ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ ಹಾಗೂ ಮಗಳು
‘ಬಿಗ್ ಬಾಸ್’ ಖ್ಯಾತಿಯ ಧನರಾಜ್ ಅವರು ಈಗ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರಿಗೆ ದೇವರ ಮೇಲೆ ಸಾಕಷ್ಟು ಭಕ್ತಿ ಇದೆ. ಈ ಕಾರಣಕ್ಕೆ ಆಗಾಗ, ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಈಗ ಅವರು ಒಂದು ಹೊಸ ಪ್ರದೇಶಕ್ಕೆ ತೆರಳಿದ್ದಾರೆ.
Updated on: Jun 17, 2025 | 7:36 AM

ಧನರಾಜ್ ಅವರು ದೇವರನ್ನು ಹೆಚ್ಚು ನಂಬುತ್ತಾರೆ. ಹೀಗಾಗಿ, ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಈಗ ಅವರು ಕೇರಳದ ಕೊಟ್ಟಿಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೇರಳದ ಕಣ್ಣೂರಿನ ಕೊಟ್ಟಿಯೂರ್ ದೇವಸ್ಥಾನಕ್ಕೆ ಧನರಾಜ್ ಅವರು ಪತ್ನಿ ಪ್ರಜ್ಞಾ, ಮಗಳು ಪ್ರಸಿದ್ಧಿ ಜೊತೆ ಭೇಟಿ ನೀಡಿದ್ದಾರೆ. ಅವರ ಕುಟುಂಬದವರು ಕೂಡ ಸಾಥ್ ನೀಡಿದ್ದಾರೆ. ಅಲ್ಲಿ ಇವರು ದೇವರ ದರ್ಶನ ಪಡೆದುಕೊಂಡಿದ್ದಾರೆ.

ಕೊಟ್ಟಿಯೂರ್ ದೇವಸ್ಥಾನವು ವವಾಲಿ ನದಿಯ ತೀರದಲ್ಲಿ ಇದೆ. ಈಗ ಮಳೆ ಹೆಚ್ಚಿರುವುದರಿಂದ ತುಂಬಾನೇ ಎಚ್ಚರಿಕೆ ಬೇಕು. ಈ ಎಚ್ಚರಿಕೆಗಳನ್ನು ತೆಗೆದುಕೊಂಡು ಧನರಾಜ್ ಹಾಗೂ ಪ್ರಜ್ಞಾ ದೇವರ ದರ್ಶನ ಪಡೆದಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಧನರಾಜ್ ಅವರು ಯೂಟ್ಯೂಬ್ ಮೂಲಕ ಫೇಮಸ್ ಆದವರು. ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ‘ಬಿಗ್ ಬಾಸ್’ ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಅವರ ಯೂಟ್ಯೂಬ್ ವಿಡಿಯೋಗಳಿಗೆ ಲಕ್ಷಾಂತರ ವೀವ್ಸ್ ಬರುತ್ತವೆ.

ಧನರಾಜ್ ಅವರು ಬಿಗ್ ಬಾಸ್ಗೆ ಬರುವ ಕೆಲವೇ ದಿನ ಮೊದಲು ಹೆಣ್ಣು ಮಗು ಜನಿಸಿತ್ತು. ದೊಡ್ಮನೆಗೆ ಬಂದ ಬಳಿಕ ಅವರು ಮಗಳನ್ನು ಸಾಕಷ್ಟು ಮಿಸ್ ಮಾಡಿಕೊಂಡರು. ಈಗ ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.




