Updated on: Apr 01, 2022 | 7:15 AM
Gym Ravi and Apoorva starrer Purushottama movie gets UA certificate from Censor Board
ಏಪ್ರಿಲ್ ಎರಡನೇ ವಾರದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಚಿತ್ರದಲ್ಲಿ ನಾಯಕ ಜಿಮ್ ರವಿ ಅವರದ್ದು ಲಾಯರ್ ಪಾತ್ರ. ಈ ಚಿತ್ರದ ‘ಸಂಸಾರ ಅಂದ್ಮಲೆ..’ ಹಾಡು ಯೂಟ್ಯೂಬ್ನಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಟ್ರೇಲರ್ಗೆ ಇದಕ್ಕಿಂತಲೂ ಉತ್ತಮ ರೆಸ್ಪಾನ್ಸ್ ಸಿಗಲಿದೆ ಎಂಬುದು ಚಿತ್ರತಂಡದ ನಂಬಿಕೆ.
ಈ ಹಿಂದೆ ‘ದಿಲ್ದಾರ್’ ಮತ್ತು ‘ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯ’ ಚಿತ್ರಗಳನ್ನು ನಿರ್ದೆಶನ ಮಾಡಿ ಅನುಭವ ಹೊಂದಿರುವ ಅಮರನಾಥ್ ಎಸ್.ವಿ. ಅವರು ‘ಪುರುಷೋತ್ತಮ’ ಸಿನಿಮಾಗೆ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಅಪೂರ್ವಾ ನಟಿಸಿದ್ದಾರೆ.
ಅಪೂರ್ವಾ, ಜಿಮ್ ರವಿ ಮಾತ್ರವಲ್ಲದೇ ಎ.ವಿ. ಹರೀಶ್, ಮೈಸೂರು ಪಭು ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಡುಗಳಿಗೆ ಆನಂದ್ ಪ್ರಿಯಾ, ಪ್ರಮೋದ್ ಮರವಂತೆ ಹಾಗೂ ಅಮರನಾಥ್ ಎಸ್.ವಿ. ಸಾಹಿತ್ಯ ಬರೆದಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ನಿರ್ದೇಶನ ಮಾಡಿದ್ದಾರೆ.
‘ಪುರುಷೋತ್ತಮ’ ಸಿನಿಮಾಗೆ ಕುಮಾರ್ ಎಂ. ಅವರು ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೇ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಗುರಿ ಇರಿಸಿಕೊಳ್ಳಲಾಗಿದೆ.