ನಿಮ್ಮ ಪಾದದಲ್ಲಿ ಉರಿ ಅನುಭವವಾಗುತ್ತಿದೆಯೇ, ಈ ಮನೆಮದ್ದುಗಳನ್ನು ಟ್ರೈ ಮಾಡಿ
Feet problem: ಕಾಲಿನಲ್ಲಿ ರಕ್ತ ಸಂಚಾರ ಸರಿಯಿಲ್ಲದಿದ್ದರೆ, ವಯಸ್ಸಿನ ಕಾರಣದಿಂದ, ಮಧುಮೇಹ, ರಕ್ತದೊತ್ತಡ, ಮದ್ಯಪಾನ, ವಿಟಮಿನ್ ಸಿಯ ಕೊರತೆಯಿಂದಾಗಿ ನಿಮ್ಮ ಕಾಲು ಅಥವಾ ಪಾದದಲ್ಲಿ ಉರಿ ಅಥವಾ ಸುಟ್ಟಂತಹ ಅನುಭವ ಉಂಟಾಗಬಹುದು. ಕೆಲವು ಮನೆಮದ್ದುಗಳಿಂದ ಈ ಸಮಸ್ಯೆಯನ್ನು ದೂರಮಾಡಬಹುದು.
Updated on:May 23, 2022 | 11:55 AM

Bottle Gaurd

Burning Feet

ಪಾದದದಲ್ಲಿನ ಉರಿಯನ್ನು ದೂರ ಮಾಡಲು ಉಪಾಯ

ಕೊಬ್ಬರಿ ಎಣ್ಣೆ: ರಕ್ತದ ಸಂಚಾರ ಸರಿಯಾಗಿರದಿದ್ದಾಗ ಕಾಲಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಕಾಲಿಗೆ ಹಚ್ಚಿ ಮಸಾಜ್ ಮಾಡಿ.

ಮದರಂಗಿ: ಮದರಂಗಿ ಅಥವಾ ಮೆಹಂದಿಯು ಕೂಡ ದೇಹಕ್ಕೆ ತಂಪನ್ನು ನೀಡುತ್ತದೆ. ಕೈ ಹಾಗೂ ಕಾಲುಗಳಲ್ಲಿ ಮೆಹಂದಿಯನ್ನು ಹಚ್ಚಿಕೊಳ್ಳುವುದರಿಂದ ದೇಹದಲ್ಲಿರುವ ಶಾಖ ಕಡಿಮೆಯಾಗುತ್ತದೆ.

ಸೋಂಪು: ಸೋಂಪು ಶರೀರದ ಉಷ್ಣಾಂಶವನ್ನು ಸಮತೋಲನದಲ್ಲಿಡುತ್ತದೆ. ಮಿಕ್ಸಿ ಜಾರಿನಲ್ಲಿ ಒಂದು ಚಮಚ ಸೋಂಪು ಹಾಗೂ ಒಂದು ಚಮಚ ಸಕ್ಕರೆ ಹಾಕಿ ಪುಡಿಮಾಡಿಕೊಳ್ಳಿ, ಬಳಿಕ ಅದನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ, ಈ ರೀತಿ ನಿತ್ಯವೂ ಕುಡಿಯವುದರಿಂದ ನಿಮ್ಮ ಸಮಸ್ಯೆ ಬಗೆಹರಿಯಲಿದೆ.
Published On - 11:32 am, Mon, 23 May 22

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್ ಇಂಡಿಯಾ ವೆಬ್ಸೈಟ್ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್ನಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ
Read More




