ಚಯಾಪಚಯ ಕ್ರಿಯೆ ಸರಿಪಡಿಸಿಕೊಳ್ಳಲು ಈ ಕ್ರಮ ಪಾಲಿಸಿ
TV9 Web | Updated By: Pavitra Bhat Jigalemane
Updated on:
Mar 13, 2022 | 10:42 AM
ದೇಹ ಸದೃಢವಾಗಿರಲು ತಿಂದ ಆಹಾರ ಜೀರ್ಣವಾಗಬೇಕು ಆಗಮಾತ್ರ ದೇಹಕ್ಕೆ ಶಕ್ತಿ ಸಿಗುತ್ತದೆ. ಅದಕ್ಕೆ ಚಯಾಪಚಯ ಕ್ರಿಯೆ ಸರಿಯಾಗಿರಬೇಕು. ಈ ಕ್ರಮಗಳನ್ನು ಪಾಲಿಸಿದರೆ ಚಯಾಪಯ ಕ್ರಿಯೆ ಉತ್ತಮಗೊಳ್ಳಲಿದೆ.
1 / 5
ದೇಹದಲ್ಲಿ ಚಯಾಪಯ ಕ್ರಿಯೆ ಅತಿ ಮುಖ್ಯವಾದದ್ದು, ತಿಂದ ಆಹಾರ ಸರಿಯಾಗಿ ಜೀರ್ಣವಾದರೆ ಮಾತ್ರ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದ್ದರಿಂದ ಜೀರ್ಣಶಕ್ಇ ಉತ್ತಮಗೊಳ್ಳಲು ಈ ಕ್ರಮಗಳನ್ನು ಪಾಲಿಸಿ
2 / 5
ಉಪವಾಸ: ದೇಹದಲ್ಲಿನ ನಿರುಪಯುಕ್ತ ವಸ್ತುಗಳನ್ನು ತೆಗೆದುಹಾಕಲು ಕೆಲವರು ಉಪವಾಸ ಮಾಡುತ್ತಾರೆ. ಆದರೆ ಅದರ ಅಗತ್ಯವಿಲ್ಲ, ಪ್ರತಿದಿನ ಸಂಜೆ 7 ಗಂಟೆಗೆ ಊಟ ಮಾಡಿ 2 ಗಂಟಗಳ ಬಳಿಕ ನಿದ್ದೆ ಮಾಡಿ.
3 / 5
ರಕ್ತದಲ್ಲಿನ ಸಕ್ಕರೆಯ ಹೆಚ್ಚಳವನ್ನು ನಿರ್ವಹಿಸಲು ನಿಮ್ಮ ಆಹಾರದಲ್ಲಿ ಕೊಬ್ಬನ್ನು ಹೆಚ್ಚಿಸಿ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಿ. ಆದರೆ ನೀವು ಇದನ್ನು ಮಾಡುವ ಮೊದಲು, ನಿಮ್ಮ ದೇಹವು ಕೊಬ್ಬನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ
4 / 5
ಚೆನ್ನಾಗಿ ನಿದ್ದೆ ಮಾಡಿ: ಇದರಿಂದ ದೇಹದಲ್ಲಿ ಚಯಾಪಯ ಕ್ರಿಯೆ ಸುಗಮಾವಾಗಿ ನಡೆಯುತ್ತದೆ.
5 / 5
ಸಂಸ್ಕರಿಸಿದ ಆಹಾರ ಬೇಡ: ಪ್ಯಾಕೆಟ್ಗಳಲ್ಲಿ ತುಂಬಿರುವ ಸಂಸಕರಿಸಿದ ಆಹಾರವನ್ನು ಸೇವಿಸಬೇಡಿ. ಇದರಲ್ಲಿನ ಸೋಡಿಯಂ ಅಂಶಗಳು ನಿಮ್ಮ ಚಯಾಪಚಯ ಕ್ರಿಯೆಗೆ ಅಡ್ಡಿಯಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ.