AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ದಕ್ಷಿಣ ಭಾರತ ಚಿತ್ರರಂಗದ ಗಣ್ಯರ ಪಟ್ಟಿ

Dadasaheb Phalke Award: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ಭಾರತದಲ್ಲಿ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ. ಕೇಂದ್ರ ಸರ್ಕಾರ ನೀಡುವ ಈ ಪ್ರಶಸ್ತಿಯನ್ನು ಈ ವರೆಗೆ 55 ಮಂದಿ ಪಡೆದುಕೊಂಡಿದ್ದಾರೆ. ಇದೀಗ 2023ರ ಫಾಲ್ಕೆ ಪ್ರಶಸ್ತಿಯನ್ನು ಮೋಹನ್​ಲಾಲ್ ಅವರಿಗೆ ನೀಡುವುದಾಗಿ ಘೋಷಿಸಲಾಗಿದೆ. ದಕ್ಷಿಣ ಭಾರತದ ಎಷ್ಟು ಮಂದಿ ಮಹನೀಯರಿಗೆ ಈ ಪ್ರಶಸ್ತಿ ಬಂದಿದೆ? ಇಲ್ಲಿದೆ ನೋಡಿ ಪಟ್ಟಿ...

ಮಂಜುನಾಥ ಸಿ.
|

Updated on: Sep 20, 2025 | 8:18 PM

Share
ತೆಲುಗು ಸಿನಿಮಾ ರಂಗದ ಪ್ರಾರಂಭಿಕರಲ್ಲಿ ಒಬ್ಬರಾದ ಬಿನ್ ರೆಡ್ಡಿ ಅವರಿಗೆ 1974 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯ್ತು. ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಮೊದಲ ದಕ್ಷಿಣ ಭಾರತದ ಚಿತ್ರಕರ್ಮಿ ಇವರು. ತೆಲುಗು ಚಿತ್ರರಂಗಕ್ಕೆ ಇವರ ಸೇವೆ ಅಪಾರ.

Bn Reddy

1 / 12
ಮೂಲತಃ ಆಂಧ್ರ ಪ್ರದೇಶದವರಾದ ಎಲ್​​ವಿ ಪ್ರಸಾದ್ ಅವರು ಕೆಲಸ ಮಾಡದ ಭಾಷೆ ಇಲ್ಲ. ಭಾರತದ ಮೊದಲ ಟಾಕಿ ಚಿತ್ರದಲ್ಲಿ ನಟರಾಗಿದ್ದ ಪ್ರಸಾದ್ ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಎಲ್ಲ ಚಿತ್ರರಂಗದಲ್ಲಿಯೂ ಕೆಲಸ ಮಾಡಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕರಾಗಿ ಅವರ ಸೇವೆ ಅಪಾರ. ಇವರಿಗೆ 1982 ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ.

2 / 12
ನಿರ್ಮಾಪಕರಾಗಿ ತೆಲುಗು ಚಿತ್ರರಂಗಕ್ಕೆ ಅತ್ಯದ್ಭುತ ಸಿನಿಮಾಗಳನ್ನು ನೀಡಿರುವ ಬಿ ನಾಗಿ ರೆಡ್ಡಿ ಅವರಿಗೆ 1986 ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಲಾಯ್ತು. ಇವರು ಏಷ್ಯಾದಲ್ಲಿ ದೊಡ್ಡದಾದ ವಿಜಯ ವಾಹಿನಿ ಸ್ಟುಡಿಯೋ ನಿರ್ಮಾಣ ಮಾಡಿದ್ದರು.

3 / 12
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ, ಅಕ್ಕಿನೇನಿ ನಾಗೇಶ್ವರ ರಾವ್ ಅವರಿಗೆ 1990 ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಲಾಯ್ತು. ನಾಗೇಶ್ವರ ರಾವ್ ಅವರು ತೆಲುಗು ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಎನ್ನಬಹುದು.

