
ಮಹಾಭಾರತವನ್ನು ಆಧರಿಸಿ ಈಗಾಗಲೇ ಅನೇಕ ಶೋಗಳು ಬಂದಿವೆ. ಹಲವು ನಿರ್ಮಾಣ ಸಂಸ್ಥೆಗಳು ಹಲವು ರೀತಿಯಲ್ಲೀ ಮಹಾಭಾರತವನ್ನು ಕಟ್ಟಿಕೊಟ್ಟಿವೆ. ಈಗ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ‘ಮಹಾಭಾರತ’ವನ್ನು ಪ್ರೇಕ್ಷಕರ ಎದುರು ಇಡಲು ಮುಂದಾಗಿದೆ.

ಇಂದು (ಸೆಪ್ಟೆಂಬರ್ 10) ಮಹಾಭಾರತ ಸೀರಿಸ್ ಅನ್ನು ಹೊರ ತರುತ್ತಿರುವ ಬಗ್ಗೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಘೋಷಣೆ ಮಾಡಿದೆ. ಈ ವಿಚಾರ ಕೇಳಿ ಸಿನಿಪ್ರಿಯರು ಖುಷಿಯಾಗಿದ್ದಾರೆ.

ಡಿಸ್ನಿ ಪ್ಲಸ್ ಹಾಟ್ಸ್ಟಾರ್ನ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟರ್ಗಳನ್ನು ಹಂಚಿಕೊಳ್ಳಲಾಗಿದೆ. ಗ್ರಾಫಿಕ್ಸ್ ಕಂಡು ಫ್ಯಾನ್ಸ್ ಹೌಹಾರಿದ್ದಾರೆ.

ದೊಡ್ಡ ಬಜೆಟ್ನಲ್ಲಿ ಈ ಸೀರಿಸ್ ಸಿದ್ಧಗೊಳ್ಳುತ್ತಿದೆ ಎಂಬುದಕ್ಕೆ ಪೋಸ್ಟರ್ನ ಗ್ರಾಫಿಕ್ಸ್ ಸಾಕ್ಷ್ಯ ನೀಡಿದೆ. ಆದರೆ, ಈ ಸೀರಿಸ್ನಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ವಿಚಾರವನ್ನು ಬಿಟ್ಟುಕೊಡಲಾಗಿಲ್ಲ.

ಅದ್ದೂರಿ ಸೆಟ್ಗಳು, ಯುದ್ಧಭೂಮಿಯಲ್ಲಿರುವ ಆನೆ-ಕುದುರೆಗಳು ಸಾಕಷ್ಟು ಗಮನ ಸೆಳೆದಿವೆ. ಒಟ್ಟಾರೆಯಾಗಿ ಈ ಸೀರಿಸ್ ಸದ್ಯದ ಮಟ್ಟಿಗಂತೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಮಹಾಭಾರತ