ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಇಲ್ಲಿದೆ ಪಟ್ಟಿ
Movies on OTT this week: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಈ ವಾರ ಪರಭಾಷೆಯ ಕೆಲವು ಸಿನಿಮಾಗಳು ಸಹ ಬಿಡುಗಡೆ ಆಗಿವೆ. ದೀಪಾವಳಿ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಕೆಲವಾರು ಸಿನಿಮಾಗಳು ಬಿಡುಗಡೆ ಆಗಿವೆ. ಅದರಂತೆ ಒಟಿಟಿಯಲ್ಲಿಯೂ ಸಹ ದೀಪಾವಳಿ ಪ್ರಯುಕ್ತ ಕೆಲವು ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಈ ವಾರ ಒಟಿಟಿಗೆ ಬಂದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...
Updated on: Oct 18, 2025 | 5:04 PM

Andondithu Kaalaವಿನಯ್ ರಾಜ್ಕುಮಾರ್ ಮತ್ತು ಅದಿತಿ ಪ್ರಭುದೇವ ನಟಿಸಿರುವ ‘ಅಂದೊಂದಿತ್ತು ಕಾಲ’ ಸಿನಿಮಾ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಗಮನ ಸೆಳೆಯಿತು. ಹೆಸರಿನಂತೆ ಕೆಲ ದಶಕಗಳ ಹಿಂದಿನ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು.

ಕನ್ನಡದ ನಿರ್ದೇಶಕ ಎ ಹರ್ಷ ನಿರ್ದೇಶನ ಮಾಡಿರುವ ಮೊದಲ ಹಿಂದಿ ಸಿನಿಮಾ ‘ಭಾಗಿ 4’ ಚಿತ್ರಮಂದಿರಗಳಲ್ಲಿ ಸಾಧಾರಣ ಪ್ರದರ್ಶನ ಕಂಡಿತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಈ ಸಿನಿಮಾ ಈ ವಾರ ಸ್ಟ್ರೀಮಿಂಗ್ ಆರಂಭಿಸಿದೆ.

ಇತ್ತೀಚೆಗೆ ತೆರೆಕಂಡ ಕನ್ನಡ ಸಿನಿಮಾಗಳಲ್ಲಿ ಒಂದು ಒಳ್ಳೆಯ ಸಿನಿಮಾ ಎಂದರೆ ‘ಏಳುಮಲೆ’. ತರುಣ್ ಸುಧೀರ್ ನಿರ್ಮಾಣ ಮಾಡಿ ಪುನೀತ್ ರಂಗಸ್ವಾಮಿ ನಿರ್ದೇಶಿಸಿರುವ ಸಿನಿಮಾನಲ್ಲಿ ರಾಣಾ ನಾಯಕ. ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಯ್ತು. ಇದೀಗ ಸಿನಿಮಾ ಜೀ 5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಕೆಲ ತಿಂಗಳ ಹಿಂದೆ ಬಿಡುಗಡೆ ಆದ ‘ಫೈನಲ್ ಡೆಸ್ಟಿನೇಷನ್: ಬ್ಲಡ್ಲೈನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ಫೈನಲ್ ಡೆಸ್ಟಿನೇಷನ್: ಬ್ಲಡ್ಲೈನ್’ ಸಿನಿಮಾ ಜಿಯೋ ಹಾಟ್ಸ್ಟಾರ್ ಒಟಿಟಿಗೆ ಬಂದಿದೆ.

ತೆಲುಗಿನ ‘ಕಿಷ್ಕಿಂಧಾಪುರಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡಿದೆ. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್, ಅನುಪಮಾ ಪರಮೇಶ್ವರನ್ ಅವರುಗಳು ನಟಿಸಿರುವ ಈ ಸಿನಿಮಾ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಸಿನಿಮಾ ಇದೀಗ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಹೊಸದಾಗಿ ಮದುವೆ ಆಗಿರುವ ಸವದೇವನ್ ಎಂಬಾತ ಪತ್ನಿ ಹಾಕಿರುವ ಸುಳ್ಳು ದೌರ್ಜನ್ಯ ಮತ್ತು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಾನೆ. ಅದರಿಂದ ಆತ ಹೇಗೆ ಹೊರಗೆ ಬರುತ್ತಾನೆ ಎಂಬುದು ಸಿನಿಮಾದ ಕತೆ. ಈ ಸಿನಿಮಾ ಈಗ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ವಿದೇಶದಿಂದ ಆಸ್ಕರ್ಗೆ ಕಳಿಸಲ್ಪಟ್ಟಿರುವ ಭಾರತದ ಸಿನಿಮಾ ‘ಸಂತೋಷ್’. ವಿಧವೆ ಯುವತಿಯೊಬ್ಬಾಕೆ ಪತಿಯ ಪೊಲೀಸ್ ಉದ್ಯೋಗವನ್ನು ಪಡೆದುಕೊಂಡು ದಲಿತ ಯುವತಿಯ ಹತ್ಯೆ ಪ್ರಕರಣದ ತನಿಖೆಗೆ ಇಳಿಯುತ್ತಾಳೆ. ಇದೊಂದು ಅದ್ಭುತ ಸಿನಿಮಾ ಆಗಿದ್ದು ಸಿನಿಮಾ ಅನ್ನು ಲಯನ್ಸ್ಗೇಟ್ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




