AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Food Emergeny In Srilanka: ಶ್ರೀಲಂಕಾದಲ್ಲಿ ಆಹಾರಕ್ಕೆ ತತ್ವಾರ; ವಿದೇಶೀ ವಿನಿಮಯ ಕೊರತೆ, ತುರ್ತು ಪರಿಸ್ಥಿತಿ ಘೋಷಣೆ

ದ್ವೀಪ ರಾಷ್ಟ್ರವಾದ ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ವಿದೇಶೀ ವಿನಿಮಯ ಸಂಗ್ರಹದ ಕೊರತೆಯಿಂದಾಗಿ ದೇಶ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

TV9 Web
| Updated By: Srinivas Mata|

Updated on: Aug 31, 2021 | 2:52 PM

Share
ಶ್ರೀಲಂಕಾದಲ್ಲಿ ಖಾಸಗಿ ಬ್ಯಾಂಕ್​ಗಳು ವಿದೇಶಿ ವಿನಿಮಯ ಕೊರತೆಯಿಂದ ಬಳಲುತ್ತಿದ್ದು, ಆಮದು ಮಾಡಿಕೊಳ್ಳಲು ಹಣಕಾಸು ವ್ಯವಸ್ಥೆ ಒದಗಿಸುವುದು ಕಷ್ಟವಾಗಿದೆ. ಅದರ ಪರಿಣಾಮವಾಗಿ ಆಹಾರ ಕೊರತೆ ಎದುರಾಗಿದೆ. ಈ ಕಾರಣಕ್ಕೆ ಆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅಧ್ಯಕ್ಷರಾದ ಗೊಟಬಾಯಾ ರಾಜಪಕ್ಸ ಮಂಗಳವಾರದಂದು ಮಾತನಾಡಿ, ಸಕ್ಕರೆ, ಅಕ್ಕಿ ಮತ್ತು ಇತರ ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಿಸುವಂತಿಲ್ಲ ಎಂದು ತುರ್ತು ನಿಯಮಾವಳಿ ರೂಪಿಸಿ, ಆದೇಶ ಹೊರಡಿಸಲಾಗಿದೆ. ಈ ಆದೇಶದ ಮೂಲಕವಾಗಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ದೊರೆಯುತ್ತದೆ. ಸರ್ಕಾರದಿಂದ ಈಗ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಣ ಮಾಡಬೇಕಿರುವುದರಿಂದ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸುವ ವರ್ತಕರಿಂದ ಅವುಗಳನ್ನು ವಶಪಡಿಸಿಕೊಳ್ಳುವ, ಬಂಧಿಸುವ ಅಧಿಕಾರವನ್ನು ನೀಡಲಾಗಿದೆ.

1 / 5
ರಾಜಪಕ್ಸ ಅವರು ಉನ್ನತ ಸೈನ್ಯಾಧಿಕಾರಿಯನ್ನು ಅಗತ್ಯ ಸೇವೆಗಳ ಮಹಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅವರು ಭತ್ತ, ಅಕ್ಕಿ, ಸಕ್ಕರೆ ಹಾಗೂ ಇತರ ಗ್ರಾಹಕ ವಸ್ತುಗಳು ಪೂರೈಕೆ ಮಾಡುವುದರ ಸಂವಹನ ನಡೆಸಬೇಕಾಗುತ್ತದೆ. ಅಂದಹಾಗೆ ಸಕ್ಕರೆ, ಅಕ್ಕಿ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಸಿಕ್ಕಾಪಟ್ಟೆ ಹೆಚ್ಚಳವಾಗಿದೆ. ಹಾಲಿನ ಪುಡಿಗೆ, ಸೀಮೆಎಣ್ಣೆ ಮತ್ತು ಅಡುಗೆ ಅನಿಲ ಕೊರತೆಯಾಗಿ ಉದ್ದೋ ಉದ್ದದ ಸಾಲುಗಳಲ್ಲಿ ಜನರು ಕಂಡುಬರುತ್ತಾರೆ. ಅಂದಹಾಗೆ ಶ್ರೀಲಂಕಾದಲ್ಲಿ ಕೊವಿಡ್-19 ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 16 ದಿನಗಳ ಕಾಲ, ಅಂದರೆ ಮುಂದಿನ ಸೋಮವಾರದ ತನಕ ಕರ್ಫ್ಯೂ ಹೇರಿರುವ ಹೊರತಾಗಿಯೂ ಪರಿಸ್ಥಿತಿ ಹೀಗಿದೆ.