4 / 12
ಕನ್ನಡ ಚಿತ್ರರಂಗದ ಮೇರು ನಟ, ಬಂಗಾರದ ಮನುಷ್ಯ ಡಾ ರಾಜ್​​ಕುಮಾರ್ ಅವರಿಗೆ 1995 ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಲಾಯ್ತು. ರಾಜ್​​ಕುಮಾರ್ ಅವರು ಚಿತ್ರರಂಗಕ್ಕೆ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯ್ತು.

5 / 12
ತಮಿಳು ಚಿತ್ರರಂಗದ ಖ್ಯಾತ ನಟ, ರಾಜಕಾರಣಿಯೂ ಆಗಿದ್ದ ಶಿವಾಜಿ ಗಣೇಶನ್ ಅವರಿಗೆ 1996 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯ್ತು.

6 / 12
ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ 2004 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯ್ತು. ಅಡೂರು ಅವರು ಹಲವು ಅತ್ಯುತ್ತಮ ಕಲಾತ್ಮಕ, ವಿಚಾರಾತ್ಮಕ ಸಿನಿಮಾಗಳನ್ನು ನೀಡಿದ್ದಾರೆ.

7 / 12
ಒಂಬತ್ತು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಿರುವ ರಾಮಾನಾಯ್ಡು, ಭಾರತದ ಅತ್ಯಂತ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರು. ಸ್ಟುಡಿಯೋ ಸಹ ನಿರ್ಮಾಣ ಮಾಡಿರುವ ರಾಮಾನಾಯ್ಡು ಅವರಿಗೆ 2009 ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಲಾಯ್ತು.

8 / 12
ರಜನೀಕಾಂತ್ ಅವರಿಗೆ ಅವಕಾಶ ಕೊಟ್ಟ ನಿರ್ದೇಶಕ ಮಾತ್ರವಲ್ಲದೆ ತಮಿಳು ಮತ್ತು ಇನ್ನೂ ಕೆಲವು ಭಾಷೆಗಳಲ್ಲಿ ಹಲವು ಅತ್ಯದ್ಭುತ ಸಿನಿಮಾಗಳನ್ನು ನಿರ್ದೇಶಿಸಿರುವ ಕೆ ಬಾಲಚಂದರ್ ಅವರಿಗೆ 2010 ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಲಾಯ್ತು.

9 / 12
‘ಶಂಕರಾಭರಣಂ’, ‘ಸಾಗರ ಸಂಗಮಂ’, ‘ಸ್ವಾತಿಮುತ್ಯಂ’, ‘ಸ್ವಯಂ ಕೃಷಿ’, ‘ಸಿರಿವೆನ್ನೆಲ’, ‘ಶುಭಲೇಖ’, ‘ಸರಗಂ’ ಇನ್ನೂ ಹಲವಾರು ಅತ್ಯುತ್ತಮ ಸಿನಿಮಾಗಳ ನಿರ್ದೇಶಕ ಮತ್ತು ನಟ ಕೆ ವಿಶ್ವನಾಥ್ ಅವರಿಗೆ 2016 ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಲಾಯ್ತು. ಇವರೂ ತೆಲುಗಿನವರೂ.

10 / 12
ತಮಿಳಿನ ಸೂಪರ್ ಸ್ಟಾರ್ ನಟ ರಜನೀಕಾಂತ್ ಅವರಿಗೆ 2019 ರಲ್ಲಿ ಫಾಲ್ಕೆ ಪ್ರಶಸ್ತಿ ನೀಡಲಾಯ್ತು. ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿರುವ ಅಪಾರ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಯ್ತು.

11 / 12
ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟ ಮೋಹನ್​​ಲಾಲ್ ಅವರಿಗೆ 2023ನೇ ಸಾಲಿನ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ತಿಂಗಳು ಅವರಿಗೆ ಫಾಲ್ಕೆ ಪ್ರಶಸ್ತಿ ನೀಡಲಾಗುತ್ತದೆ.

12 / 12