

ದೀಪಿಕಾ ದಾಸ್ ಇತ್ತೀಚೆಗೆ ಸಾಕಷ್ಟು ಪ್ರವಾಸ, ಮೋಜುಗಳಲ್ಲಿ ತೊಡಗಿಕೊಂಡಿದ್ದರು, ಇನ್ಸ್ಟಾಗ್ರಾಂನಲ್ಲಿ ಪ್ರವಾಸದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು.

ಇದೀಗ ತಮ್ಮ ಮದುವೆಯ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ದೀಪಿಕಾ ದಾಸ್, ‘ಸಾಹಸಮಯ ಪ್ರಯಾಣಕ್ಕೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ.




