- Kannada News Photo gallery Diwali 2021 theme ideas for creative home decoration this Deepavali festival
Diwali 2021: ಈ ಬಾರಿಯ ದೀಪಾವಳಿಗೆ ಮನೆಯ ಡೆಕೊರೇಷನ್ ಬಗ್ಗೆ ಯೋಚಿಸುತ್ತಿದ್ದೀರಾ? ಇಲ್ಲಿವೆ ಕೆಲವು ಸಿಂಪಲ್ ಐಡಿಯಾಗಳು
Deepavali 2021: ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ಮನೆಯನ್ನು ಸುಂದರವಾಗಿ ಅಲಂಕಾರ ಮಾಡಲು ನೀವು ನಿರ್ಧರಿಸಿದ್ದರೆ ಕೆಲವು ಟಿಪ್ಸ್ಗಳು ಇಲ್ಲಿವೆ. ಇವುಗಳು ದೀಪಾವಳಿ ಹಬ್ಬದ ಸಂಭ್ರದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತವೆ.
Updated on: Nov 03, 2021 | 11:54 AM

Diwali 2021 theme ideas for creative home decoration this Deepavali festival

Diwali 2021 theme ideas for creative home decoration this Deepavali festival

ಮನೆಯ ಎದುರು ಲೈಟಿಂಗ್ ವ್ಯವಸ್ಥೆ ಮಾಡಬಹುದು. ಕತ್ತಲೆಯಲ್ಲಿ ಹೊಳೆಯುವ ಬಣ್ಣದ ಲೈಟ್ಸ್ಗಳು ನೋಡಲು ಸುಂದರವಾಗಿ ಕಾಣುತ್ತದೆ. ಜೊತೆಗೆ ಬಿದುರಿನ ಎಳೆಗಳಿಂದ ಚೆಂಡುಗಳನ್ನು ತಯಾರಿಸಿ ಅದರೊಳಗೆ ಚಿಕ್ಕ ಬಲ್ಬ್ ಅಳವಡಿಸಿ ಲೈಟ್ ತಯಾರಿಸಬಹುದು. ಇದು ಸುಂದರವಾಗಿ ಕಾಣಿಸುವುದರ ಜೊತೆಗೆ ಈ ಬಾರಿಯ ದೀಪಾವಳಿಗೆ ಹೊಸತನವನ್ನು ತಂದುಕೊಡುತ್ತದೆ. ನೋಡಲು ಸುಂದರವಾಗಿ ಕಾಣಿಸುವ ಲೈಟಿಂಗ್ಸ್ ನಿಮ್ಮ ಮುಖದಲ್ಲಿ ನಗುವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಬಟ್ಟಲಿನಲ್ಲಿ ನೀರು ತುಂಬಿಸಿ ಹೂವಿನ ಎಸಲುಗಳಿಂದ ಅಲಂಕರಿಸಿ. ಆ ಬಟ್ಟಲಿನ ಮೇಲೆ ದೀಪವನ್ನು ಇರಿಸಿ. ಇದು ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ. ಮನೆಯ ಹಾಲ್ನಲ್ಲಿ ಅಥವಾ ಜಗುಲಿಯಲ್ಲಿ ಇರಿಸುವ ಮೂಲಕ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದನ್ನು ತಯಾರಿಸಲು ತುಂಬಾ ಸರಳ ಜೊತೆಗೆ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.

ಮನೆಯ ಎದುರು ಚಿಕ್ಕಿ ಗಿಡವಿದ್ದರೆ ಆ ಮರಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಬಹುದು. ಮರದ ಕೊಂಬೆಯ ಸುತ್ತಲೂ ಲೈಟ್ಸ್ಗಳು ಅದರಲ್ಲಿಯೂ ಮುಖ್ಯವಾಗಿ ಬಣ್ಣ ಬಣ್ಣದ ಲೈಟಿಂಗ್ಸ್ಗಳು ಹೆಚ್ಚು ಸುಂದರವಾಗಿ ಕಾಣಿಸುತ್ತದೆ. ಈ ರೀತಿಯಾಗಿ ಹೊಸ ಹೊಸ ಬಗೆಯ ಐಡಿಯಾಗಳು ನಿಮ್ಮ ಮನೆಯ ಸಂಭ್ರಮವನ್ನು ಜೊತೆಗೆ ಸೌಂದರ್ಯವನ್ನು ಹೆಚ್ಚಿಸುತ್ತದೆ.




