ಹೊಸದಾಗಿ ಕಿವಿಗೆ ಆಭರಣ ಚುಚ್ಚಿಸಿಕೊಂಡಾಗ ಆಗುವ ನೋವು ನಿವಾರಿಸಲು ಹೀಗೆ ಮಾಡಿ
ಕಿವಿ ಅಂದವಾಗಿ ಕಾಣಲು, ವಿವಿಧ ರೀತಿಯ ಆಭರಣಗಳನ್ನು ಧರಿಸಲು ಮಹಿಳೆಯರು ಕಿವಿಯನ್ನು ಚುಚ್ಚಿಸುತ್ತಾರೆ. ಇದು ಹಲವು ದಿನಗಳ ಕಾಲ ನೋವನ್ನು ನೀಡುತ್ತದೆ. ಅದನ್ನು ನಿವಾರಿಸಲು ಈ ಟಿಪ್ಸ್ಗಳನ್ನು ಅನುಸರಿಸಿ. ಇಲ್ಲಿರುವ ಮಾಹಿತಿ ಹಾಗೂ ಫೋಟೋಗಳನ್ನು ಹಿಂದೂಸ್ತಾನ್ ಟೈಮ್ಸ್ ವರದಿಯನ್ನು ಆಧರಿಸಿ ತೆಗೆದುಕೊಳ್ಳಲಾಗಿದೆ.
ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದ ನೀರನ್ನು ಸೇವಿಸಿ. ಇದು ನೀವು ಹೊಸದಾಗಿ ಕಿವಿ ಚುಚ್ಚಿಸಿಕೊಂಡಿದ್ದರ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
1 / 6
ಹೊಸದಾಗಿ ಕಿವಿ ಚುಚ್ಚಿಸಿಕೊಡಾಗ ಅಗಾಧ ನೋವು ಇರುತ್ತದೆ. ಅದನ್ನು ಹೋಗಲಾಡಿಸಲು ಆರೋಗ್ಯಕರವಾದ ಆಹಾರ ತಿನ್ನಬೇಕು. ಜತೆಗೆ ನೋವು ಬೇಗ ವಾಸಿಯಾಗಲು ಕಬ್ಬಿಣ, ವಿಟಮಿನ್ ಬಿ, ವಿಟಮಿನ್ ಸಿ ಪೂರಕ ಆಹಾರವನ್ನು ತೆಗೆದುಕೊಳ್ಳಿ.
2 / 6
ಕಿವಿ ಚುಚ್ಚಿದ ಮೇಲೆ ಆ ಜಾಗದಲ್ಲಿ ಸ್ರವಿಸುವಿಕೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಿ.
3 / 6
ಚರ್ಮ ಒಣಗಿರುವಾಗ ನಿಮ್ಮ ಆಭರಣವನ್ನು ತೆಗೆಯಬೇಡಿ. ಅದು ನೊವುಂಟು ಮಾಡಬಹುದು. ಆಭರಣವಿರುವ ಜಾಗವನ್ನು ಸ್ವಲ್ಪ ಒದ್ದೆ ಮಾಡಿಕೊಂಡು ನಿಧಾನವಾಗಿ ತೆರೆಯಿರಿ.
4 / 6
ತಲೆಸ್ನಾನ ಮಾಡುವಾಗ ಎಚ್ಚರಿಕೆವಹಿಸಿ. ಹೆಚ್ಚು ವಾಸನೆಯಿರುವ ಸೋಪ್ನ ಬಳಕೆ ಬೇಡ. ಕೂದಲಿನ ಸ್ನಾನದ ಬಳಿಕ ಆಭರಣಗಳಿರುವ ಜಾಗವನ್ನು ನೀರಿನಿಂದ ಸ್ವಚ್ಛಗೊಳಿಸಿ.
5 / 6
ನಿಮ್ಮ ಆಭರಣಗಳನ್ನು ಉಪ್ಪು ನೀರಿನಲ್ಲಿ ಸ್ವಚ್ಚಗೊಳಿಸಿ. ಇದರಿಂದ ಬ್ಯಾಕ್ಟೀರಿಯಾಗಳಿದ್ದರೆ ಸ್ವಚ್ಚವಾಗುತ್ತದೆ. ನಿಮ್ಮ ಕಿವಿಯಲ್ಲಿ ಆಭರಣ ಧರಿಸಿದ ವೇಳೆ ನೋವು ಕಾಣಿಸಕೊಳ್ಳುವುದಿಲ್ಲ.