AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಮ್​ ರವಿ-ಅಪೂರ್ವಾ ಜೋಡಿಯ ‘ಪುರುಷೋತ್ತಮ’ ಚಿತ್ರಕ್ಕೆ ಯು/ಎ ಪ್ರಮಾಣಪತ್ರ; ಶೀಘ್ರವೇ ಟ್ರೇಲರ್​

ಜಿಮ್ ರವಿ ಅವರನ್ನು ಸಿನಿಮಾ ಕ್ಷೇತ್ರ ಆಕರ್ಷಿಸಿದೆ. ಹಾಗಾಗಿ ಅವರು ‘ಪುರುಷೋತ್ತಮ’ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಅವರಿಗೆ ನಟಿ ಅಪೂರ್ವಾ ಜೋಡಿ ಆಗಿದ್ದಾರೆ.

TV9 Web
| Updated By: ರಾಜೇಶ್ ದುಗ್ಗುಮನೆ|

Updated on: Apr 01, 2022 | 7:15 AM

Share
ಖ್ಯಾತ ಬಾಡಿ ಬಿಲ್ಡರ್​ ಜಿಮ್ ರವಿ ಅವರು ಮೊದಲ ಬಾರಿಗೆ ನಾಯಕನಾಗಿ ನಟಿಸಿದ ಸಿನಿಮಾ ‘ಪುರುಷೋತ್ತಮ’. ಈ ಸಿನಿಮಾವನ್ನು ಅವರೇ ನಿರ್ಮಾಣ ಮಾಡಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾಗೆ ಸೆನ್ಸಾರ್​ ಪ್ರಕ್ರಿಯೆ ಮುಗಿದಿದೆ. ಯುಎ ಪ್ರಮಾಣ ಪತ್ರ ಪಡೆದುಕೊಂಡಿರುವುದಕ್ಕೆ ಚಿತ್ರತಂಡಕ್ಕೆ ಖುಷಿ ಇದೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Gym Ravi and Apoorva starrer Purushottama movie gets UA certificate from Censor Board

1 / 6
ಈಗಾಗಲೇ ಈ ಸಿನಿಮಾವನ್ನು ಕೆಲವರು ನೋಡಿದ್ದಾರೆ. ತಂತ್ರಜ್ಞರು, ಲ್ಯಾಬ್ ಸಹಾಯಕರು, ವಿತರಕರು ಮತ್ತು ಕೆಲವು ಕ್ರೀಡಾ ವಲಯದವರಿಗೆ ‘ಪುರುಷೋತ್ತಮ’ ಚಿತ್ರವನ್ನು ತೋರಿಸಲಾಗಿದೆ. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿರುವುದರಿಂದ ಈ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ. ನೋಡಿದವರಿಂದ ಇದೊಂದು ಸಾಮಾಜಿಕ ಕಳಕಳಿಯ ಚಿತ್ರವೆಂದು ಪ್ರಶಂಸೆ ಸಿಕ್ಕಿದೆ.

Gym Ravi and Apoorva starrer Purushottama movie gets UA certificate from Censor Board

2 / 6
ಏಪ್ರಿಲ್ ಎರಡನೇ ವಾರದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ಈ ಚಿತ್ರದಲ್ಲಿ ನಾಯಕ ಜಿಮ್​ ರವಿ ಅವರದ್ದು ಲಾಯರ್ ಪಾತ್ರ. ಈ ಚಿತ್ರದ ‘ಸಂಸಾರ ಅಂದ್ಮಲೆ..’ ಹಾಡು ಯೂಟ್ಯೂಬ್​ನಲ್ಲಿ ಲಕ್ಷಾಂತರ ವೀವ್ಸ್​ ಪಡೆದುಕೊಂಡಿದೆ. ಟ್ರೇಲರ್​ಗೆ ಇದಕ್ಕಿಂತಲೂ ಉತ್ತಮ ರೆಸ್ಪಾನ್ಸ್​ ಸಿಗಲಿದೆ ಎಂಬುದು ಚಿತ್ರತಂಡದ ನಂಬಿಕೆ.

3 / 6
ಈ ಹಿಂದೆ ‘ದಿಲ್ದಾರ್​’ ಮತ್ತು ‘ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯ’ ಚಿತ್ರಗಳನ್ನು ನಿರ್ದೆಶನ ಮಾಡಿ ಅನುಭವ ಹೊಂದಿರುವ ಅಮರನಾಥ್ ಎಸ್.ವಿ. ಅವರು ‘ಪುರುಷೋತ್ತಮ’ ಸಿನಿಮಾಗೆ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಅಪೂರ್ವಾ ನಟಿಸಿದ್ದಾರೆ.

4 / 6
ಅಪೂರ್ವಾ, ಜಿಮ್​ ರವಿ ಮಾತ್ರವಲ್ಲದೇ ಎ.ವಿ. ಹರೀಶ್, ಮೈಸೂರು ಪಭು ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಡುಗಳಿಗೆ ಆನಂದ್ ಪ್ರಿಯಾ, ಪ್ರಮೋದ್‌ ಮರವಂತೆ ಹಾಗೂ ಅಮರನಾಥ್ ಎಸ್.ವಿ. ಸಾಹಿತ್ಯ ಬರೆದಿದ್ದು, ಶ್ರೀಧರ್‌ ವಿ. ಸಂಭ್ರಮ್ ಸಂಗೀತ ನಿರ್ದೇಶನ ಮಾಡಿದ್ದಾರೆ.

5 / 6
‘ಪುರುಷೋತ್ತಮ’ ಸಿನಿಮಾಗೆ ಕುಮಾರ್ ಎಂ. ಅವರು ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಕಲೈ ಮಾಸ್ಟರ್​ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೇ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಗುರಿ ಇರಿಸಿಕೊಳ್ಳಲಾಗಿದೆ.

6 / 6
ಸೈಕಲ್​ ಮೇಲೆ ಹೋಗುತ್ತಿದ್ದ ವಿದ್ಯಾರ್ಥಿ ಮೇಲೆ ಬೀದಿ ನಾಯಿ ದಾಳಿ

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು

ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್

ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು

ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್

ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು

ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ

ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು

ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ

ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್