2 / 5
ದಿನಕ್ಕೆ 200 ಪ್ರಾಣಗಳು ಕೊರೊನಾಗೆ ಬಲಿ

ವಾಣಿಜ್ಯ ಸಚಿವ ಬಂಡುಲ ಗುಣವರ್ಧನ ಮಾತನಾಡಿ, ಕೆಲವು ವರ್ತಕರು ಸರಕನ್ನು ದಾಸ್ತಾನು ಇರಿಸಿಕೊಂಡಿದ್ದರಿಂದ ಹೀಗೆ ಆಹಾರ ಪದಾರ್ಥಗಳಿಗೆ ಕೊರತೆ ಆಗಿ, ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ ಎಂದಿದ್ದಾರೆ. ಯಾರು ಅಕ್ರಮವಾಗಿ ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡುತ್ತಾರೋ ಅಂಥವರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತಿದೆ. ಇನ್ನು 2.1 ಕೋಟಿ ಜನಸಂಖ್ಯೆ ಇರುವ ಶ್ರೀಲಂಕಾದಲ್ಲಿ ಕೊರೊನಾ ಬಿಕ್ಕಟ್ಟಿನಿಂದ ದಿನಕ್ಕೆ 200 ಪ್ರಾಣಗಳು ಹೋಗುತ್ತಾ ಇರುವ ಸಂಕಷ್ಟದ ಸಮಯದಲ್ಲೇ ಆಹಾರ ಕೊರತೆ ಸಹ ಎದುರಾಗಿದೆ. ಕೊರೊನಾದ ಕಾರಣದಿಂದಲೇ 2020ರಲ್ಲಿ ಆರ್ಥಿಕತೆಯು ದಾಖಲೆಯ ಶೇ 3.6ರಷ್ಟು ಕುಗ್ಗಿದೆ. ಕಳೆದ ಮಾರ್ಚ್​ನಲ್ಲಿ ಶ್ರೀಲಂಕಾ ಸರ್ಕಾರವು ವಾಹನ ಮತ್ತಿತರ ವಸ್ತುಗಳ ಆಮದನ್ನು ನಿಷೇಧಿಸಿದೆ. ಅದರಲ್ಲಿ ಖಾದ್ಯ ತೈಲ, ಅರಿಶಿಣ ಕೂಡ ಸೇರಿದೆ. ಆ ಮೂಲಕವಾದರೂ ವಿದೇಶೀ ವಿನಿಮಯದ ಉಳಿತಾಯ ಮಾಡುವ ಆಲೋಚನೆ ಇದೆ.

3 / 5
ಸಾಂದರ್ಭಿಕ ಚಿತ್ರ

These Trio Got Rs 3500 Each By Selling Their Payment Startup Share

4 / 5
ಪೆಟ್ರೋಲ್- ಡೀಸೆಲ್ ಕಡಿಮೆ ಬಳಸಲು ಮನವಿ

ಇಂಧನ ಸಚಿವ ಉದಯ ಗಮ್ಮನಪಿಲ ಮನವಿ ಮಾಡಿ, ಇಂಧನದ ಬಳಕೆಯನ್ನು ಎಚ್ಚರಿಕೆಯಿಂದ ಮಾಡಿ, ಅದರ ಮೂಲಕ ಉಳಿಯುವ ವಿದೇಶೀ ವಿನಿಮಯ ಸಂಗ್ರಹವನ್ನು ಅಗತ್ಯ ಔಷಧಿ ಮತ್ತು ಲಸಿಕೆ ಖರೀದಿಸಲು ಬಳಸಬಹುದು ಎಂದಿದ್ದಾರೆ. ಅಧ್ಯಕ್ಷರ ಸಮೀಪವರ್ತಿಯೊಬ್ಬರು ತಿಳಿಸಿರುವ ಪ್ರಕಾರ, ಒಂದು ವೇಳೆ ಬಳಕೆ ಕಡಿಮೆ ಮಾಡದಿದ್ದಲ್ಲಿ ಈ ವರ್ಷದ ಕೊನೆಯ ಹೊತ್ತಿಗೆ ಒಬ್ಬರಿಗೆ ಇಷ್ಟೇ ಇಂಧನ ಎಂದು ಮಿತಿ ವಿಧಿಸುವ ಸಾಧ್ಯತೆ ಇದೆ. ಈ ಮಧ್ಯೆ ಕಳೆದ ಕೆಲವು ವಾರಗಳಿಂದ ಕೊವಿಡ್​- 19ನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಆಗುತ್ತಾ ಇದೆ. ದಿನಕ್ಕೆ 200 ಮಮದಿ ಸಾವನ್ನಪ್ಪುತ್ತಿದ್ದಾರೆ, ಕಳೆದ ಹತ್ತು ದಿನದಿಂದ ನಿತ್ಯವೂ 4500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಅಧಿಕೃತ ಅಂಕಿ- ಅಂಶಗಳ ಪ್ರಕಾರವಾಗಿ ಕೊರೊನಾ ಬಿಕ್ಕಟ್ಟು ಆರಂಭವಾದಾಗಿನಿಂದ ಇಲ್ಲಿಯ ತನಕ ಶ್ರೀಲಂಕಾದಲ್ಲಿ 8991 ಮಂದಿ ಬಲಿಯಾಗಿದ್ದಾರೆ. (ಮಾಹಿತಿ ಕೃಪೆ: ಅಲ್ ಜಝೀರಾ)

5 / 5
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