ಮನೆಯಲ್ಲೇ ಪರಿಸರ ಸ್ನೇಹಿ ಮಣ್ಣಿನ ಗಣಪತಿ ತಯಾರಿಸುವುದು ಹೇಗೆ? ಧಾರವಾಡದಲ್ಲೊಂದು ಮಾದರಿ ಕಾರ್ಯಾಗಾರ

Edited By:

Updated on: Aug 22, 2026 | 6:38 PM

Eco-Friendly Ganesha: ಪಿಒಪಿ ಗಣೇಶ ವಿಗ್ರಹಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಕಾರಣ, ಕೆಲವ ಸಂಸ್ಥೆಗಳಿಂದ ಮನೆಗಳಲ್ಲಿಯೇ ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳನ್ನು ಹೇಗೆ ತಯಾರಿಸಬೇಕು ಎಂಬ ಕಾರ್ಯಾಗಾರವನ್ನು ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ. ಜನರು ಕೂಡ ಅಷ್ಟೇ ಆಸಕ್ತಿಯಿಂದ ಭಾಗಿಯಾಗಿದ್ದರು. ಇಲ್ಲಿವೆ ನೋಡಿ ಫೋಟೋಸ್​.

1 / 7
ಗಣೇಶ ಚತುರ್ಥಿ

ಗಣೇಶ ಚತುರ್ಥಿ

2 / 7

ಬೆಂಗಳೂರಿನ ಆಪ್ತಿ ಫೈನ್ ಆರ್ಟ್ಸ್ ಹಾಗೂ ಧಾರವಾಡದ ಜೋಸಿ ಟ್ಯುಟೋರಿಯಲ್ ಸಂಸ್ಥೆಗಳು ಜಂಟಿಯಾಗಿ ಸಾರ್ವಜನಿಕರಿಗೆ ಮನೆಯಲ್ಲೇ ಪರಿಸರ ಸ್ನೇಹಿ ಮಣ್ಣಿನ ಗಣಪತಿ ತಯಾರಿಸುವ ಉಚಿತ ಕಾರ್ಯಾಗಾರವನ್ನು ಧಾರವಾಡದ ಮಾಳಮಡ್ಡಿಯಲ್ಲಿ ಆಯೋಜಿಸಿವೆ. ತಮ್ಮ ಕೈಗಳಿಂದಲೇ ಭಕ್ತಿಪೂರ್ವಕವಾಗಿ ಗಣೇಶನನ್ನು ರೂಪಿಸುವ ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

3 / 7

ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಮೊದಲು ನಾಲ್ಕು ಬಗೆಯ ಆಕರ್ಷಕ ಗಣೇಶ ಮೂರ್ತಿಗಳ ಮಾದರಿಗಳನ್ನು ತೋರಿಸಲಾಗುತ್ತದೆ. ಜನರಿಗೆ ತಮಗೆ ಇಷ್ಟವಾದ ರೂಪವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದು, ಅದಕ್ಕೆ ತಕ್ಕಂತೆ ಮೊದಲೇ ಹದಗೊಳಿಸಿ ಸಿದ್ಧವಾಗಿಟ್ಟಿರುವ ನೈಸರ್ಗಿಕ ಜೇಡಿಮಣ್ಣನ್ನು ವಿತರಿಸಿ ತಯಾರಿಕೆಯ ಮೊದಲ ಹಂತಕ್ಕೆ ಚಾಲನೆ ನೀಡಲಾಗುತ್ತದೆ.

4 / 7

ತರಬೇತಿ ನೀಡುವ ನುರಿತ ಕಲಾವಿದರು ಮಣ್ಣಿನಿಂದ ಗಣಪತಿಯ ಪೀಠ, ಹೊಟ್ಟೆ, ಮುಖ, ಸೊಂಡಿಲು, ಕಿವಿ ಹಾಗೂ ಆಯುಧಗಳನ್ನು ಅತ್ಯಂತ ಸರಳವಾಗಿ ಹೇಗೆ ರೂಪಿಸಬೇಕು ಎಂಬುದನ್ನು ಹಂತ ಹಂತವಾಗಿ ಪ್ರಾಯೋಗಿಕವಾಗಿ ಕಲಿಸಿಕೊಡುತ್ತಾರೆ. ಯಾವುದೇ ಜಟಿಲತೆಯಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸುಲಭವಾಗಿ ಮೂರ್ತಿ ಕಡೆಯುವ ವಿಧಾನವನ್ನು ಇಲ್ಲಿ ತಿದ್ದಿ ತೀಡಲಾಗುತ್ತದೆ.

5 / 7

ಕೈಗಳಿಂದ ಸುಂದರವಾಗಿ ಮೈದಳೆದ ಗಣಪತಿಯ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡಿದ ಬಳಿಕ, ಅವು ಬಿರುಕು ಬಿಡದಂತೆ ನೆರಳಿನಲ್ಲಿ ನಿಧಾನವಾಗಿ ಒಣಗಿಸಲಾಗುತ್ತದೆ. ನೈಸರ್ಗಿಕ ಮಣ್ಣಿನಿಂದ ರೂಪುಗೊಂಡ ಈ ವಿಗ್ರಹಗಳು ಸಂಪೂರ್ಣವಾಗಿ ಗಟ್ಟಿಯಾಗುವವರೆಗೆ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಕಾಪಾಡಿಕೊಳ್ಳುವ ಸೂಕ್ಷ್ಮ ವಿಧಾನವನ್ನು ಇಲ್ಲಿ ತಿಳಿಸಿಕೊಡಲಾಗುತ್ತದೆ.

6 / 7

ಈ ಕಾರ್ಯಾಗಾರದಲ್ಲಿ ತಯಾರಾಗುವ ವಿಗ್ರಹಗಳಿಗೆ ಯಾವುದೇ ಹಾನಿಕಾರಕ ರಾಸಾಯನಿಕ ಬಣ್ಣಗಳನ್ನು ಬಳಿಯುವುದಿಲ್ಲ. ನೈಸರ್ಗಿಕ ಮಣ್ಣಿನ ನೈಜ ಸೌಂದರ್ಯವೇ ವಿಗ್ರಹಕ್ಕೆ ದೈವಿಕ ಕಳೆಯನ್ನು ತುಂಬುತ್ತದೆ.

7 / 7

ತಮ್ಮ ಕೈಯಾರೆ ಮಣ್ಣಿನಿಂದ ಮಾಡಿದ ಮುದ್ದಾದ ಗಣೇಶನನ್ನು ಭಕ್ತಿಯಿಂದ ಪೂಜಿಸಿ, ಮನೆಯಲ್ಲೇ ಸುಲಭವಾಗಿ ವಿಸರ್ಜಿಸುವ ಮೂಲಕ ಪರಿಸರ ಕಾಳಜಿಯ ಸಂದೇಶವನ್ನು ಸಾರಲು ಈ ಕಾರ್ಯಾಗಾರ ಸಾಕ್ಷಿಯಾಗಿದೆ.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us