Updated on: Dec 31, 2022 | 10:28 PM
ರೂಪೇಶ್ ರಾಜಣ್ಣ ಅವರು ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಬಿಗ್ ಬಾಸ್ ಕಪ್ ಗೆಲ್ಲಬೇಕು ಎಂಬ ಅವರ ಕನಸು ಕನಸಾಗಿಯೇ ಉಳಿದಿದೆ.
ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರು ದೊಡ್ಮನೆಗೆ ಬಂದು ಸಾಕಷ್ಟು ಜನಪ್ರಿಯತೆ ಪಡೆದರು.
ಬಿಗ್ ಬಾಸ್ ಕಡೆಯಿಂದ ರೂಪೇಶ್ ರಾಜಣ್ಣಗೆ ಎರಡು ಚೆಕ್ ಸಿಕ್ಕಿದೆ. ಅವರಿಗೆ ಒಟ್ಟೂ 3 ಲಕ್ಷ ರೂಪಾಯಿ ಸಿಕ್ಕಿದೆ. ಈ ಚೆಕ್ನ ವೇದಿಕೆ ಮೇಲೆ ವಿತರಣೆ ಮಾಡಲಾಯಿತು.
ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರು ಈ ಮೊದಲು ಬಿಗ್ ಬಾಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ಆದರೂ ಬಿಗ್ ಬಾಸ್ಗೆ ಬಂದರು. ಬಂದ ನಂತರ ದೊಡ್ಮನೆ ಬಗೆಗಿನ ಅವರ ಅಭಿಪ್ರಾಯ ಬದಲಾಯಿತು.
ಆರಂಭದಲ್ಲಿ ಡಲ್ ಆಗಿದ್ದ ಅವರು ನಂತರ ಹೈಪರ್ ಆ್ಯಕ್ಟೀವ್ ಆದರು. ಪ್ರಶಾಂತ್ ಸಂಬರ್ಗಿ ಜತೆಗೆ ಅನೇಕ ಬಾರಿ ಅವರು ಜಗಳಕ್ಕೆ ಇಳಿದಿದ್ದೂ ಇದೆ.