- Kannada News Photo gallery Harshika Poonacha And Bhuvan Ponnanna Blessed with baby girl Entertainment News In Kannada
Harshika Poonacha: ಗುಡ್ನ್ಯೂಸ್ ಕೊಟ್ಟ ಹರ್ಷಿಕಾ-ಭುವನ್; ಮಗುವಿನ ಆಗಮನ
ಹರ್ಷಿಕಾಗೆ ಜನಿಸಿರೋದು ಹೆಣ್ಣುಮಗು. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗು ಜನಿಸಿದೆ ಅನ್ನೋದು ಕುಟುಂಬದ ಖುಷಿ ಹೆಚ್ಚಿಸಿದೆ. ಮಗುವಿಗೆ ದುರ್ಗೆಯ ಹೆಸರನ್ನೇ ಇಡುತ್ತಾರಾ ಎನ್ನುವ ಕುತೂಹಲ ಇದೆ.
Updated on: Oct 04, 2024 | 9:43 AM

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮನೆಗೆ ಸೆಪ್ಟೆಂಬರ್ 3ರಂದು ಮಗುವಿನ ಆಗಮನ ಆಗಿದೆ. ಈ ಖುಷಿ ಸುದ್ದಿಯನ್ನು ದಂಪತಿ ರಿವೀಲ್ ಮಾಡಿದ್ದಾರೆ. ದಂಪತಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಮಗು-ತಾಯಿ ಇಬ್ಬರೂ ಆರೋಗ್ಯವಾಗಿ ಇದ್ದಾರೆ.

ಹರ್ಷಿಕಾಗೆ ಜನಿಸಿರೋದು ಹೆಣ್ಣುಮಗು. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗು ಜನಿಸಿದೆ ಅನ್ನೋದು ಕುಟುಂಬದ ಖುಷಿ ಹೆಚ್ಚಿಸಿದೆ. ಮಗುವಿಗೆ ದುರ್ಗೆಯ ಹೆಸರನ್ನೇ ಇಡುತ್ತಾರಾ ಎನ್ನುವ ಕುತೂಹಲ ಇದೆ.

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಇವರು ಕಳೆದ ವರ್ಷ ಆಗಸ್ಟ್ 24ರಂದು ವಿವಾಹ ಆಗಿದ್ದರು. ಒಂದು ವರ್ಷದ ಬಳಿಕ ಈ ದಂಪತಿ ಸಿಹಿ ಸುದ್ದಿ ನೀಡಿದ್ದಾರೆ.

ಹರ್ಷಿಕಾ ಹಾಗೂ ಭುವನ್ ಅವರದ್ದು ಪ್ರೇಮ ವಿವಾಹ. ಇಬ್ಬರ ಪರಿಚಯ ಆಗಿದ್ದು ಚಿತ್ರರಂಗದಲ್ಲೇ. ಇವರು ಹಲವು ವರ್ಷಗಳ ಕಾಲ ಪ್ರೀತಿಸಿ ಆ ಬಳಿಕ ಮದುವೆ ಆದರು. ಈಗ ದಂಪತಿ ಹಾಯಾಗಿ ಇದ್ದಾರೆ.

ಹರ್ಷಿಕಾ ಹಾಗೂ ಭುವನ್ ಇಬ್ಬರೂ ಕೊಡವ ಶೈಲಿಯಲ್ಲಿ ವಿವಾಹ ಆಗಿದ್ದರು. ಈಗ ದಂಪತಿ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಮಗುವಿನ ಮುಖವನ್ನು ರಿವೀಲ್ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ.