ಎಗ್ ಪಫ್‌ನಲ್ಲಿ ಅರ್ಧ ಮೊಟ್ಟೆ ಯಾಕೆ ಹಾಕ್ತಾರೆ ಗೊತ್ತಾ? ಇದೇ ನೋಡಿ ಕಾರಣ
ಸಂಜೆ ಕಾಫಿ ಟೀ ಜೊತೆಗೆ ಏನಾದ್ರೂ ಸ್ನಾಕ್ಸ್ ಇರಲೇ ಬೇಕು. ಕೆಲವು ಕಾಫಿ ಟೀಯೊಂದಿಗೆ ಒಂದು ಪಫ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ನೀವೇನಾದ್ರೂ ಈ ಮೊಟ್ಟೆ ಪಫ್ ತಿನ್ನುವಾಗ ಯಾಕೆ ಇದಕ್ಕೆ ಅರ್ಧ ಮೊಟ್ಟೆಯನ್ನು ಮಾತ್ರ ಹಾಕಲಾಗುತ್ತದೆ ಎಂಬ ಕುರಿತು ಎಂದಾದರೂ ಯೋಚನೆ ಮಾಡಿದ್ದೀರಾ? . ಹೌದು , ಪಫ್‌ಗೆ ಅರ್ಧ ಮೊಟ್ಟೆ ಹಾಕುವುದರ ಹಿಂದೆಯೂ ಕೂಡ ಕಾರಣವಿದೆಯಂತೆ, ಈ ಕುರಿತಾದ ಮಾಹಿತಿ ಇಲ್ಲಿದೆ.
Updated on: Jun 03, 2025 | 7:22 PM

ಮಕ್ಕಳಿಂದ ದೊಡ್ಡವರರೆಗೂ ಕೂಡ ಇಷ್ಟ ಪಟ್ಟು ಸವಿಯುವ ಸ್ನಾಕ್ಸ್ ಗಳಲ್ಲಿ ಈ ಪಫ್ ಕೂಡ ಒಂದು. ಅದರಲ್ಲಿಯೂ ಬಿಸಿ ಕಾಫಿ ಟೀ ಜೊತೆಗೆ ಈ ಸ್ನಾಕ್ಸ್ ಇದ್ದು ಬಿಟ್ಟರೆ ಅದರ ರುಚಿಯೇ ಬೇರೆ. ಕೆಲವರಿಗೆ ಅಪರೂಪಕ್ಕೊಮ್ಮೆಯಾದ್ರೂ ಈ ಪಫ್ ತಿನ್ನದೇ ಹೋದರೆ ಸಮಾಧಾನ ಇರೋದೇ ಇಲ್ಲ.

ಪಫ್‌ಗಳಲ್ಲಿಯೂ ವಿವಿಧ ವೆರೈಂಟಿಗಳಿದ್ದು, ಮೊಟ್ಟೆ ಮಾತ್ರವಲ್ಲ, ಚಿಕನ್, ಪನ್ನೀರ್ ಹೀಗೆ ವಿವಿಧ ರುಚಿಯ ಪಫ್ ಗಳನ್ನು ಎಲ್ಲರೂ ಸವಿದೇ ಇರುತ್ತಾರೆ. ಆದರೆ ಹೆಚ್ಚಿನವರು ಈ ಎಗ್ ಪಫ್‌ನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

ನೀವು ಎಗ್ ಪಫ್ ತಿಂದಿದ್ದರೆ ಅದರಲ್ಲಿ ಅರ್ಧ ಮೊಟ್ಟೆಯನ್ನು ಮಾತ್ರ ಹಾಕಿರುವುದನ್ನು ಗಮನಿಸಿದ್ದೀರಬಹುದು. ಆದರೆ ಈ ಅರ್ಧ ಮೊಟ್ಟೆಯನ್ನು ಮಾತ್ರ ಯಾಕೆ ಹಾಕಿರುತ್ತಾರೆ ಎನ್ನುವ ಪ್ರಶ್ನೆಯೊಂದು ನಿಮ್ಮಲ್ಲಿ ಮೂಡಿರಬಹುದು. ಆದರೆ ಈ ರೀತಿ ಹಾಕುವುದಕ್ಕೂ ಕಾರಣವಿದೆಯಂತೆ.

ಎಗ್ ಪಫ್‌ನಲ್ಲಿ ಅರ್ಧ ಮೊಟ್ಟೆ ಹಾಕಲು ಮುಖ್ಯ ಕಾರಣವೇ ಅದರ ಆಕಾರ, ಹೌದು, ಈ ಪಫ್‌ನ ಆಕಾರವನ್ನು ಕಾಪಾಡಿಕೊಳ್ಳಲು ಈ ರೀತಿ ಅರ್ಧ ಮೊಟ್ಟೆಯನ್ನು ಸೇರಿಸಲಾಗುತ್ತದೆ ಎನ್ನಲಾಗಿದೆ.

ಒಂದು ವೇಳೆ ಇಡೀ ಮೊಟ್ಟೆಯನ್ನು ಈ ಪಫ್ ಒಳಗೆ ಹಾಕಿದರೆ ಮಸಾಲೆಯೂ ಈ ಮೊಟ್ಟೆಯಲ್ಲಿ ಸಂಪೂರ್ಣವಾಗಿ ಮಿಕ್ಸ್ ಆಗುವುದಿಲ್ಲ. ರುಚಿ ಕೂಡ ಅಷ್ಟು ಚೆನ್ನಾಗಿ ಬರುವುದಿಲ್ಲವಂತೆ.

ಈ ಎಗ್ ಪಫ್ ಒಳಗೆ ಹಾಕಲಾದ ಈರುಳ್ಳಿ ಮಸಾಲಾ ಅರ್ಧ ಮೊಟ್ಟೆಗೆ ಸೇರಿಸಿದರೆ ಮಾತ್ರ ಅದರ ರುಚಿ ಹೆಚ್ಚಾಗೋದು. ಈ ಎಲ್ಲಾ ಕಾರಣದಿಂದ ಎಗ್ ಪಫ್‌ಗೆ ಅರ್ಧ ಮೊಟ್ಟೆಯನ್ನಷ್ಟೇ ಹಾಕಲಾಗುತ್ತದೆ.




