Updated on:Nov 20, 2022 | 11:30 AM
ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ, ನೇಮಾರ್, ಕೈಲಿಯನ್ ಎಂಬಪ್ಪೆ... ಸದ್ಯ ಫುಟ್ಬಾಲ್ ಜಗತ್ತನ್ನು ಆಳುತ್ತಿರುವ ಹೆಸರುಗಳಿವು. ಗಳಿಕೆಯಲ್ಲೂ ಈ ಆಟಗಾರರು ಮುಂಚೂಣಿಯಲ್ಲಿದ್ದಾರೆ. ಆದರೆ ಸಂಪತ್ತಿನ ವಿಷಯದಲ್ಲಿ ಇವರೆಲ್ಲರನ್ನೂ ಮೀರಿಸಿದ ಆಟಗಾರನೊಬ್ಬನಿದ್ದಾನೆ. ಈ ಆಟಗಾರ ಈ ದಿಗ್ಗಜರಂತೆ ಫುಟ್ಬಾಲ್ ಜಗತ್ತಿನಲ್ಲಿ ಖ್ಯಾತಿಯನ್ನು ಗಳಿಸಲು ಸಾಧ್ಯವಾಗದಿದ್ದರೂ, ಈ ದಿಗ್ಗಜರನ್ನೂ ಮೀರಿಸಿದ ಶ್ರೀಮಂತರಾಗಿದ್ದಾರೆ.
ಈ ಆಟಗಾರನ ವಯಸ್ಸು ಕೂಡ ಕೇವಲ 24 ವರ್ಷಗಳು. ಆದರೂ ಶ್ರೀಮಂತಿಕೆಯಲ್ಲಿ ಈ ಆಟಗಾರನನ್ನು ಹಿಂದಿಕ್ಕುವ ಮತ್ತೊಬ್ಬ ಫುಟ್ಬಾಲ್ ಆಟಗಾರನಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.
2022 ರಲ್ಲಿ ಹೊರಬಿದ್ದ ಮಾಹಿತಿಯ ಪ್ರಕಾರ ಅರ್ಜೆಂಟೀನಾದ ಸ್ಟಾರ್ ಆಟಗಾರ ಮೆಸ್ಸಿ ಅವರ ನಿವ್ವಳ ಮೌಲ್ಯ ಸುಮಾರು 4900 ಕೋಟಿ ರೂ. ಆಗಿದೆ. ಹಾಗೆಯೇ ರೊನಾಲ್ಡೊ ಅವರ ನಿವ್ವಳ ಮೌಲ್ಯ ಸುಮಾರು 4,000 ಕೋಟಿ ರೂ.ಗಳಾಗಿದೆ. ಆದರೆ ಈ ಇಬ್ಬರನ್ನೂ ಮೀರಿಸುವ ಮತ್ತೊಬ್ಬ ಆಟಗಾರನಿದ್ದಾನೆ.
ಈ ಶ್ರೀಮಂತ ವೃತ್ತಿಪರ ಫುಟ್ಬಾಲ್ ಆಟಗಾರ ಮತ್ತ್ಯಾರು ಅಲ್ಲ, ಮಿಡ್‌ಫೀಲ್ಡರ್ ಫೈಕ್ ಬೊಲ್ಕಿಯಾ. ಫುಟ್ಬಾಲ್ ಜಗತ್ತಿನಲ್ಲಿ ಅಷ್ಟಾಗಿ ಹೆಸರು ಮಾಡದ ಬೊಲ್ಕಿಯಾ ಥೈಲ್ಯಾಂಡ್‌ನ ಚೊನ್‌ಬುರಿಯಲ್ಲಿರುವ ಕ್ಲಬ್ ಪರ ಫುಟ್ಬಾಲ್ ಆಡುತ್ತಾರೆ. ಅವರ ನಿವ್ವಳ ಮೌಲ್ಯ ಸುಮಾರು 1700 ಟ್ರಿಲಿಯನ್ ರೂಪಾಯಿಗಳು.
ಬೊಲ್ಕಿಯಾ ಬ್ರೂನಿಯ ರಾಜ ಮನೆತನದವರು. ಅವರು ಪ್ರಸ್ತುತ ಸುಲ್ತಾನ್ ಹಸನಲ್ ಬೊಲ್ಕಿಯಾ ಅವರ ಸೋದರಳಿಯ. ಅವರ ತಂದೆ ಜೆಫ್ರಿ ಪ್ರಿನ್ಸ್. ಬೋಲ್ಕಿಯಾ ಬ್ರೂನಿ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕರೂ ಆಗಿದ್ದಾರೆ.
Published On - 11:30 am, Sun, 20 November 22