ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ನಟಿ ಶ್ರೀಲೀಲಾ; ಕೈಯಲ್ಲಿದೆ ನಾಲ್ಕು ತೆಲುಗು ಸಿನಿಮಾ
ಶ್ರೀಲೀಲಾ ಅವರು ‘ಧಮಾಕ’ ಸಿನಿಮಾದಲ್ಲಿ ರವಿತೇಜ ಜತೆ ತೆರೆ ಹಂಚಿಕೊಂಡರು. ಈ ಚಿತ್ರ ಹಿಟ್ ಆದ ನಂತರದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ.
Jan 24, 2023 | 9:06 AM
ನಟಿ ಶ್ರೀಲೀಲಾ ಅವರು ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಧಮಾಕ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ.
ಶ್ರೀಲೀಲಾ ಅವರು ‘ಧಮಾಕ’ ಸಿನಿಮಾದಲ್ಲಿ ರವಿತೇಜ ಜತೆ ತೆರೆ ಹಂಚಿಕೊಂಡರು. ಈ ಚಿತ್ರ ಹಿಟ್ ಆದ ನಂತರದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ.
ಮಹೇಶ್ ಬಾಬು ನಟನೆಯ 28ನೇ ಸಿನಿಮಾ, ‘ಅನಗನಗ ಒಕ ರಾಜು’, ‘ಜೂನಿಯರ್’ ಸೇರಿ ಒಟ್ಟೂ ನಾಲ್ಕು ತೆಲುಗು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.
‘ಕಿಸ್’ ಚಿತ್ರದಿಂದ ಶ್ರೀಲೀಲಾ ಅವರು ಚಿತ್ರರಂಗ ಪ್ರವೇಶಿಸಿದರು. ‘ಭರಾಟೆ’ ಚಿತ್ರದಿಂದ ಶ್ರೀಲೀಲಾ ಖ್ಯಾತಿ ಹೆಚ್ಚಿತು.
ಶ್ರೀಲೀಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದಾರೆ. ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.